ಈ ಘಟನೆ 'ಶಿಯೋಮಿ' ಕಂಪನಿಯನ್ನೆ ಬೆಚ್ಚಿ ಬಿಳಿಸಿದೆ.!!
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅನೇಕ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳ ಎಂಟ್ರಿ ಕೊಡುತ್ತಲೆ ಇದ್ದು, ಇವುಗಳಲ್ಲಿ ಮುಂಚೂಣಿಯ ಸ್ಥಾನ ಕಂಡುಕೊಂಡಿರುವ ಕಂಪನಿಯೆಂದರೇ ಅದು ಶಿಯೋಮಿ. ಜನಪ್ರಿಯ ಶಿಯೋಮಿ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದರ ಮೂಲಕ ಗ್ರಾಹಕರನ್ನು ಬೆಚ್ಚಿ ಬಿಳಿಸುತ್ತಲೆ ಇದ್ದು, ಆದರೆ ಇದೀಗ ಶಿಯೋಮಿ ಕಂಪನಿಯೇ ಬೆಚ್ಚಿ ಬಿದ್ದಿದೆ.!

ಹೌದು, ಇತ್ತೀಚಿಗೆ ಭಾರತದ ಶ್ರೀ ನಗರ ದಿಂದ ಕಲ್ಕತ್ತ ನಗರಕ್ಕೆ ಚಲಿಸುತ್ತಿದ್ದ, ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು ತುಂಬಿದ ಲಾರಿಯೊಂದು ಮಾರ್ಗ ಮಧ್ಯದಲ್ಲಿ ಕಳ್ಳತನವಾಗಿದ್ದು, ಆ ಲಾರಿಯಲ್ಲಿ ಸುಮಾರು ಒಂದು ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳಿದ್ದವು ಎಂದು ತಿಳಿದುಬಂದಿದೆ. ಚಾಲಕ ವಿಶ್ರಾಂತಿಗೆಂದು ಮಾರ್ಗಮಧ್ಯ ಲಾರಿಯನ್ನು ನಿಲ್ಲಿಸದ್ದಾಗ ಈ ಘಟನೆ ನಡೆದಿದೆ.

ಚಾಲಕ ಲಾರಿ ನಿಲ್ಲಿಸಿದಾಗ, ದರೋಡೆ ಕೋರರು ಚಾಲಕನ್ನು ತಳಿಸಿದ, ಮರವೊಂದಕ್ಕೆ ಕಟ್ಟಿಹಾಕಿ ಸ್ಮಾರ್ಟ್‌ಫೋನ್‌ಗಳಿದ್ದ ಲಾರಿಯನ್ನು ಚಲಿಸಿಕೊಂಡು ಹೋಗಿದ್ದಾರೆ. ಸ್ಪಲ್ಪ ದೂರದ ವರೆಗೆ ಹೋಗಿ ಅಲ್ಲಿಂದ ಬೇರೊಂದು ವಾಹನಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ವರ್ಗಯಿಸಿಕೊಂಡು ಪರಾರಿಯಾದರು ಎಂದು ತಿಳಿದಿದೆ. ದರೋಡೆ ಕೋರ ನಾಲ್ಕು ಜನರಿದ್ದರು ಎಂದು ಹೇಳಲಾಗಿದ್ದು, ಸಮೀಪದ ಗ್ರಾಮಸ್ಥರು ಚಾಲಕನನ್ನು ರಕ್ಷಿಸಿ ಪೊಲೀಸ್‌ರಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಪೊಲೀಸ್‌ರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಕಳ್ಳರನ್ನು ಬಂಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂಬುದನ್ನು ಶಿಯೋಮಿ ಕಂಪನಿ ತಿಳಿಸಿದ್ದು, ಇನ್ನು ಮುಂದೆ ತನ್ನ ಸರಕು ವಾಹನಗಳಗೆ ಹೆಚ್ಚಿನ ಭದ್ರತೆ ಒದಗಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.


Click it and Unblock the Notifications








