2016ರಲ್ಲಿ ಭಾರತದಲ್ಲಿ ಬಿಲಿಯನ್ ಡಾಲರ್ ಆದಾಯ ಪಡೆದ ಕ್ಸಿಯೋಮಿ
ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ವರ್ಷ ಪೂರ್ತಿಗೊಳಿಸುವ ಸಂಭ್ರಮದಲ್ಲಿರುವ ಕ್ಸಿಯೋಮಿ ಇಂದು ಒಂದು ಬಿಲಿಯನ್ ಡಾಲರ್ ಅಂದರೆ ಸುಮಾರು 6800 ಕೋಟಿ ರೂಗಳ ಆದಾಯವನ್ನು ಪಡೆದಿರುವುದಾಗಿ ತಿಳಿಸಿದೆ.
ಕಳೆದ ವರ್ಷದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಲಾಭಕಂಡಿರುವ ಚೀನಾ ಮೂಲದ ಕ್ಸಿಯೋಮಿ ಮೊಬೈಲ್ ಕಂಪನಿ, 2016ರಲ್ಲಿ ಒಂದು ಬಿಲಿಯನ್ ಡಾಲರ್ ಆದಾಯ ಪಡೆದಿರುವುದಾಗಿ ಕ್ಸಿಯೋಮಿ ಘೋಷಣೆ ಮಾಡಿದೆ.

ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟುಬ್ ಪ್ಲೇ ಮಾಡುವುದು ಹೇಗೆ..?
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ವರ್ಷ ಪೂರ್ತಿಗೊಳಿಸುವ ಸಂಭ್ರಮದಲ್ಲಿರುವ ಕ್ಸಿಯೋಮಿ ಇಂದು ಒಂದು ಬಿಲಿಯನ್ ಡಾಲರ್ ಅಂದರೆ ಸುಮಾರು 6800 ಕೋಟಿ ರೂಗಳ ಆದಾಯವನ್ನು ಪಡೆದಿರುವುದಾಗಿ ತಿಳಿಸಿದೆ. ಅಲ್ಲದೇ ಸುಮಾರು 18 ದಿನದಲ್ಲೇ ಒಂದು ಮಿಲಿಯನ್ ಸ್ಮಾರ್ಟ್‌ಪೋನುಗಳನ್ನು ಸೇಲ್ ಮಾಡಿರುವುದಾಗಿ ಕಂಪನಿ ಹೇಳಿದೆ.
ಜಿಯೋ ಮಾರುಕಟ್ಟೆಗೆ ಬಂದ ಮೇಲೆ 4G ಸ್ಮಾರ್ಟ್‌ಪೋನುಗಳ ಸೇಲ್ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಕ್ಸಿಯೋಮಿ ಪೋನಿನ ಬೇಡಿಕೆ ಮತ್ತು ಪೂರೈಕೆ ಎರಡು ಹೆಚ್ಚಿತ್ತು. ಕೇವಲ ಆನ್‌ಲೈನ್ ಮೂಲಕವೇ ಹೆಚ್ಚಿನ ವ್ಯವಹಾರ ನಡೆಸಿರುವ ಕ್ಸಿಯೋಮಿ ಪೋನುಗಳು ಮಾಮೂಲಿ ಮಾರುಕಟ್ಟೆಯಲ್ಲಿ ಆಷ್ಟಾಗಿ ಕಾಣಿಸಿಕೊಂಡಿಲ್ಲ.

ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು
ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಕ್ಸಿಯೋಮಿ 2016ರಲ್ಲಿ 150% ಹೆಚ್ಚು ಆದಾಯದಲ್ಲಿ ಅಭಿವೃದ್ಧಿಕಂಡಿದ್ದು, ಈ ವರ್ಷದ ಕೊನೆಯಲ್ಲಿ ಸುಮಾರು ಎರಡು ಮಿಲಿಯನ್ ಸ್ಮಾರ್ಟ್‌ಪೊನುಗಳು ಕ್ಸಿಯೋಮಿಯದ್ದು ಮಾರಾಟವಾಗಿವೆ ಎಂದರೆ ಅದರ ಲಾಭವನ್ನು ಉಹಿಸಬಹುದಾಗಿದೆ.
ದೇಶಿಯ ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ನಡೆಸಿದ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಪೋನುಗಳು ಮಾರಾಟವಾಗಿದ್ದು, ಅಲ್ಲದೇ ಆಮೆಜಾನ್ ದೀಪಾವಳಿ ಸೇಲಿನಲ್ಲಿಯೂ ಕ್ಸಿಯೊಮಿಯ ಪೋನುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು.


Click it and Unblock the Notifications








