ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!
ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಶಿಯೋಮಿ ಕಂಪನಿಯ 'ಮಿ ಬ್ಯಾಂಡ್ 4' ಡಿವೈಸ್ ಕಲರ್ ಮತ್ತು ಬಿಗ್ ಡಿಸ್‌ಪ್ಲೇಯಿಂದ ಗ್ರಾಹಕರನ್ನು ಸೆಳೆದಿದ್ದು, ಈಗ ಮತ್ತೆ ಎಲ್ಲರು ಹುಬ್ಬೇರಿಸುವಂತ ಸುದ್ದಿ ಮಾಡಿದೆ. ಯಾಕೆ ಅಂತೀರಾ, ಈ ಡಿವೈಸ್‌ನ ಆನ್‌ಲೈನ್ ಮಾರಾಟದಲ್ಲಿ ಕಂಪನಿಮಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ವಿಶ್ವಾದ್ಯಂತ ಕೇವಲ 8 ದಿನಗಳಲ್ಲಿ ಒಂದು ಮಿಲಿಯನ್ ಡಿವೈಸ್‌ಗಳನ್ನು ಕಂಪನಿಯು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಹೌದು, ಚೀನಾ ಮೂಲದ ಶಿಯೋಮಿ ಕಂಪನಿಯ ಮಿ ಬ್ಯಾಂಡ್ 4 ಡಿವೈಸ್ ಕೇವಲ 8 ದಿನಗಳಲ್ಲಿ ಒಂದು ಮಿಲಿಯನ್ (10ಲಕ್ಷ) ಡಿವೈಸ್‌ಗಳನ್ನು ಶಿಪ್ಪಿಂಗ್ ಮಾಡಲಾಗಿದೆ ಎಂದು ಕಂಪನಿಯು ಸೋಮವಾರ (ಜೂನ್.24) ಅಧಿಕೃತವಾಗಿ ಹೇಳಿದೆ. ಭಾರತೀಯ ಶಿಯೋಮಿ ಮ್ಯಾನೇಜಿಂಗ್ ಡೈರೆಕ್ಟರ್ ಮನು ಜೈನ್ ಮಾತನಾಡಿ, 'ಮಿ ಬ್ಯಾಂಡ್ 4' ಡಿವೈಸ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಹಾಗೂ ಕಂಪನಿಯ ಮತ್ತಷ್ಟು ಹೊಸ ಉತ್ಪನ್ನಗಳು ಸಹ ಮುಂದಿನ ದಿನಗಳಲ್ಲಿ ಬರಲಿವೆ ಎಂದಿದ್ದಾರೆ.

ಈ ಡಿವೈಸ್ ನೋಡಲು 'ಮಿ ಬ್ಯಾಂಡ್ 3'ಯಂತೆ ಕಾಣಲಿದ್ದು, ಆದರೆ ಕಲರ್ ಡಿಸ್‌ಪ್ಲೇ, 20 ದಿನಗಳ ಬ್ಯಾಟರಿ ಲೈಫ್, 5ATM ರೇಟಿಂಗ್ ವಾಟರ್ ರೆಸಿಸ್ಟನ್ಸ್ ಫೀಚರ್ಸ್‌ಗಳಿಂದ ಭಿನ್ನವಾಗಿ ಗುರುತಿಸಿಕೊಂಡಿದೆ. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದ್ದು, ಸೈಕ್ಲಿಂಗ್, ಸ್ವಿಮ್ಮಿಂಗ್ ಮತ್ತು ಜಾಗಿಂಗ್ ಮಾಡಲು ಧರಿಸಬಹುದಾಗಿದೆ. ಹಾಗಾದರೇ ಶಿಯೋಮಿ ಮಿ ಬ್ಯಾಂಡ್ 4 ಡಿವೈಸ್‌ನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಫಿಟ್‌ನೆಸ್ ಡಿವೈಸ್
ಶಿಯೋಮಿಯ ಮಿ ಬ್ಯಾಂಡ್ 4, 'ಹಾರ್ಟ್‌ರೇಟ್ ಮಾನಿಟರಿಂಗ್' ಆಯ್ಕೆಯನ್ನು ಒಳಗೊಂಡಿದ್ದು, ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದ್ದು, ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ.

ಡಿಸ್‌ಪ್ಲೇ ಹೇಗಿದೆ
ಈ ಮಿ ಬ್ಯಾಂಡ್ 4, ಡಿವೈಸ್ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್ ಗ್ಲಾಸ್ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್ ಮುಕ್ತವಾಗಿದೆ.

ಸೆನ್ಸಾರ್ ಶಕ್ತಿ
ಮಿ ಬ್ಯಾಂಡ್ 4 ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದ್ದು, ವಿವಿಧ ಬಗೆಯ ಸ್ವೀಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿಸ್ಟೈಲ್, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಟ್ರಾಕ್ ಮಾಡಲಿದೆ.

ಎರಡು ವೇರಿಯಂಟ್‌ಗಳು
ಶಿಯೋಮಿ ಬಿಡುಗಡೆ ಮಾಡಿರುವ 'ಮಿ ಬ್ಯಾಂಡ್ 4' 'ಎನ್‌ಎಫ್‌ಸಿ' ಮತ್ತು 'ನಾನ್-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ಗಳ ಆಯ್ಕೆಗಳನ್ನು ಹೊಂದಿದೆ. ಎನ್‌ಎಫ್‌ಸಿ ವರ್ಷನ್ ಮಾದರಿಯ ಸ್ಮಾರ್ಟ್‌ಬ್ಯಾಂಡ್ ಮಾಡೆಲ್ ನಂಬರ್ XMSH08HM ಆಗಿದೆ ಮತ್ತು ನಾನ್-ಎನ್‌ಎಫ್‌ಸಿ ಡಿವೈಸ್ ಮಾಡೆಲ್ ನಂಬರ್ XMSH07HM ಆಗಿದೆ.

ಬ್ಯಾಟರಿ ಲೈಫ್
ಶಿಯೋಮಿ ಮಿ ಬ್ಯಾಂಡ್ 4 135mAh ಸಾಮರ್ಥ್ಯದ ಬಿಗ್ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ 'ಮಿ 3' ಸ್ಮಾರ್ಟ್‌ಬ್ಯಾಂಡ್ 110mAh ಬ್ಯಾಟರಿ ಪವರ್ ಅನ್ನು ನೀಡಲಾಗಿತ್ತು. ಮಿ 4 ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಬ್ಯಾಟರಿ ಹೆಚ್ಚಿಸಲಾಗಿದೆ.

ಬೆಲೆ ಎಷ್ಟಿದೆ?
ಶಿಯೋಮಿಯ ಮಿ ಬ್ಯಾಂಡ್ 4, ಎನ್‌ಎಫ್‌ಸಿ ವರ್ಷನ್ ಮಾದರಿಯ ಸ್ಮಾರ್ಟ್‌ಬ್ಯಾಂಡ್ ಬೆಲೆಯು 169 yuan (1700ರೂ ) ಆಗಿರಲಿದೆ. ಹಾಗೆಯೇ ನಾನ್-ಎನ್‌ಎಫ್‌ಸಿ' ವರ್ಷನ್ ಸ್ಮಾರ್ಟ್‌ಬ್ಯಾಂಡ್ ಬೆಲೆಯು 229 yuan (2300ರೂ) ಆಗಿದೆ. ಇದೇ ಜೂನ್ 14ರಂದು ಮೊದಲ ಸೇಲ್ ಆರಂಭಿಸಿದ್ದ ಕಂಪನಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.


Click it and Unblock the Notifications








