Subscribe to Gizbot

ಚೀನಾ ಶ್ಯೋಮಿ ಇನ್ನು ಮೇಡ್ ಇನ್ ಇಂಡಿಯಾ ಶ್ಯೋಮಿ

Written By:

'ಮೇಕ್ ಇನ್ ಇಂಡಿಯಾ' 'ಮೇಡ್ ಇನ್ ಆಂಧ್ರಾ ಪ್ರದೇಶ್' ಪ್ರೊಗ್ರಾಮ್ ಅಡಿಯಲ್ಲಿ ರಾಜ್ಯದ ಮುಂಖ್ಯಂತ್ರಿ ಎನ್ ಚಂದ್ರಬಾಬು ನಾಯ್ಡು ಶ್ಯೋಮಿಯ ಪ್ರಥಮ ಭಾರತದಲ್ಲಿ ತಯಾರಾದ ಫೋನ್ ಅನ್ನು ವಿಶಾಖ ಪಟ್ಟಣಂ ನಲ್ಲಿ ಲಾಂಚ್ ಮಾಡಲಿದ್ದಾರೆ.

ಚೀನಾ ಶ್ಯೋಮಿ ಇನ್ನು ಮೇಡ್ ಇನ್ ಇಂಡಿಯಾ ಶ್ಯೋಮಿ

ಭಾರತದಲ್ಲಿ ತನ್ನ ಮುಂದಿನ ಯೋಜನೆಗಳ ಕುರಿತು ಈ ಈವೆಂಟ್‌ನಲ್ಲಿ ಶ್ಯೋಮಿ ತಿಳಿಸಲಿದ್ದು, ಅಧಿಕೃತ ಸುದ್ದಿಗೋಷ್ಟಿಯಲ್ಲಿ ಕಂಪೆನಿ ತಿಳಿಸಿದೆ.

ಚೀನಾದ ಕಡಿಮೆ ವೆಚ್ಚದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶ್ಯೋಮಿ, ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ಮೊಬೈಲ್ ತಯಾರಿಕಾ ಕಂಪೆನಿ ಎಂದೆನಿಸಿದೆ. ಆಂಧ್ರಾ ಮುಖ್ಯಮಂತ್ರಿಗಳ ಚೀನಾ ಭೇಟಿಯ ನಂತರ ಶ್ಯೋಮಿ ವಿಶಾಖಪಟ್ಟಣಕ್ಕೆ ಬಂದು ಭಾರತದಲ್ಲಿ ತನ್ನ ಪ್ರಥಮ ತಯಾರಿಕಾ ಫೋನ್‌ನ ಘೋಷಣೆಯನ್ನು ಮಾಡಿದೆ.

ಓದಿರಿ: ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?

2017 ರಲ್ಲಿ ಜಾಗತಿಕ ಮೊಬೈಲ್ ಮಾರಾಟ 1.7 ಬಿಲಿಯನ್ ಏರಿಕೆಯನ್ನು ಕಂಡಿದ್ದು 2017 ರಲ್ಲಿ ಚೀನಾದ ನಂತರ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ತನ್ನ ಹಾಜರಾತಿಯನ್ನು ಭಾರತದಲ್ಲಿ ಭದ್ರಗೊಳಿಸುವ ನಿಟ್ಟಿನಲ್ಲಿರುವ ಕಂಪೆನಿ ದೇಶದಲ್ಲಿ ಮಾರುಕಟ್ಟೆ ಷೇರನ್ನು ಹೆಚ್ಚಿಸುವ ಇರಾದೆಯಲ್ಲಿದೆ.

English summary
Under the 'Make in India, Made in Andhra Pradesh' programme, state Chief Minister N Chandrababu Naidu will launch the Xiaomi's first India-manufactured phone in Visakhapatnam on Monday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot