ಕೇರಳ ಸಂತ್ರಸ್ತರಿಗೆ ಸಿಹಿ ಸುದ್ದಿ ನೀಡಿದ ಶಿಯೋಮಿ: ಉಚಿತ ಸ್ಮಾರ್ಟ್‌ಫೋನ್ ಸೇವೆ..!

|

ಭಾರೀ ಮಳೆಗೆ ತತ್ತರಿರಿಸಿರುವ ನೆರೆಯ ರಾಜ್ಯ ಕೇರಳಕ್ಕೆ ದೇಶ-ವಿದೇಶಗಳಿಂದ ನೆರವಿನ ಮಹಾಪೂರವೆ ಹರಿದು ಬರುತ್ತಿದೆ. ಸಾಮಾನ್ಯ ಜನರಿಂದ ಹಿಡಿದು, ಸಂಘ ಸಂಸ್ಥೆಗಳು, ಕಂಪನಿಗಳು ತಮ್ಮ ನೆರವಿನ ಹಸ್ತವನ್ನು ಚಾಚುತ್ತಿವೆ. ದೈತ್ಯ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ಟ್ವೀಟರ್, ಅಮೆಜಾನ್ ಸೇರಿದಂತೆ ಟೆಲಿಕಾಂ ಕಂಪನಿಗಳು ದೊಡ್ಡ ಮಟ್ಟದಲ್ಲಿ ತಮ್ಮದೇ ವಿಭಾಗದಲ್ಲಿ ಸಾಧ್ಯವಾದಷ್ಟು ಸಹಾಯವನ್ನು ಮಾಡುತ್ತಿವೆ. ಟೆಲಿಕಾಂ ಕಂಪನಿಗಳು ಉಚಿತ ಕರೆ ಮಾಡುವ ಸೇವೆಯನ್ನು ನೀಡಿದೆ. ಪೇಟಿಎಂ ಹಣವನ್ನು ಕಲೆಕ್ಟ್ ಮಾಡಿ ನೀಡಿದೆ.

ಕೇರಳ ಸಂತ್ರಸ್ತರಿಗೆ ಸಿಹಿ ಸುದ್ದಿ ನೀಡಿದ ಶಿಯೋಮಿ: ಉಚಿತ ಸ್ಮಾರ್ಟ್‌ಫೋನ್ ಸೇವೆ..!

ಇದೇ ಮಾದರಿಯಲ್ಲಿ ಕೇರಳ ಸಂತ್ರಸ್ತರಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್‌ಪೋನ್ ಮಾರಾಟ ಮಾಡುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿಯೂ ಸಹ ಒಂದು ಹೆಜ್ಜೆ ಇಟ್ಟಿದೆ. ಕೇರಳ ಪ್ರವಾಹದಲ್ಲಿ ನೀರಿನಿಂದ ಹಾಳಾದ ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಫೋನ್‌ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡುವುದಾಗಿ ತಿಳಿಸಿದೆ. ಈ ಮೂಲಕ ಕೇರಳದ ಸ್ಮಾರ್ಟ್‌ಫೋನ್ ಬಳಕೆದಾರರ ಮೊಗದಲ್ಲಿ ನಗು ತರಿಸಿದೆ.

ಓದಿರಿ : ಆಡ್ ಮೂಲಕ ಆಪಲ್‌ ಮೂತಿ ತಿವಿದ ಸ್ಯಾಮ್‌ಸಂಗ್..! ಮೀಸ್ ಮಾಡ್ಲೇ ಬಾರ್ದು..!

ಹೆಚ್ಚು ಮಾರಾಟ:

ಹೆಚ್ಚು ಮಾರಾಟ:

ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿರುವ ಶಿಯೋಮಿ, ಕೇರಳ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚಿದೆ. 'ಕೇರಳದಲ್ಲಿ ಹಾಳಾದ ಶಿಯೋಮಿ ಸ್ಮಾರ್ಟ್‌ಪೋನ್‌ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡಲಾಗುವುದು' ಎಂದು ತಿಳಿಸಿದೆ.

ವರದಿ:

ವರದಿ:

ಈ ಕುರಿತು ಮೊಬೈಲ್ ಇಂಡಿಯನ್ ಜಾಲತಾಣವು ವರದಿಯನ್ನು ಮಾಡಿದ್ದು, ಶಿಯೋಮಿ ಭಾರತೀಯ ಮುಖ್ಯಸ್ಥ ಮನು ಜೈನ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ' ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ನೀರಿನಲ್ಲಿ ಬಿದ್ದು ಹಾಳಾಗಿರುವು ಶಿಯೋಮಿ ಸ್ಮಾರ್ಟ್‌ಪೋನ್‌ಗಳನ್ನು ಕೇರಳದಲ್ಲಿ ಉಚಿತವಾಗಿ ರಿಪೇರಿ ಮಾಡಿಸಿಕೊಡಲಾಗುವುದು. ಇದಕ್ಕಾಗಿ ಸಿದ್ಧತೆಯನ್ನು ನಡೆಸಲಾಗಿದೆ' ಎಂದು ಮನು ಜೈನ್ ತಿಳಿಸಿದ್ದಾರೆ ಎನ್ನಲಾಗಿದೆ.

ಶೀಘ್ರವೇ ಅಧಿಕೃತ ಮಾಹಿತಿ:

ಶೀಘ್ರವೇ ಅಧಿಕೃತ ಮಾಹಿತಿ:

ಶಿಯೋಮಿ ಉಚಿತವಾಗಿ ಸ್ಮಾರ್ಟ್‌ಫೋನ್‌ಗಳನ್ನು ರಿಪೇರಿ ಮಾಡಿಕೊಡುವ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿಯೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಸಂಪರ್ಕ ಸಾಧನಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಗಳನ್ನು ರಿಪೇರಿ ಮಾಡಿಕೊಡುವುದು ಸಹ ಅವಶ್ಯವಾಗಲಿದೆ.

ಪವರ್ ಬ್ಯಾಂಕ್ ನೀಡಿತ್ತು.

ಇದಲ್ಲದೇ ಶಿಯೋಮಿ ಈ ಹಿಂದೆಯೇ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಫುಲ್ ಚಾರ್ಜ್ ಆಗಿದ್ದ ಪವರ್ ಬ್ಯಾಂಕ್‌ಗಳನ್ನು ಉಚಿತವಾಗಿ ನೀಡಿತ್ತು. ಇದರಿಂದಾಗಿ ಬ್ಯಾಟರಿ ಕಳೆದುಕೊಂಡಿದ್ದ ಮೊಬೈಲ್‌ಗಳಿಗೆ ಜೀವ ನೀಡುವ ಕಾರ್ಯವನ್ನು ಮಾಡಿತ್ತು.

ನೆರವು:

ನೆರವು:

ಈಗಾಗಲೇ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕೇರಳದಲ್ಲಿ ಉಚಿತ ಕರೆ ಮಾಡುವ ಅವಕಾಶ ಮತ್ತು ಡೇಟಾವನ್ನು ಬಳಕೆಯನ್ನು ಉಚಿತ ಮಾಡಿವೆ. ಈ ಹಿನ್ನಲೆಯಲ್ಲಿ ಬ್ಯಾಲೆನ್ಸ್ ಇಲ್ಲದೇ ದೂರದಲ್ಲಿ ಪರಡಾಡುತ್ತಿದ್ದವರಿಗೆ ಇದರಿಂದಾಗಿ ಹೆಚ್ಚಿನ ಸಹಾಯವಾಗಿತ್ತು.

ಗೂಗಲ್:

ಗೂಗಲ್:

ಇದಲ್ಲದೇ ಗೂಗಲ್ ಕೇರಳದಲ್ಲಿ ನಾಪತ್ತೆಯಾಗಿರುವವರನ್ನು ಪತ್ತೆ ಮಾಡಲು ಗೂಗಲ್ ಪರ್ಸನ್ ಫೈಂಡರ್ ಪೇಜ್ ಅನ್ನು ಬಳಕೆಗೆ ಮುಕ್ತವಾಗಿಸಿದೆ. ಅಲ್ಲದೇ ಗೂಗಲ್ ಮ್ಯಾಪ್ ಸಹಾಯದಿಂದ ಪರಿಹಾರ ತಂಡಗಳಿಗೆ ಸಹಾಯವನ್ನು ಮಾಡುತ್ತಿದೆ. ಜೊತೆಗೆ ಸಾಮಾನ್ಯ ಜನರಿಗೆ ಆಹಾರ ಸೇರಿದಂತೆ ಬೇರೆ ಮಾದರಿಯ ಸಹಾಯ ಎಲ್ಲಿ ಲಭ್ಯವಿದೆ ಎನ್ನುವುದನ್ನು ಮ್ಯಾಪ್‌ನಲ್ಲಿ ತಿಳಿಸುತ್ತಿದೆ ಎನ್ನಲಾಗಿದೆ.

Best Mobiles in India

English summary
Xiaomi smartphones with water damage to be repaired for free in flood-hit Kerala. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X