Home
ಸುದ್ದಿಜಾಲ

ಪ್ರೇಮಿಗಳ ದಿನದ ಪ್ರಯುಕ್ತ ಶಿಯೋಮಿ ಉತ್ಪನ್ನಗಳಿಗೆ ಬೊಂಬಾಟ್ ರಿಯಾಯಿತಿ!

ಪ್ರೇಮಿಗಳ ದಿನದ ಅಂಗವಾಗಿ ಇ ಕಾಮರ್ಸ್‌ ವೆಬ್‌ಸೈಟ್‌ಗಳು ಹಾಗೂ ಕೆಲವು ಮೊಬೈಲ್‌ ಸಂಸ್ಥೆಗಳು ಫೋನ್‌ಗಳಿಗೆ ವಿಶೇಷ ರಿಯಾಯಿತಿ ನೀಡುತ್ತವೆ. ಇದೀಗ ಜನಪ್ರಿಯ ಶಿಯೋಮಿ ಕಂಪನಿಯು 'ವ್ಯಾಲೆಂಟೈನ್ ಮತ್ತು ಮಿ ಸೇಲ್' (Valentine and Mi Sale) ಪ್ರಾರಂಭವಾಗಿದೆ. ಈ ವಿಶೇಷ ಮಾರಾಟ ಮೇಳವು ಶಿಯೋಮಿ ಕಂಪನಿಯ ಅಧಿಕೃತ ವೆಬ್‌ಸೈಟ್ mi.com ನಲ್ಲಿ ಲೈವ್ ಆಗಿದೆ. ಈ ಸೇಲ್ ಇದೇ ಫೆಬ್ರವರಿ 15 ರವರೆಗೆ ಮುಂದುವರಿಯುತ್ತದೆ.

ಪ್ರೇಮಿಗಳ ದಿನದ ಪ್ರಯುಕ್ತ ಶಿಯೋಮಿ ಉತ್ಪನ್ನಗಳಿಗೆ ಬೊಂಬಾಟ್ ರಿಯಾಯಿತಿ!

ವ್ಯಾಲೆಂಟೈನ್ ಡೇ ಪ್ರಯುಕ್ತ ಶಿಯೋಮಿ ಪ್ರಾರಂಭಿಸಿರುವ ಈ ಸೇಲ್ ನಲ್ಲಿ, ಕಂಪನಿಯು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವೇರೆಬಲ್ ಡಿವೈಸ್‌ಗಳು ಮತ್ತು ಸ್ಮಾರ್ಟ್ ಟಿವಿಗಳು ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿ ನೀಡುತ್ತದೆ. ಇದರೊಂದಿಗೆ ಸಿಟಿ ಕಾರ್ಡ್‌ಗಳು ಮತ್ತು ಕ್ರೆಡಿಟ್ ಇಎಮ್‌ಐ ಗಳ ಮೂಲಕ ಖರೀದಿಗಳ ಮೇಲೆ 5,000ರೂ. ವರೆಗೆ ತ್ವರಿತ ರಿಯಾಯಿತಿಯನ್ನು ಒದಗಿಸುತ್ತಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸುವವರು 10 ಪ್ರತಿಶತದಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಸೇಲ್‌ನಲ್ಲಿ ಆಫರ್‌ನಲ್ಲಿ ಲಭ್ಯವಾಗುವ ಕೆಲವು ಪ್ರಮುಖ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪ್ರೇಮಿಗಳ ದಿನದ ಪ್ರಯುಕ್ತ ಶಿಯೋಮಿ ಉತ್ಪನ್ನಗಳಿಗೆ ಬೊಂಬಾಟ್ ರಿಯಾಯಿತಿ!

ಇತ್ತೀಚಿನ ಹೊಸ ಶಿಯೋಮಿ 11T ಪ್ರೊ 5G ಫೋನ್ 34,499 ರೂಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ ಹೊಸದಾಗಿ ಬಿಡುಗಡೆಯಾದ ಶಿಯೋಮಿ 11i ಹೈಪರ್‌ಚಾರ್ಜ್ 5G ಮೂಲ ಮಾದರಿಗೆ 23,999 ರೂಗಳಲ್ಲಿ ಲಭ್ಯ ಇದ್ದು, ಎಕ್ಸ್‌ಚೇಂಜ್ ಆಫರ್ ಕೂಡ ಇದೆ. ಇನ್ನು ಶಿಯೋಮಿ 11i 5G 22,499 ರೂಗಳಲ್ಲಿ ಲಭ್ಯ ಇದೆ. ಗ್ರಾಹಕರು ಶಿಯೋಮಿ 11 ಲೈಟ್ NE 5G ಫೋನ್ 21,499 ರೂ. ಗಳಲ್ಲಿ ಖರೀದಿಸಬಹುದು.

ಇದರೊಂದಿಗೆ ವ್ಯಾಲೆಂಟೈನ್ ಮತ್ತು ಮಿ ಸೇಲ್ ನಲ್ಲಿ ಸ್ಮಾರ್ಟ್ ಟಿವಿಗಳಿಗೂ ಆಕರ್ಷಕ ರಿಯಾಯಿತಿ ಲಭ್ಯ ಮಾಡಿದೆ. ರೆಡ್ಮಿ ಸ್ಮಾರ್ಟ್ ಟಿವಿ (32) 2,000ರೂ ರಿಯಾಯಿತಿ ಮತ್ತು ರೆಡ್ಮಿ ಸ್ಮಾರ್ಟ್ ಟಿವಿ (43) 2,500ರೂ. ರಿಯಾಯಿತಿ ಪಡೆದಿವೆ. ರಿಯಾಯಿತಿ ಬಳಿಕ ಈ ಎರಡು ಫೋನ್‌ಗಳು ಕ್ರಮವಾಗಿ 21,499ರೂ. ಮತ್ತು 22,499ರೂ. ಗಳ ಬೆಲೆಯಲ್ಲಿ ಲಭ್ಯವಾಗುತ್ತವೆ. ಹಾಗೆಯೇ ಕಂಪನಿಯ ಮಿ ಸ್ಮಾರ್ಟ್‌ ಬ್ಯಾಂಡ್ 6 (Mi Smart Band 6) ಡಿವೈಸ್‌ಗೆ 500 ರೂಪಾಯಿ ರಿಯಾಯಿತಿ ಲಭ್ಯ ಇದ್ದು, 3,499 ರೂಪಾಯಿಗೆ ಲಭ್ಯವಿದೆ. ಇನ್ನು ರೆಡ್ಮಿ ಇಯರ್‌ಬಡ್ಸ್‌ 3 ಪ್ರೊ ಸಹ ಡಿಸ್ಕೌಂಟ್‌ ಪಡೆದಿದ್ದು, 2,999ರೂ.ಗೆ ಲಭ್ಯವಿದೆ.

ಪ್ರೇಮಿಗಳ ದಿನದ ಪ್ರಯುಕ್ತ ಶಿಯೋಮಿ ಉತ್ಪನ್ನಗಳಿಗೆ ಬೊಂಬಾಟ್ ರಿಯಾಯಿತಿ!

ಶಿಯೋಮಿ ವ್ಯಾಲೆಂಟೈನ್ ಮತ್ತು ಮಿ ವಿಶೇಷ ಮಾರಾಟದಲ್ಲಿ, ಮಿ ನೋಟ್‌ಬುಕ್ ಪ್ರೊ ಮತ್ತು ಮಿ ನೋಟ್‌ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ಗಳು ಕ್ರಮವಾಗಿ 54,499ರೂ. ಮತ್ತು 57,499ರೂ. ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯ ಆಗುತ್ತವೆ. ಹಾಗೆಯೇ ರೆಡ್ಮಿಬುಕ್ 15 ಇ-ಲರ್ನಿಂಗ್ ಆವೃತ್ತಿಯು 35,499 ರೂ.ಗಳ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯ.

ಶಿಯೋಮಿ 11i ಹೈಪರ್‌ಚಾರ್ಜ್ 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12.5 ವರ್ಧಿತ ಆವೃತ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 4,500mAh ಡ್ಯುಯಲ್-ಸೆಲ್ ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Xiaomi's Valentine and Mi Sale: Best discounts on Xiaomi 11i HyperCharge, Redmi Smart TV and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+