ಶಿಯೋಮಿ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಡೇಟ್ ಫಿಕ್ಸ್‌!

|

ಶಿಯೋಮಿ ಕಂಪನಿಯ ಬಹುನಿರೀಕ್ಷಿತ 'ಮಿ 4 ಸ್ಮಾರ್ಟ್‌ಬ್ಯಾಂಡ್‌' ಈಗಾಗಲೇ ತನ್ನ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಸಖತ ಸೌಂಡ್‌ ಮಾಡುತ್ತಿದ್ದು, ಬಿಡುಗಡೆಯ ದಿನಾಂಕವನ್ನು ಗ್ರಾಹಕರು ಎದುರುನೋಡುತ್ತಿದ್ದಾರೆ. ಇದೀಗ ಗ್ರಾಹಕರಿಗೆ ಕಂಪನಿಯು ಖುಷಿ ಸುದ್ದಿಯನ್ನು ನೀಡಿದ್ದು, ತನ್ನ ಮಿ 4 ಸ್ಮಾರ್ಟ್‌ಬ್ಯಾಂಡ್‌ ರಿಲೀಸ್‌ ಮಾಡಲು ಮೂಹೂರ್ತ್‌ ಫಿಕ್ಸ್‌ ಮಾಡಿಕೊಂಡಿದೆ.

ಶಿಯೋಮಿ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಡೇಟ್ ಫಿಕ್ಸ್‌!

ಹೌದು, ಶಿಯೋಮಿ ಸಂಸ್ಥೆಯು 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಇದೇ ಜೂನ್‌ 11 ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಡೇಟ್‌ ಫಿಕ್ಸ್‌ ಮಾಡಿಕೊಂಡಿದ್ದು, ಈ ಸುದ್ದಿಯನ್ನು ಕಂಪನಿಯು ಅಧಿಕೃತವಾಗಿ ಚೀನಾದ Weibo, ತಾಣದಲ್ಲಿ ತಿಳಿಸಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ ಕಲರ್‌ ಮತ್ತು ಮೊನೊಕ್ರೋಮ್‌ ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

ಶಿಯೋಮಿ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಡೇಟ್ ಫಿಕ್ಸ್‌!

'ಮಿ 4' ಸ್ಮಾರ್ಟ್‌ಬ್ಯಾಂಡ್‌' ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತಿದ್ದು, ಡಿವೈಸ್‌ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಹೊಂದಿರಲಿದೆ. ಹಾಗೆಯೇ ಇತ್ತೀಚಿನ ನೂತನ ಬ್ಲೂಟೂತ್‌ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿರಲಿದೆ ಎನ್ನುವ ಮಾಹಿತಿಗಳಿವೆ. ಹಾಗಾದರೇ ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ ಒಳಗೊಂಡಿರಬಹುದಾದ ವಿಶೇಷ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಓದಿರಿ : 'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ? ಓದಿರಿ : 'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ?

ಪಕ್ಕಾ ಫಿಟ್‌ನೆಸ್‌ ಡಿವೈಸ್

ಪಕ್ಕಾ ಫಿಟ್‌ನೆಸ್‌ ಡಿವೈಸ್

ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ 'ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆಯನ್ನು ಒಳಗೊಂಡಿದ್ದು, ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊ ಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದೆ. ಇದು ಬಳಕೆದಾರರ ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಗ್ರಾಹಕರಿಗೆ ಮಾಹಿತಿಯನ್ನು ನೀಡಲಿದೆ. ಇದೊಂದು ಪಕ್ಕಾ ಫಿಟ್‌ನೆಸ್‌ ಡಿವೈಸ್‌ ಆಗಲಿದೆ.

ಡಿಸ್‌ಪ್ಲೇ ಮತ್ತು ಬ್ಲೂಟೂತ್‌

ಡಿಸ್‌ಪ್ಲೇ ಮತ್ತು ಬ್ಲೂಟೂತ್‌

ಸದ್ಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ ಡಿಸ್‌ಪ್ಲೇಯು ಭಾರಿ ಸುದ್ದಿ ಮಾಡಿದ್ದು, ಇದು ಪೂರ್ಣ OLED ಕಲರ್‌ ಮಾದರಿಯಲ್ಲಿರಲಿದೆ ಎನ್ನುವ ಅಂಶವನ್ನು ಲೀಕ್‌ ಇಮೇಜ್‌ಗಳು ತೋರಿಸಿಕೊಟ್ಟಿವೆ. ಇನ್ನು ಇದರೊಂದಿಗೆ ಬ್ಲೂಟೂತ್‌ ಸಂಪರ್ಕವು ಲೆಟೆಸ್ಟ್‌ ಅಪ್‌ಡೇಟ್‌ ವರ್ಷನ್‌ನಲ್ಲಿರಲಿದ್ದು, ಬ್ಲೂಟೂತ್ 5 ಸಾಮರ್ಥ್ಯವನ್ನು ಪಡೆದಿರಲಿದೆ ಮತ್ತು ಕನೆಕ್ಟಿವಿಟಿ ಉತ್ತಮವಾಗಿರಲಿದೆ.

ಓದಿರಿ : ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!ಓದಿರಿ : ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!

ಎರಡು ವೇರಿಯಂಟ್‌ಗಳು

ಎರಡು ವೇರಿಯಂಟ್‌ಗಳು

ಶಿಯೋಮಿ ಬಿಡುಗಡೆ ಮಾಡಲಿರುವ 'ಮಿ 4 ಸ್ಮಾರ್ಟ್‌ಬ್ಯಾಂಡ್‌', ಹೊಸತನದ 'ಎನ್‌ಎಫ್‌ಸಿ' ಮತ್ತು 'ನಾನ್‌-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗುತ್ತಿದೆ. ಅವುಗಳಲ್ಲಿ ಎನ್‌ಎಫ್‌ಸಿ ವರ್ಷನ್‌ ಮಾದರಿಯ ಸ್ಮಾರ್ಟ್‌ಬ್ಯಾಂಡ್‌ ಮಾಡೆಲ್‌ ನಂಬರ್‌ XMSH08HM ಆಗಿರಲಿದೆ ಮತ್ತು ನಾನ್‌-ಎನ್‌ಎಫ್‌ಸಿ ಡಿವೈಸ್‌ ಮಾಡೆಲ್‌ ನಂಬರ್ XMSH07HM ಆಗಿರಲಿದೆ.

ಶಕ್ತಿಯುತ ಬ್ಯಾಟರಿ

ಶಕ್ತಿಯುತ ಬ್ಯಾಟರಿ

ಈ ಡಿವೈಸ್‌ 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಈಗಾಗಲೇ ಲೀಕ್‌ ಮಾಹಿತಿಗಳಿಂದ ತಿಳಿದಿದ್ದು, ಸಂಸ್ಥೆಯ ಈ ಹಿಂದಿನ 'ಮಿ 3' ಸ್ಮಾರ್ಟ್‌ಬ್ಯಾಂಡ್‌ 110mAh ಬ್ಯಾಟರಿ ಪವರ್‌ ಅನ್ನು ಹೊಂದಿತ್ತು. ಈಗ ಹೊಸ 'ಮಿ 4' ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಹೆಚ್ಚಿನ ಬ್ಯಾಟರಿ ಶಕ್ತಿ ಒದಗಿಸುವ ನಿರೀಕ್ಷೆಗಳಿವೆ. ಉತ್ತಮ ಚಾರ್ಜರ್‌ ಸೌಲಭ್ಯ ಇರಲಿದೆ.

ಸ್ಪರ್ಧಾತ್ಮಕ ಬೆಲೆ

ಸ್ಪರ್ಧಾತ್ಮಕ ಬೆಲೆ

ಶಿಯೋಮಿಯ 'ಮಿ 4 ಸ್ಮಾರ್ಟ್‌ಬ್ಯಾಂಡ್‌' ಎರಡು ವರ್ಷನ್‌ ಮಾದರಿಗಳನ್ನು ಹೊಂದಿದ್ದು, ಚೀನಾದಲ್ಲಿ ಇದೇ ಜೂನ್ 11 ರಂದು ರಿಲೀಸ್‌ ಆಗಲಿದೆ. ಎನ್‌ಎಫ್‌ಸಿ ವರ್ಷನ್‌ ಮಾದರಿಯ ಬೆಲೆಯು 5,040ರೂ.ಗಳು ಆಗಿರಲಿದೆ ಮತ್ತು ನಾನ್‌-ಎನ್‌ಎಫ್‌ಸಿ' ವರ್ಷನ್‌ ಮಾದರಿಯ ಬೆಲೆಯು 2,000 - Rs 3,000ರೂ.ಗಳ ನಡುವಿನ ಅಂತರದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ? ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

Best Mobiles in India

English summary
Xiaomi officially announced that it would launch the Mi Band 4 on 11 June at an event in China. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X