ಶಿಯೋಮಿ 'ಸ್ಮಾರ್ಟ್‌ ಗ್ಲಾಸ್' ಲಾಂಚ್; ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ!

|

ಜನಪ್ರಿಯ ಶಿಯೋಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸ್ಮಾರ್ಟ್‌ಫೋನ್‌ ಸೇರಿದಂತೆ ಹಲವು ಸ್ಮಾರ್ಟ್‌ ಡಿವೈಸ್‌ಗಳನ್ನು ಲಾಂಚ್ ಮಾಡಿ ಸದ್ದು ಮಾಡಿದೆ. ಹಾಗೆಯೇ ಕೆಲವು ಫ್ಯಾಶನ್‌ ಉತ್ಪನ್ನಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಇದೀಗ ಮತ್ತೊಂದು ಸ್ಮಾರ್ಟ್‌ ಡಿವೈಸ್ ಪರಿಚಯಿಸಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಅದುವೇ ಶಿಯೋಮಿ ಸ್ಮಾರ್ಟ್‌ ಗ್ಲಾಸ್‌ (ಸ್ಮಾರ್ಟ್‌ ಕನ್ನಡಕ).

ಶಿಯೋಮಿ 'ಸ್ಮಾರ್ಟ್‌ ಗ್ಲಾಸ್' ಲಾಂಚ್; ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ!

ಹೌದು, ಶಿಯೋಮಿ ಕಂಪನಿಯು ನೂತನವಾಗಿ ಶಿಯೋಮಿ ಸ್ಮಾರ್ಟ್‌ ಗ್ಲಾಸ್‌ (ಸ್ಮಾರ್ಟ್‌ ಕನ್ನಡಕ) ಲಾಂಚ್ ಮಾಡಿದೆ. ಈ ಸ್ಮಾರ್ಟ್‌ ಗ್ಲಾಸ್‌ ಮೆಸೆಜ್‌ಗಳನ್ನು ಮತ್ತು ನೋಟಿಫಿಕೇಶನ್‌ಗಳನ್ನು ಡಿಸ್‌ಪ್ಲೇ ಮಾಡುವ ಸೌಲಭ್ಯ ಹೊಂದಿದೆ. ಹಾಗೆಯೇ ಕರೆ ಮಾಡುವ ಸೌಲಭ್ಯ, ನ್ಯಾವಿಗೇಶನ್, ಫೋಟೊ ಸೆರೆಹಿಡಿಯುವ ಆಯ್ಕೆಗಳು ಸೇರಿದಂತೆ ಮತ್ತಷ್ಟು ಹೊಸ ಬಗೆಯ ಫೀಚರ್ಸ್‌ಗಳನ್ನು ಈ ಸ್ಮಾರ್ಟ್‌ ಗ್ಲಾಸ್‌ ಒಳಗೊಂಡಿರಲಿದೆ ಎಂದು ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನು ಕುಮಾರ ಜೈನ್ ಟ್ಟಿಟ್ ನಲ್ಲಿ ತಿಳಿಸಿದ್ದಾರೆ.

ಶಿಯೋಮಿ 'ಸ್ಮಾರ್ಟ್‌ ಗ್ಲಾಸ್' ಲಾಂಚ್; ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ!

ಇತ್ತೀಚಿಗಷ್ಟೆ ಸರ್ಚ್ ಇಂಜಿನ್ ದೈತ್ಯ ಫೇಸ್‌ಬುಕ್ ರೇ-ಬ್ಯಾನ್ ಸ್ಟೋರಿಸ್ ಕನ್ನಡಕ ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಶಿಯೋಮಿ ಸಹ ನೂತನವಾಗಿ ಸ್ಮಾರ್ಟ್‌ ಗ್ಲಾಸ್‌ ಅನಾವರಣ ಮಾಡಿ ಈಗ ಗ್ರಾಹಕರನ್ನು ಆಕರ್ಷಿಸಿದೆ. ಶಿಯೋಮಿಯ ಸ್ಮಾರ್ಟ್ ಗ್ಲಾಸ್‌ ಮೈಕ್ರೊ ಎಲ್‌ಇಡಿ ಇಮೇಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ನೋಡಲು ಸಾಮಾನ್ಯ ಕನ್ನಡಕ ತರಹವೇ ಕಾಣಿಸುತ್ತದೆ. ಹಾಗೆಯೇ ಹಗುರವಾಗಿ ರಚನೆಯನ್ನು ಇದು ಪಡೆದಿದೆ.

ಇನ್ನು ಈ ಸ್ಮಾರ್ಟ್‌ ಗ್ಲಾಸ್‌ ಡಿವೈಸ್ 0.13-ಇಂಚಿನ ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇ ಅನ್ನು ಹೊಂದಿದ್ದು, ಮೈಕ್ರೋ ಎಲ್‌ಇಡಿಗಳು ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿವೆ. ಬಳಕೆದಾರರಿಗೆ ಇದು ಕಾಂಪ್ಯಾಕ್ಟ್ ಡಿಸ್‌ಪ್ಲೇ ಎನಿಸಲಿದೆ. ಶಿಯೋಮಿಯ ಈ ಸ್ಮಾರ್ಟ್ ಗ್ಲಾಸ್ ಡಿವೈಸ್ ಅತೀ ಚಿಕ್ಕ ಡಿಸ್‌ಪ್ಲೇ ಚಿಪ್‌ ಅನ್ನು ಹೊಂದಿದ್ದು, ಅದು ಕೇವಲ 2.4mm x 2.02mm ಅಳತ ಆಗಿದೆ. ಸೂಕ್ಷ್ಮದರ್ಶಕದಲ್ಲಿ ಈ ಚಿಪ್ ಗಮನಿಸಿದರೇ ಅದು ಒಂದು ಅಕ್ಕಿ ಕಾಳಿನ ಗಾತ್ರವನ್ನು ಹೊಂದಿದೆ. ಹಾಗೆಯೇ 2 ಮಿಲಿಯನ್ ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ಹೊಂದಿದೆ. ಹಾಗಯೇ ಇದು 51 ಗ್ರಾಂ ತೂಕವನ್ನು ಪಡೆದಿದೆ.

ಈ ಡಿವೈಸ್‌ನಲ್ಲಿ ಆಪ್ಟಿಕಲ್ ವೇವ್‌ಗೈಡ್ ತಂತ್ರಜ್ಞಾನ ಇದ್ದು, ಇದು ಮೈಕ್ರೊ ಎಲ್‌ಇಡಿ ಡಿಸ್‌ಪ್ಲೇ ಆಪ್ಟಿಕಲ್ ವೇವ್‌ಗೈಡ್ ಲೆನ್ಸ್‌ನ ಸೂಕ್ಷ್ಮ ರಚನೆಯ ಮೂಲಕ ಮಾನವನ ಕಣ್ಣಿಗೆ ಬೆಳಕಿನ ಕಿರಣಗಳನ್ನು ಸರಿಯಾಗಿ ರವಾನಿಸುತ್ತದೆ. ಆಪ್ಟಿಕಲ್ ವೇವ್‌ಗೈಡ್ ತಂತ್ರಜ್ಞಾನವು ಡಿವೈಸ್‌ನ ಗಾತ್ರ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಾಮಾನ್ಯ ಕನ್ನಡಕಗಳ ರೂಪದ ಅಂಶವನ್ನು ಸಮೀಪಿಸಲು ಸ್ಮಾರ್ಟ್ ಗ್ಲಾಸ್‌ಗಳನ್ನು ಅನುಮತಿಸುತ್ತದೆ.

ಈ ಸ್ಮಾರ್ಟ್‌ ಗ್ಲಾಸ್‌ ನೋಟಿಫಿಕೇಶನ್‌ಗಳ ಕಾಣಿಸುವ ಆಯ್ಕೆ ಪಡೆದಿದೆ. ಆದರೆ ಫೋನಿಗೆ ಬರುವ ಎಲ್ಲಾ ಪುಶ್ ನೋಟಿಫಿಕೇಶನ್‌ಗಳನ್ನು ಬಳಕೆದಾರರ ಕಣ್ಣುಗಳ ಮುಂದೆ ಪ್ರದರ್ಶಿಸುವುದಿಲ್ಲ. ಈ ನಿಟ್ಟಿನಲ್ಲಿ ಶಿಯೋಮಿ ಸ್ಮಾರ್ಟ್ ಗ್ಲಾಸ್‌ಗಳು ಬಳಕೆದಾರರಿಗೆ ಸ್ಮಾರ್ಟ್ ಹೋಮ್ ಅಲಾರಂಗಳು, ಆಫೀಸ್ ಆಪ್‌ಗಳಿಂದ ತುರ್ತು ಮಾಹಿತಿ ಮತ್ತು ಪ್ರಮುಖ ಕಾಂಟ್ಯಾಕ್ಟ್‌ಗಳ ಮೆಸೆಜ್‌ಗಳನ್ನು ಆಯ್ಕೆ ಮಾಡುತ್ತದೆ.

ಶಿಯೋಮಿ 'ಸ್ಮಾರ್ಟ್‌ ಗ್ಲಾಸ್' ಲಾಂಚ್; ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ!

ಅದೇ ರೀತಿ ಈ ಡಿವೈಸ್ ಫೋನ್ ಕರೆ ಸೌಲಭ್ಯವನ್ನು ಪಡೆದಿದೆ. ಇತರರು ಕರೆ ಮಾಡಿದಾಗ ಅವರ ನಂಬರ್ ನೋಡಬಹುದಾಗಿದೆ. ಹಾಗೆಯೇ ಈ ಡಿವೈಸ್‌ನಲ್ಲಿ ಡ್ಯುಯಲ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್ ಮತ್ತು ಸ್ಪೀಕರ್ ಇನ್‌ಬಿಲ್ಟ್‌ ಆಗಿದ್ದು, ಇವುಗಳ ಸಹಾಯದಿಂದ ಅತ್ಯುತ್ತಮ ಧ್ವನಿ ಕೇಳುವಿಕೆ ಸಾಧ್ಯವಾಗುತ್ತದೆ. ಇದರೊಂದಿಗೆ ಈ ಡಿವೈಸ್ ನ್ಯಾವಿಗೇಶನ್ ಆಯ್ಕೆ ಸಹ ಪಡೆದಿದೆ. ಬಳಕೆದಾರರು ಡ್ರೈವಿಂಗ್ ಮಾಡುವಾಗ ರಿಯಲ್‌ ಟೈಮ್‌ನಲ್ಲಿ ರಸ್ತೆಗಳು ಹಾಗೂ ಮ್ಯಾಪ್‌ಗಳನ್ನು ಕಣ್ಣ ಮುಂದೆ ಕಾಣಿಸುತ್ತದೆ. ಇದು ಬಳಕೆದಾರರಿಗೆ ಡ್ರೈವಿಂಗ್‌ಗೆ ಯಾವುದೇ ಅಡಚಣೆ ಉಂಟು ಮಾಡುವುದಿಲ್ಲ ಎಂದು ಹೇಳಲಾಗಿದೆ.

ಈ ಸ್ಮಾರ್ಟ್‌ ಗ್ಲಾಸ್‌ನ ಮುಂಭಾಗದಲ್ಲಿರುವ 5 ಮೆಗಾ ಪಿಕ್ಸಲ್ ಕ್ಯಾಮರಾ ರಚನೆ ಇದ್ದು, ಈ ಕ್ಯಾಮೆರಾ ಮೂಲಕ ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ. ಹಾಗೆಯೇ ಫೋಟೋಗಳಲ್ಲಿ ಟೆಕ್ಸ್ಟ್‌ ಅನ್ನು ಭಾಷಾಂತರಿಸಬಹುದು. ಈ ಡಿವೈಸ್ ಪ್ರಯಾಣ ಮಾಡುವಾಗ ಹೆಚ್ಚು ಅನುಕೂಲಕರವಾಗಿರುತ್ತದೆ.

Best Mobiles in India

English summary
Xiaomi Smart Glasses Launched With MicroLED Display: Translate Text And More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X