ಆಡ್ ಮೂಲಕ ಆಪಲ್‌ ಮೂತಿ ತಿವಿದ ಸ್ಯಾಮ್‌ಸಂಗ್..! ಮೀಸ್ ಮಾಡ್ಲೇ ಬಾರ್ದು..!

|

ಜಾಗತಿಕ ಸ್ಮಾರ್ಟ್‌ಫೋಣ್ ಮಾರುಕಟ್ಟೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ನಡುವೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸ್ಪರ್ಧೆಯನ್ನು ಕಾಣಬಹುದಾಗಿದೆ. ಆಪಲ್ iOS ಟಾಪ್ ಎಂಡ್ ಐಫೋನ್‌ಗಳನ್ನು ನಿರ್ಮಾಣ ಮಾಡಿದರೆ, ಸ್ಯಾಮ್‌ಸಂಗ್ ಟಾಪ್‌ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಈ ಎರಡು ಕಂಪನಿಗಳು ಒಂದರ ಕಾಲನ್ನು ಮತ್ತೊಂದು ಎಳೆಯುತ್ತಿರುತ್ತವೆ.

ಆಡ್ ಮೂಲಕ ಆಪಲ್‌ ಮೂತಿ ತಿವಿದ ಸ್ಯಾಮ್‌ಸಂಗ್..! ಮೀಸ್ ಮಾಡ್ಲೇ ಬಾರ್ದು..!

2011 ರಿಂದಲೂ ಆಪಲ್‌ಗೆ ಟಾಂಗ್ ನೀಡುವ ಮಾದರಿಯಲ್ಲಿ ಟೆಲಿವಿಷನ್ ಆಡ್‌ಗಳನ್ನು ಪ್ರಸಾರ ಮಾಡುತ್ತಿರುವ ಸ್ಯಾಮ್‌ಸಂಗ್ ಈ ಬಾರಿ ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಜಾಹೀರಾತಿನಲ್ಲಿಯೂ ಆಪಲ್‌ ಅನ್ನು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಿದೆ. ಆಂಡ್ರಾಯ್ಡ್ ಐಫೋನ್‌ಗಿಂತಲೂ ಬೆಸ್ಟ್ ಎನ್ನುವುದನ್ನು ಸಾರಿ ಹೇಳಿದೆ. ಒಮ್ಮೆ ನೀವು ಈ ವಿಡಿಯೋಗಳನ್ನು ನೋಡಿ ನಕ್ಕುಬಿಡಿ.

ಸ್ಯಾಮ್‌ಸಂಗ್ VS ಆಪಲ್:

ಈ ಎರಡು ಕಂಪನಿಗಳು ಪ್ರತಿ ಬಾರಿ ಟಾಪ್ ಎಂಡ್ ಫೋನ್‌ಗಳನ್ನು ಲಾಂಚ್ ಮಾಡಿದ ಸಂದರ್ಭದಲ್ಲಿ ಹೊಸದಾದ ಮಾದರಿಯ ಆಯ್ಕೆಗಳನ್ನು ನೀಡುತ್ತವೆ. ಇವುಗಳನ್ನು ಟ್ರೂಲ್ ಮಾಡುವ ಮಾದರಿಯಲ್ಲಿ ವಿಡಿಯೋವನ್ನು ಮಾಡಿ ಹರಿಬಿಡಲಾಗಿದೆ. ಇದು ಯೂಟ್ಯೂಬ್ ನಲ್ಲಿ ಅತೀ ಹೆಚ್ಚಿನ ಮಂದಿಯನ್ನು ಸೆಳೆಯುತ್ತಿದೆ.

ಕ್ಯಾಮೆರಾ:

ಆಪಲ್ ಐಫೋನ್ ಕ್ಯಾಮೆರಾವನ್ನು ಟ್ರೋಲ್ ಮಾಡುವ ರೀತಿಯಲ್ಲಿ ಸ್ಯಾಮ್‌ಸಂಗ್ ತನ್ನ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಕ್ಯಾಮೆರಾ ಉತ್ತಮವಾಗಿದೆ ಎಂದು ಹೇಳುವ ಆಡ್ ಇದಾಗಿದೆ. ಆಪಲ್ ಬಳಕೆದಾರರು ಹೆಚ್ಚು ಮಂದಿ ಅದರ ಲೋಗೋ ಗಾಗಿಯೇ ಖರೀದಿಸುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳಲಾಗಿದೆ.

&enablejsapi=1&rel=0"> &enablejsapi=1&rel=0" type="application/x-shockwave-flash" width="600" height="450" allowscriptaccess="always" allowfullscreen="false">

ಹೈಡ್ ಫೋನ್ ಚಾಕ್:

ಆಪಲ್‌ ಸ್ಟೋರ್‌ನಲ್ಲಿ ಐಫೋನ್‌ಗೆ ಹೆಡ್‌ಫೋನ್ ಜಾಕ್ ಇಲ್ಲದಿರುವುದನ್ನು ಕೇಳಿ 3.5 ಇಯರ್ ಫೋನ್ ಹಾಕಿಕೊಳ್ಳಲು ಡಾಂಗಲ್ ಹಾಕಿಕೊಳ್ಳಬೇಕು ಮತ್ತು ಒಂದೇ ಸಂದರ್ಧಲ್ಲಿ ಚಾರ್ಜ್ ಮತ್ತು ಹಾಡು ಕೇಳಲು ಮತ್ತೊಂದು ಮಾದರಿಯ ಡಾಂಗಲ್ ಬಳಕೆ ಮಾಡಿಕೊಳ್ಳಬೇಕು ಎಂದನ್ನು ಟ್ರೋಲ್ ಮಾಡಿದೆ.

ನೋಚ್

ಇದಲ್ಲದೇ ನೋಚ್ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡದ ಸ್ಯಾಮ್‌ಸಂಗ್ ಅದನ್ನು ಸಮರ್ಥಿಸಿಕೊಳ್ಳಲು ನೋಚ್ ಡಿಸ್‌ಪ್ಲೇಯಲ್ಲಿ ವಿಡಿಯೋ ನೋಡುವುದು ಸುಂದರ ಅಲ್ಲ ಎನ್ನುವುದನ್ನು ಈ ವಿಡಿಯೋ ಮೂಲಕ ಹೇಳಿದೆ.

ಫಾಸ್ಟ್ ಚಾರ್ಜಿಂಗ್:

ಸ್ಯಾಮ್‌ಸಂಗ್ ತನ್ನ ಟಾಪ್ ಎಂಡ್ ಫೋನ್‌ನಂದಿಗೆ ಉಚಿತವಾಗಿಯೇ ಫಾಸ್ಟ್ ಚಾರ್ಜರ್ ಅನ್ನು ನೀಡಲಿದೆ. ಆದರೆ ಆಪಲ್ ಅದಕ್ಕಾಗಿ ಹೆಚ್ಚುವರಿ ಹಣವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಇದನ್ನು ಟ್ರೂಲ್ ಮಾಡಿದೆ.

ಫಾಸ್ಟ್ ಕೂಡ ಕಡಿಮೆ:

ಇದಲ್ಲದೇ ಆಪಲ್ ಐಪೋನ್ ಹೆಚ್ಚು ಫಾಸ್ಟ್ ಎನ್ನುವವರಿಗೆ ಉತ್ತರವನ್ನು ನೀಡಲು ಸ್ಯಾಮ್‌ಸಂಗ್ ಟ್ರೋಲ್ ಮಾಡಲು ಮುಂದಾಗಿದೆ.

ಹೆಚ್ಚುವರಿ ಸ್ಟೋರೆಜ್

ಆಪಲ್‌ ಫೋನಿನಲ್ಲಿ ಹೆಚ್ಚುವರಿ ಸ್ಟೋರೆಜ್ ಇಲ್ಲ ಎನ್ನುವದನ್ನು ಟಾಗ್ ಕೊಟ್ಟ ಸ್ಯಾಮ್‌ಸಂಗ್ ಇದಕ್ಕಾಗಿ ಕ್ಲಾವ್ಡ್ ಅನ್ನು ಬಳಕೆ ಮಾಡಿಕೊಳ್ಳಿ ಎನ್ನುತ್ತದೆ.

ಇದು ಒಂದು

ಆಪಲ್ ಒಮ್ಮೆಗೆ ಎರಡು ಕಾರ್ಯವನ್ನು ಮಾಡಲು ಸಾಧ್ಯವಿಲ್ಲ ಆದರೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿಯಲ್ಲಿ ಡ್ಯುಯಲ್ ಸ್ಕ್ರಿನ್ ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Samsung Is Back To Trolling Apple In These New Ads. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X