Home
ಸುದ್ದಿಜಾಲ

Xiaomi TV X ಸರಣಿ ಸ್ಮಾರ್ಟ್‌ಟಿವಿ ಅನಾವರಣ...ಪ್ಯಾಚ್‌ವಾಲ್+ ಸೌಲಭ್ಯ, ಬೆಲೆ ಎಷ್ಟು!?

ಶಿಯೋಮಿ ಇಂದು ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ವಿವಿಧ ಹೊಸ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ಸ್ಮಾರ್ಟ್‌ಟಿವಿಗಳು ಸಹ ಪ್ರಮುಖವಾಗಿವೆ. ಅದರಂತೆ ನಾಲ್ಕು ವೇರಿಯಂಟ್‌ ಆಯ್ಕೆಯ ಶಿಯೋಮಿ ಟಿವಿ X (Xiaomi TV X) ಸ್ಮಾರ್ಟ್‌ಟಿವಿಗಳನ್ನು ಅನಾವರಣ ಮಾಡಲಾಗಿದ್ದು, ಈ ಟಿವಿಗಳು ಗೂಗಲ್‌ ಟಿವಿ ಓಎಸ್‌ (Google TV OS) ಬೆಂಬಲ ಪಡೆದುಕೊಂಡಿದೆ.

ಹೌದು, ಭಾರತದಲ್ಲಿ ಹೊಸ ಶಿಯೋಮಿ ಸ್ಮಾರ್ಟ್ ಟಿವಿ ಸರಣಿಯನ್ನು ಲಾಂಚ್‌ ಮಾಡಲಾಗಿದ್ದು, ಈ ಶಿಯೋಮಿ ಟಿವಿ X ಸರಣಿಯು (Xiaomi TV X) 43, 50, 55 ಮತ್ತು 65 ಇಂಚಿನ ಟಿವಿಗಳ ಆಯ್ಕೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಬೆಜೆಲ್‌ಲೆಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಡಾಲ್ಬಿ ವಿಷನ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಇದರಲ್ಲಿದೆ. ಹಾಗಿದ್ರೆ, ಬನ್ನಿ ಈ ಹೊಸ ಟಿವಿಯ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿದುಕೊಳ್ಳೋಣ.

Xiaomi TV X ಸರಣಿ ಸ್ಮಾರ್ಟ್‌ಟಿವಿ ಅನಾವರಣ...ಪ್ಯಾಚ್‌ವಾಲ್+ ಸೌಲಭ್ಯ

ಶಿಯೋಮಿ ಟಿವಿ X ಡಿಸ್‌ಪ್ಲೇ ವಿವರ: ಇತರೆ ಸ್ಮಾರ್ಟ್‌ಟಿವಿಗಳಿಗಿಂತ ಈ ಟಿವಿಗಳು ಬಹಳ ಭಿನ್ನವಾಗಿವೆ. ಮೊದಲೇ ತಿಳಿಸಿದಂತೆ ಈ ಸರಣಿಯಲ್ಲಿ 43, 50, 55 ಮತ್ತು 65 ಇಂಚಿನ ವೇರಿಯಂಟ್ ಟಿವಿಗಳು ಇದ್ದು, HDR10 ಮತ್ತು ಡಾಲ್ಬಿ ವಿಷನ್ (Dolby Vision) ಜೊತೆಗೆ 4K ಬೆಜೆಲ್-ಲೆಸ್ ಆಯ್ಕೆ ಪಡೆದುಕೊಂಡಿವೆ. ಈ ಮೂಲಕ ಆಕರ್ಷಕ ವಿನ್ಯಾಸ ತನ್ನದಾಗಿಸಿಕೊಂಡಿವೆ.

ಶಿಯೋಮಿ ಟಿವಿ X ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಟಿವಿಯ ಎಲ್ಲಾ ನಾಲ್ಕು ಟಿವಿಗಳು ಸಹ ಇತ್ತೀಚಿನ ಗೂಗಲ್‌ ಟಿವಿ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಲಿದ್ದು, ಆಂಬಿಯೆಂಟ್ ಮೋಡ್, ಗೂಗಲ್‌ ಅಸಿಸ್ಟೆಂಟ್‌ ಮತ್ತು ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌ನಂತಹ ಫೀಚರ್ಸ್‌ಗಳೊಂದಿಗೆ ರನ್ ಆಗುತ್ತವೆ. ಇದರೊಂದಿಗೆ ಮಾಲಿ G52 MP1 GPU ನೊಂದಿಗೆ ಜೋಡಿಸಲಾದ ARM ಕಾರ್ಟೆಕ್ಸ್-A55 ಪ್ರೊಸೆಸರ್ ಬಲ ಪಡೆದುಕೊಂಡಿವೆ. ಉಳಿದಂತೆ 2GB RAM ಮತ್ತು 8GB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಲಭ್ಯ.

ಪ್ಯಾಚ್‌ವಾಲ್: ಈ ಟಿವಿಯಲ್ಲಿ ಪ್ಯಾಚ್‌ವಾಲ್ (Patchwall features) ಎಂಬ ಹೊಸ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅದರಂತೆ ಈ ಹೊಸ ಶಿಯೋಮಿ ಟಿವಿಗಳು ಲೈವ್ ಟಿವಿಗಾಗಿ ಹೊಸ ಪ್ಯಾಚ್‌ವಾಲ್ + ಸಾಫ್ಟ್‌ವೇರ್ ಜೊತೆಗೆ ಇನ್-ಹೌಸ್ ಪ್ಯಾಚ್‌ವಾಲ್ ಸಿಸ್ಟಮ್‌ನೊಂದಿಗೆ (In-house patchwall system) ನಿರ್ಮಾಣ ಆಗಿವೆ. ಈ ಮೂಲಕ ಬಳಕೆದಾರರು 200 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಡಾಲ್ಬಿ ಆಡಿಯೋ, ಡಿಟಿಎಸ್‌ ವರ್ಚುವಲ್:X, DTS:X ಜೊತೆಗೆ 30W ಸ್ಟೀರಿಯೋ ಸ್ಪೀಕರ್‌ ಅನ್ನು ಹೊಂದಿದ್ದು, ಇವು ನಿಮಗೆ ಉತ್ತಮ ಆಡಿಯೋ ಅನುಭವ ನೀಡುತ್ತವೆ. ಇದರಿಂದಾಗಿ ನೀವು ಬೇರೆ ಸ್ಪೀಕರ್‌ಗಳನ್ನ ಈ ಟಿವಿಗೆ ಜೋಡಿಸುವ ಪ್ರಮೇಯವೇ ಬರುವುದಿಲ್ಲ. ಉಳಿದಂತೆ ಮೂರು ಹೆಚ್‌ಡಿಎಮ್‌ಐ 2.1 ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಒಂದು ಈಥರ್ನೆಟ್, ಎವಿ, ಆಪ್ಟಿಕಲ್, 3.5mm ಮತ್ತು ಆಂಟೆನಾ ಪೋರ್ಟ್‌ನ ಕನೆಕ್ಟಿವಿಟಿ ಸೌಲಭ್ಯ ಈ ಟಿವಿಯಲ್ಲಿದೆ.

ಶಿಯೋಮಿ ಟಿವಿ X ಸರಣಿಯ ಬೆಲೆ ಹಾಗೂ ಲಭ್ಯತೆ: ಮೊದಲೇ ತಿಳಿಸಿದಂತೆ ಈ ಟಿವಿ ಹಲವು ವೇರಿಯಂಟ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ 43 ಇಂಚಿನ ಮಾದರಿಗೆ 29,999ರೂ.ಬೆಲೆ ಇದೆ. ಹಾಗೆಯೇ 50 ಇಂಚಿನ ಟಿವಿಗೆ 35,999 ರೂ.ಗಳು ಮತ್ತು 55 ಇಂಚಿನ ಟಿವಿಗೆ 40,499 ರೂ.ಗಳು, 65 ಇಂಚಿನ ಸ್ಮಾರ್ಟ್‌ಟಿವಿಗೆ 61,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

Xiaomi TV X ಸರಣಿ ಸ್ಮಾರ್ಟ್‌ಟಿವಿ ಅನಾವರಣ...ಪ್ಯಾಚ್‌ವಾಲ್+ ಸೌಲಭ್ಯ

ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಆಗಸ್ಟ್ 4 ರಿಂದ ಮಾರಾಟಕ್ಕೆ ಲಭ್ಯ ಇವೆ. ಆದರೆ, 65 ಇಂಚಿನ ವೇರಿಯಂಟ್‌ ಆಯ್ಕೆಯ ಟಿವಿ ಮಾತ್ರ ಆಗಸ್ಟ್ 5 ರಿಂದ ಮಾರಾಟಕ್ಕೆ ಲಭ್ಯ ಇರಲಿದೆ. ಈ ಸ್ಮಾರ್ಟ್‌ಟಿವಿಗಳನ್ನು ನೀವು mi.com, ಫ್ಲಿಪ್‌ಕಾರ್ಟ್‌ ಮತ್ತು ಶಿಯೋಮಿ ರಿಟೇಲರ್‌ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದು. ಅದರಲ್ಲೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 3,000 ವರೆಗೆ ರಿಯಾಯಿತಿ ಇದೆ.

Best Mobiles in India

English summary
The new Xiaomi Smart TV series has been launched in India and this Xiaomi TV X series has have 43, 50, 55 and 65 inch TVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+