ಶಿಯೋಮಿಯಿಂದ ಹೊಸ 'ಮಿ ಹೆಲ್ತ್' ಆಪ್‌ ಪರಿಚಯ!.ವಿಶೇಷತೆ ಏನು ಗೊತ್ತಾ?

|

ಟೆಕ್‌ ಮಾರುಕಟ್ಟೆಯಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿಯು, ಈಗಾಗಲೇ ಗ್ಯಾಜೆಟ್‌ ಉತ್ಪನ್ನಗಳೊಂದಿಗೆ, ಫ್ಯಾಶನ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಲ್ಲದೇ ಹೆಲ್ತ್ ಹಾಗೂ ಫಿಟ್ನೆಸ್‌ ಕುರಿತಾಗಿ ಕಂಪನಿಯು 'ಮಿ ಫಿಟ್‌' ಅಪ್ಲಿಕೇಶನ್ ತಯಾರಿಸಿ ಫಿಟ್ನೆಸ್‌ ಪ್ರಿಯರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಮುಂದುವರೆದಿರುವ ಕಂಪನಿಯು ಮತ್ತೊಂದು ಆಪ್‌ ನೀಡಿದೆ.

ಶಿಯೋಮಿಯಿಂದ ಹೊಸ 'ಮಿ ಹೆಲ್ತ್' ಆಪ್‌ ಪರಿಚಯ!.ವಿಶೇಷತೆ ಏನು ಗೊತ್ತಾ?

ಹೌದು, ಶಿಯೋಮಿ ಕಂಪನಿಯು ಇದೀಗ ಹೊಸದಾಗಿ 'ಮಿ ಹೆಲ್ತ್' ಆಪ್‌ ಅಭಿವೃದ್ಧಿ ಪಡಿಸಿದ್ದು, ಚೀನಾದಲ್ಲಿ ಪರಿಚಯಿಸಿದೆ. ಈ ಆಪ್‌ ಬಳಕೆದಾರರ ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್‌ ಮಾಡುವ ಸೌಲಭ್ಯಗಳನ್ನು ಒಳಗೊಂಡಿದೆ. ಈ ಕುರಿತು ಚೀನಾದ XDA ಡೆವಲಪರ್ಸ್‌ಗಳು ಸ್ಕ್ರೀನ್‌ಶಾಟ್‌ಗಳನ್ನು ಶೇರ್‌ ಮಾಡಿದ್ದು, ಬ್ಯಾಕ್‌ಗ್ರೌಂಡ್‌ನಲ್ಲಿ ಸ್ಟೆಪ್ ಕೌಂಟ್‌, ನಿದ್ರಿಸುವ ಸಮಯ ಸೇರಿದಂತೆ BMI (ಬಾಡಿ ಮಾಸ್‌ ಇನ್‌ಡೆಕ್ಸ್) ದಾಖಲಿಸಲಿದೆ.

ಶಿಯೋಮಿಯಿಂದ ಹೊಸ 'ಮಿ ಹೆಲ್ತ್' ಆಪ್‌ ಪರಿಚಯ!.ವಿಶೇಷತೆ ಏನು ಗೊತ್ತಾ?

ಈಗಾಗಲೇ ಶಿಯೋಮಿಯು ಮಿ ಫಿಟ್‌ ಆಪ್‌ ಹೊಂದಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಇದರೊಂದಿಗೆ ಈಗ ಮಿ ಹೆಲ್ತ್ ಆಪ್‌ವೊಂದನ್ನು ತಯಾರಿಸಿದೆ. ಈ ಆಪ್ ಆರೆಂಜ್‌ ಬಣ್ಣದ ಬಾಕ್ಸ್‌ನಲ್ಲಿ ಬ್ಯಾಂಡೆಜ್‌ ಚಿತ್ರವಿರುವ ಐಕಾನ್‌ ಹೊಂದಿದ್ದು, ಹೋಮ್‌ ಪೇಜ್‌ನಲ್ಲಿ ದೈನಂದಿನ ಸ್ಟೆಪ್‌ ಕೌಂಟ್, ಪ್ರೆಸೆಂಟ್ ಗೋಲ್ ಕಾಣಿಸಲಿದೆ. ಹಾಗೆಯೇ ಇದರಲ್ಲಿ ಬಳಕೆದಾರರ ವಾರದ ಮತ್ತು ತಿಂಗಳ ಹೆಲ್ತ್ ಡೇಟಾ ವರದಿ ಸಹ ಲಭ್ಯವಾಗಲಿದೆ.

ಶಿಯೋಮಿಯಿಂದ ಹೊಸ 'ಮಿ ಹೆಲ್ತ್' ಆಪ್‌ ಪರಿಚಯ!.ವಿಶೇಷತೆ ಏನು ಗೊತ್ತಾ?

ಶಿಯೋಮಿಯ MIUI ಡೆವಲಪರ್ 9.7.23 ಅಪ್‌ಡೇಟ್‌ನ ಹೊಸ 'ಮಿ ಹೆಲ್ತ್' ಆಪ್‌ ದೈನಂದಿನ ಆಕ್ಟಿವಿಟಿಗಳ ಕುರಿತು ವಿಶ್ಯುವಲ್ ಇಂಡಿಕೇಟರ್ ನೀಡಲಿದೆ. ಫೋನ್‌ ಸೆನ್ಸಾರ್‌ ಮೂಲಕ ಫಿಟ್ನೆಸ್‌ ಮಾಹಿತಿ ಒದಗಿಸಲಿದೆ. ಈ ಆಪ್‌ ಸದ್ಯದಲ್ಲಿಯೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಆ ನಂತರವಷ್ಟೇ ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರ ಡೌನ್‌ಲೋಡಗೆ ದೊರೆಯಲಿದೆ ಎನ್ನಲಾಗಿದೆ.

ಓದಿರಿ : ಮತ್ತೊಮ್ಮೆ ಬೆಲೆ ಇಳಿಕೆ ಕಂಡ 'ಆಸೂಸ್‌ 5Z' ಸ್ಮಾರ್ಟ್‌ಫೋನ್‌! ಓದಿರಿ : ಮತ್ತೊಮ್ಮೆ ಬೆಲೆ ಇಳಿಕೆ ಕಂಡ 'ಆಸೂಸ್‌ 5Z' ಸ್ಮಾರ್ಟ್‌ಫೋನ್‌!

ಕಂಪನಿಯ 'ಮಿ ಫಿಟ್‌' ಆಪ್‌ ದೈನಂದಿನ ಚಟುವಟುಕೆಗಳನ್ನು ಟ್ರಾಕ್‌ ಮಾಡುವ ಸೌಲಭ್ಯವನ್ನು ಹೊಂದಿದ್ದು, ಜೊತೆಗೆ ಸ್ಲಿಪ್‌ ಅನಾಲಿಸಿಸ್ ಮತ್ತು ವರ್ಕೌಟ್‌ಗಳನ್ನು ಸಹ ಮಾನಿಟರ್ ಮಾಡಲಿದೆ. ಈ ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದ್ದು, ಆಂಡ್ರಾಯ್ಡ್‌ 4.4 ಓಎಸ್‌ ವರ್ಷನ್ ಮತ್ತು ಅದಕ್ಕೂ ಮೇಲ್ಪಟ್ಟ ಆಂಡ್ರಾಯ್ಡ್‌ ಓಎಸ್‌ ವರ್ಷನ್‌ಗಳಿಗೆ ಬೆಂಬಲಿಸಲಿದೆ.

ಓದಿರಿ : ವಾಟ್ಸಪ್‌ ಸ್ಟೇಟಸ್‌ ಸೇವ್‌ ಮಾಡುವುದು ಸುಲಭ!..ಹೇಗೆ ಅಂತೀರಾ? ಓದಿರಿ : ವಾಟ್ಸಪ್‌ ಸ್ಟೇಟಸ್‌ ಸೇವ್‌ ಮಾಡುವುದು ಸುಲಭ!..ಹೇಗೆ ಅಂತೀರಾ?

Best Mobiles in India

English summary
Mi Health is capable of tracking your daily activity and show the tracked data on your phone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X