ಶಿಯೋಮಿ ಬ್ಯಾಂಡ್ 8 ಲಾಂಚ್!..ಅಚ್ಚರಿಯ ಬೆಲೆ, ಬೊಂಬಾಟ್ ಫೀಚರ್ಸ್!
ಶಿಯೋಮಿ ಕಂಪೆನಿ ಹೊಸ ಮಿ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್ ಲಾಂಚ್ ಮಾಡಿದೆ. ಇದು ಮಿ ಸ್ಮಾರ್ಟ್ ಬ್ಯಾಂಡ್ 7 ಡಿವೈಸ್‌ನ ಅಪ್‌ಗ್ರೇಡ್ ಆವೃತ್ತಿ ಎನಿಸಿಕೊಂಡಿದ್ದು, ಹಲವು ನೂತನ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಹೊಸ ಡಿವೈಸ್ ಹಿಂದಿನ ಡಿವೈಸ್‌ಗಳಿಗಿಂತ ಅಪ್‌ಗ್ರೇಡ್ ಆಗಿದ್ದು, AMOLED ಡಿಸ್‌ಪ್ಲೇ, SpO2 ಫೀಚರ್ಸ್‌ಗಳನ್ನು ಒಳಗೊಂಡು ಫಿಟ್ನೆಸ್ ಪ್ರಿಯರನ್ನು ಆಕರ್ಷಿಸಿದೆ.
ಹೌದು, ಶಿಯೋಮಿ ತನ್ನ ಹೊಸ ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್ ಲಾಂಚ್ ಮಾಡಿದೆ. ಈ ಫಿಟ್ನೆಸ್ ಡಿವೈಸ್ ಸುಮಾರು 150ಕ್ಕೂ ಅಧಿಕ ಟ್ರೈನಿಂಗ್ ಮೋಡ್‌ಗಳ ಆಯ್ಕೆಯನ್ನು ಒಳಗೊಂಡಿದೆ. 24×7 ಹಾರ್ಟ್ ರೇಟ್ ಮಾನಿಟರಿಂಗ್ ಸೌಲಭ್ಯ ಪಡೆದಿದ್ದು, ಜೊತೆಗೆ ಸಿಂಗಲ್ ಚಾರ್ಜ್‌ನಲ್ಲಿ 16 ದಿನಗಳ ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿದೆ. ಹಾಗಾದರೇ ಮಿ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್‌ನ ಇತರೆ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ : ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್ 490 × 192 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.62 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು ಆಲ್‌ವೇಸ್ ಆನ್ ಮಾದರಿಯ ಡಿಸ್‌ಪ್ಲೇ ಆಗಿದೆ. ಈ ಹಿಂದಿನ ಮಿ ಸ್ಮಾರ್ಟ್ ಬ್ಯಾಂಡ್ 7 ಡಿವೈಸ್ 490 × 192 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.62 ಇಂಚಿನ ಡಿಸ್‌ಪ್ಲೇ ಹೊಂದಿತ್ತು.
ಪ್ರಮುಖ ಫೀಚರ್ಸ್‌ಗಳು : ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್ ಫಿಟ್‌ನೆಸ್ ಟ್ರ್ಯಾಕರ್ 2048, ಸುಡುಕೊ, ಪಿಂಗ್-ಪಾಂಗ್ ಶೂಟರ್, ಟ್ರಿವಿಯಾ ಮತ್ತು ಇತರೆ ಸೇಮ್‌ಗಳನ್ನು ಸಹ ಒಳಗೊಂಡಿದೆ. ಫಿಟ್‌ನೆಸ್ ಟ್ರ್ಯಾಕರ್ ತ್ವರಿತ-ಬಿಡುಗಡೆ ಕಾರ್ಯವಿಧಾನವನ್ನು ಸಹ ಅಳವಡಿಸಿಕೊಳ್ಳುತ್ತದೆ ಮತ್ತು ಇದು ನಯವಾದ ಲೋಹೀಯ ವಿನ್ಯಾಸವನ್ನು ಸಹ ಹೊಂದಿದೆ.

ಹಾಗೆಯೇ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್ 150+ ತರಬೇತಿ ಮೋಡ್ ಗಳ ಸಪೋರ್ಟ್ ಪಡೆದಿದೆ. ಹಾಗೆಯೇ ಇದು ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆ ಟ್ರ್ಯಾಕಿಂಗ್, Spo2 ಮಾನಿಟರಿಂಗ್ ಮತ್ತು ಸ್ತ್ರೀ ಅವಧಿ ಟ್ರ್ಯಾಕಿಂಗ್ ಬೆಂಬಲವನ್ನು ಹೊಂದಿದೆ. ಇದು ಬೀನ್ ಮೋಡ್ ಅನ್ನು ಸಹ ಹೊಂದಿದ್ದು, ಹೆಚ್ಚು ವೃತ್ತಿಪರ ಬಳಕೆಯ ಅನುಭವವನ್ನು ನೀಡುತ್ತದೆ.
ಮಿ ಬ್ಯಾಂಡ್ 8 ಡಿವೈಸ್‌ನೊಂದಿಗೆ, ಬಳಕೆದಾರರು ಮ್ಯೂಸಿಕ್, ಕ್ಯಾಮೆರಾವನ್ನು ಆಯ್ಕೆ ನಿಯಂತ್ರಿಸಬಹುದು, ತ್ವರಿತ ಮೆಸೆಜ್‌ಗಳಿಗೆ ಪ್ರತ್ಯುತ್ತರಿಸಬಹುದು. ಅಲ್ಲದೇ ಒಳಬರುವ ಕರೆ ಅಲರ್ಟ್‌ಗಳನ್ನು ಸಹ ನೋಡಬಹುದು. ಶಿಯೋಮಿಯ ಈ ಹೊಸ ಕೊಡುಗೆಯು 100+ ಹೊಸ ವಾಚ್ ಫೇಸ್‌ಗಳು ಮತ್ತು ಮಾರ್ಸ್ ಸೂಪರ್ ವಾಲ್‌ಪೇಪರ್ ಅನ್ನು ಒಳಗೊಂಡಿದೆ.

ಮಿ ಬ್ಯಾಂಡ್ 8 ಡಿವೈಸ್ ಬಾಕ್ಸಿಂಗ್ ಕ್ರಿಯೆಯಲ್ಲಿರುವಾಗ ದೈಹಿಕ ಇಂದ್ರಿಯಗಳು ಅಥವಾ ಸೊಮಾಟೊಸೆನ್ಸರಿ ಸಿಸ್ಟಮ್‌ಗಳಿಗೆ ಸಂಬಂಧಿಸಿದ ಡೇಟಾವನ್ನು ಟ್ರ್ಯಾಕ್ ಮಾಡಲು ಬಳಕೆದಾರರನ್ನು ಸಕ್ರಿಯಗೊಳಿಸಲು ಈ ಹೊಸ ಮೋಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು 48 × 22.5 × 10.99mm ಮತ್ತು 27 ಗ್ರಾಂ ತೂಕ ಹೊಂದಿದ್ದು, 190mAh ಬ್ಯಾಟರಿ ಪಡೆದಿದೆ. ಒಂದು ಚಾರ್ಜ್‌ನಲ್ಲಿ ಸುಮಾರು 16 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ನೀಡುತ್ತದೆ.
ಶಿಯೋಮಿ ಸ್ಮಾರ್ಟ್ ಬ್ಯಾಂಡ್ 8 (NFC) ಬೆಲೆ ಚೀನಾದಲ್ಲಿ CNY 279 (ಭಾರತದಲ್ಲಿ ಅಂದಾಜು 3,330ರೂ), ಆದರೆ NFC ಇಲ್ಲದ ಬ್ಯಾಂಡ್ 8 CNY 239 (ಭಾರತದಲ್ಲಿ ಅಂದಾಜು 2,850ರೂ.) ಎನ್ನಲಾಗಿದೆ. ಇನ್ನು ಈ ಡಿವೈಸ್ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








