Home
ಸುದ್ದಿಜಾಲ

ಅಬ್ಬಬ್ಬಾ!.ಹಬ್ಬದ ಪ್ರಯುಕ್ತ ಶಿಯೋಮಿ ಸ್ಮಾರ್ಟ್‌ಟಿವಿಗಳ ಮಾರಾಟ ಇಷ್ಟೊಂದಾ?

ಭಾರತದಲ್ಲಿ ಹಬ್ಬಗಳಿಗೆ ಪ್ರಮುಖ ಪ್ರಾಶಸ್ತ್ಯ ಇದ್ದು, ಜನರು ಏನಾದರು ಉಪಕರಣಗಳನ್ನು ಖರೀದಿಸುವುದಿದ್ದರೇ ಹಬ್ಬದ ಸಮಯದಲ್ಲಿಯೇ ಖರೀದಿಸುತ್ತಾರೆ. ಈ ನಿಟ್ಟಿನಲ್ಲಿ ಹಬ್ಬದ ವೇಳೆ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತದೆ. ಇತ್ತೀಚಿಗೆ ಇ-ಕಾಮರ್ಸ್‌ ತಾಣಗಳು ಸಹ ಹಬ್ಬದ ಪ್ರಯುಕ್ತ ಭಾರೀ ರಿಯಾಯಿತಿ ಮತ್ತು ವಿಶೇ‍ಷ ಆಫರ್‌ಗಳನ್ನು ಘೋಷಿಸುತ್ತಾ ಗ್ರಾಹಕರನ್ನು ಸೆಳೆಯುತ್ತಿವೆ. ಈ ಹಬ್ಬದ ಟೈಮ್‌ನಲ್ಲಿ ಶಿಯೋಮಿಯ ಟಿವಿ ಮಾರಾಟದ ಬಗ್ಗೆ ಕೇಳಿದ್ರೆ, ನಿಮಗೆ ಶಾಕ್ ಅನಿಸಬಹುದು.

ದಸರಾ ಮತ್ತು ದೀಪಾವಳಿ

ಹೌದು, ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಚೀನಾ ಮೂಲದ ಶಿಯೋಮಿ ಕಂಪನಿಯು ಅಮೆಜಾನ್, ಫ್ಲಿಪ್‌ಕಾರ್ಟ್‌ ಮತ್ತು ಶಿಯೋಮಿಯ ಅಧಿಕೃತ ತಾಣದಲ್ಲಿ ತನ್ನ ಸ್ಮಾರ್ಟ್‌ ಟಿವಿಗಳಿಗೆ ಡಿಸ್ಕೌಂಟ್‌ ಘೋಷಿಸಿತ್ತು. ಈ ಮೂರು ಇ-ಕಾಮರ್ಸ್‌ ತಾಣಗಳನ್ನು ಒಳಗೊಂಡಂತೆ ಬರೋಬ್ಬರಿ 2,50,000 ಸಂಖ್ಯೆಯ ಶಿಯೋಮಿ ಸ್ಮಾರ್ಟ್‌ಟಿವಿಗಳು ಮಾರಾಟ ಕಂಡಿದ್ದು, ಹೊಸ ದಾಖಲೆ ಎನಿಸಿದೆ ಎಂದು ಕಂಪನಿಯು ಅಧಿಕೃತವಾಗಿ ತಿಳಿಸಿದೆ.

ಫ್ಲಿಪ್‌ಕಾರ್ಟ್‌

ಹಬ್ಬದ ಪ್ರಯುಕ್ತ ಅಮೆಜಾನ್ ಗ್ರೇಟ್‌ ಇಂಡಿಯನ್ ಸೇಲ್ ಮೇಳವನ್ನು ಆಯೋಜಿಸಿದೆ ಹಾಗೆಯೇ ಫ್ಲಿಪ್‌ಕಾರ್ಟ್‌ ದಿ ಬಿಗ್ ಬಿಲಿಯನ್ ಡೇಸ್‌ ಸೇಲ್ ಮೇಳವನ್ನು ಆಯೋಸಿದೆ. ಇನ್ನು ಶಿಯೋಮಿಯು ಸಹ ದೀಪಾವಳಿ ವಿತ್ ಮಿ ಸೇಲ್‌ ಮೇಳವನ್ನು ಗ್ರಾಹಕರಿಗೆ ನೀಡಿತ್ತು. ಈ ಮೂರು ಇ-ಕಾಮರ್ಸ್ ತಾಣಗಳಲ್ಲಿ ಶಿಯೋಮಿಯ ಸ್ಮಾರ್ಟ್‌ ಟಿವಿಗಳಿಗೆ ಅತ್ಯುತ್ತಮ ರಿಯಾಯಿತಿ, ಎಕ್ಸ್‌ಚೇಂಜ್ ಕೊಡುಗೆ, ನೋ ಕಾಸ್ಟ್‌ ಇಎಮ್‌ಐ ಸೌಲಭ್ಯಗಳನ್ನು ನೀಡಲಾಗಿತ್ತು.

43 ಇಂಚಿನ

ಶಿಯೋಮಿಯ ಸ್ಮಾರ್ಟ್‌ಟಿವಿಗಳು ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಅದರೊಂದಿಗೆ ಇ-ಕಾಮರ್ಸ್‌ ತಾಣಗಳಲ್ಲಿನ ಡಿಸ್ಕೌಂಟ್‌ ಸೇರಿದ್ದರಿಂದ ಟಿವಿಗಳು ಭರ್ಜರಿ ಮಾರಾಟ ಕಂಡಿವೆ. ಅಮೆಜಾನ್ ತಾಣದಲ್ಲಿ ಮುಖ್ಯವಾಗಿ 32 ಇಂಚಿನ 'ಮಿ ಟಿವಿ 4C ಪ್ರೊ' ಮತ್ತು 43 ಇಂಚಿನ ಮಿ ಟಿವಿ 4A ಪ್ರೊ ಸ್ಮಾರ್ಟ್‌ಟಿವಿಗಳು ಹೆಚ್ಚಾಗಿ ಸೇಲ್ ಆಗಿದ್ದು, ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿಯೂ ಮಿ ಸ್ಮಾರ್ಟ್‌ಟಿವಿಗಳು ಮುಂಚೂಣಿಯಲ್ಲಿ ಮಾರಾಟ ಆಗಿವೆ.

ಶಿಯೋಮಿಯ

ಶಿಯೋಮಿಯ 32 ಇಂಚಿನ 'ಮಿ ಟಿವಿ 4C ಪ್ರೊ' ಸ್ಮಾರ್ಟ್‌ ಟಿವಿಯು 11,499ರೂ.ಗಳ ಆಫರ್‌ ಪ್ರೈಸ್‌ಟ್ಯಾಗ್‌ ಹೊಂದಿದ್ದು, 43 ಇಂಚಿನ ಮಿ ಟಿವಿ 4A ಪ್ರೊ ಸ್ಮಾರ್ಟ್‌ ಟಿವಿಯು 19,999ರೂ.ಗಳ ಬೆಲೆಯನ್ನು ಹೊಂದಿದೆ. ಹಾಗೆಯೇ ಇತ್ತೀಚಿಗೆ ಶಿಯೋಮಿಯ 'ಮಿ ಟಿವಿ 4X' ಸರಣಿಯಲ್ಲಿ ಬಿಡುಗಡೆ ಆಗಿರುವ 65 ಇಂಚಿನ, 50 ಇಂಚಿನ, 40 ಇಂಚಿನ ಮತ್ತು 43 ಇಂಚಿನ ಸ್ಮಾರ್ಟ್‌ ಟಿವಿಗಳು ಸಹ ಹೆಚ್ಚು ಗಮನ ಸೆಳೆದಿವೆ.

Best Mobiles in India

English summary
Xiaomi says that it has managed to sell more than 250,000 Mi TVs during the festive season sales on Amazon, Flipkart, and Mi.com. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+