ಶಿಯೋಮಿಗೆ ಹತ್ತರ ಸಂಭ್ರಮ; ಬಿಡುಗಡೆ ಆಗಲಿವೆ 22 ಉತ್ಪನ್ನಗಳು!

|

ಚೀನಾ ಮೂಲದ ಶಿಯೋಮಿ ಈಗಾಗಲೇ ಜನಪ್ರಿಯ ಸ್ಥಾನ ಪಡೆದಿದ್ದು, ಕೇವಲ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಆಗಿ ಉಳಿದಿಲ್ಲ. ಶಿಯೋಮಿ ಸ್ಮಾರ್ಟ್‌ಫೋನ್ ಜೊತೆ ಜೊತೆಗೆನೇ ಫ್ಯಾಶನ್, ಎಲೆಕ್ಟ್ರಾನಿಕ್ಸ್, ಶೂ, ಟಿ-ಶರ್ಟ್‌, ಫೀಲ್ಟರ್ ಹೀಗೆ ಹತ್ತು ಹಲವು ಉತ್ಪನ್ನಗಳನ್ನು ಪರಿಚಯಿಸಿದೆ. ಇದೀಗ ಶಿಯೋಮಿಯು ಮತ್ತೆ ಹೊಸದಾಗಿ 22 ಉತ್ಪನ್ನಗಳನ್ನು ಬಿಡುಗಡೆ ಮಾಡಲು ಕಾರ್ಯಕ್ರಮವೊಂದನ್ನು ರೂಪಿಸಿದೆ.

ಹೌದು

ಹೌದು, ಶಿಯೋಮಿ ಸಂಸ್ಥೆಯು ಹತ್ತ ವರ್ಷಗಳನ್ನು ಪೂರೈಸುವ ಹೊಸ್ತಿಲಲ್ಲಿದೆ. ಈ ನಿಟ್ಟಿನಲ್ಲಿ ಶಿಯೋಮಿಯು ಚೀನಾದಲ್ಲಿ ಇದೇ ಏಪ್ರಿಲ್ 3, 2020ರಂದು 10ನೇ ವಾರ್ಷಿಕೋತ್ಸವವನ್ನು ಮತ್ತು ಮಿ ಫ್ಯಾನ್ಸ್‌ ಉತ್ಸವ ಒಟ್ಟಾಗಿ ಆಚರಿಸಲು ಸಜ್ಜಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 22 ಹೊಸ ಬಗೆಯ ಉತ್ಪನ್ನಗಳನ್ನು ಅನಾವರಣ ಮಾಡುವುದಾಗಿ ಕಂಪನಿಯು ಹೇಳಿಕೊಂಡಿದೆ. ಆದ್ರೆ ಆ ಹೊಸ ಉತ್ಪನ್ನಗಳು ಯಾವುವು ಎಂಬ ಬಗ್ಗೆ ಕಂಪನಿ ಸರ್‌ಪ್ರೈಸ್‌ ಕಾಯ್ದುಕೊಂಡಿದೆ.

ಕಂಪನಿಯು

ಶಿಯೋಮಿ ಕಂಪನಿಯು ಕಳೆದ ಬಾರಿ ಮಿ ಫ್ಯಾನ್ ಫೆಸ್ಟಿವಲ್ (2019) ಸಂದರ್ಭದಲ್ಲಿ 20 ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಆ ಆಧಾರದ ಮೇಲೆ ಈ ಭಾರಿ ಕಾರ್ಯಕ್ರಮದಲ್ಲಿ ಬಹುತೇಕ ಸ್ಮಾರ್ಟ್‌ ಹೋಮ್ ಉತ್ಪನ್ನಗಳು ಬಿಡುಗಡೆ ಆಗಲಿವೆ ಎಂದು ನಿರೀಕ್ಷಿಸಲಾಗಿದೆ. ಅವುಗಳಲ್ಲಿ ಸ್ಮಾರ್ಟ್‌ ಸ್ಪೀಕರ್, ಸ್ಮಾರ್ಟ್‌ ಡಿಸ್‌ಪ್ಲೇ, ಸ್ಮಾರ್ಟ್‌ ಫ್ಯಾನ್, ಸ್ಮಾರ್ಟ್‌ ಲೈಟ್ಸ್, ಸ್ಮಾರ್ಟ್‌ ಬೆಲ್, ಸೇರಿದಂತೆ ಸ್ಮಾರ್ಟ್‌ ಗೃಹ ಉಪಯೋಗಿ ಉತ್ಪನ್ನಗಳು ಲಾಂಚ್ ಆಗಲಿವೆ ಎನ್ನಲಾಗಿದೆ.

ಫೋನ್‌ಗಳ

ಮೊಬೈಲ್ ಫೋನ್‌ಗಳ ಮೇಲಿನ GST ತೆರಿಗೆ ಶೇ.18% ಆಗಲಿದೆ ಎಂದು ಇತ್ತೀಚಿಗಷ್ಟೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಹೀಗಾಗಿ ಶಿಯೋಮಿ ಸಂಸ್ಥೆಯು ಸದ್ಯದಲ್ಲಿಯೇ ತನ್ನ ರೆಡ್ಮಿ ಮತ್ತು ಮಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ಘೋಷಿಸಿದೆ. ಇನ್ನು ಸ್ಮಾರ್ಟ್‌ಫೋನ್‌ಗಳ ಹೊಸ ಪ್ರೈಸ್‌ ರೇಂಜ್ ಬಗ್ಗೆ ಮಾಹಿತಿ ತಿಳಿಯಲು ಗ್ರಾಹಕರು ಅಧಿಕೃತ mi.com ವೆಬ್‌ಸೈಟ್‌ ಭೇಟಿ ನೀಡಿರಿ.

15 ಕೋಟಿ ರೂ. ದೇಣಿಗೆ ಕೊಟ್ಟ ಶಿಯೋಮಿ

15 ಕೋಟಿ ರೂ. ದೇಣಿಗೆ ಕೊಟ್ಟ ಶಿಯೋಮಿ

ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕು ಇಡೀ ವಿಶ್ವವನ್ನೇ ನಲುಗಿಸಿ ಬಿಟ್ಟಿದೆ. ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಬ್ರೇಕ್ ಹಾಕಲು ಭಾರತ ಹೋರಾಡುತ್ತಿದೆ. ಈ ಹಿನ್ನಲೆಯಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಶಿಯೋಮಿ ಪಿಎಂ ಪರಿಹಾರ ನಿಧಿ ಸೇರಿದಂತೆ ವಿವಿಧ ಟ್ರಸ್ಟ್‌ಗಳಿಗೆ ಒಟ್ಟು 15 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಹಾಗೆಯೇ ವೈದ್ಯರಿಗೆ, ನರ್ಸ್‌ಗಳಿಗೆ ಲಕ್ಷಾಂತರ ಮಾಸ್ಕ್ ಮತ್ತು ಹಜ್ಮತ್ ಸೂಟ್‌ಗಳನ್ನು ಸಹ ನೀಡಿದೆ.

Best Mobiles in India

English summary
Xiaomi will be launching the 22 products as part of the Mi Fan Festival and to celebrate the brand's 10-year anniversary..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X