Home
ಸುದ್ದಿಜಾಲ

ಶಿಯೋಮಿ ವ್ಯಾಲಂಟೇನ್ಸ್‌ ಡೇ ಸೇಲ್‌: ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಭಾರೀ ಆಫರ್!

ವ್ಯಾಲಂಟೇನ್ಸ್‌ ಡೇ ಪ್ರಯುಕ್ತ ಜನಪ್ರಿಯ ಇ-ಕಾಮರ್ಸ್‌ ತಾಣಗಳು ಸೇರಿದಂತೆ ಪ್ರಮುಖ ಮೊಬೈಲ್ ಕಂಪನಿಗಳು ಸಹ ಭರ್ಜರಿ ಕೊಡುಗೆಗಳನ್ನು ಘೋಷಿಸಿವೆ. ಆ ಪೈಕಿ ಶಿಯೋಮಿ ಸಂಸ್ಥೆಯು ಸಹ ಪ್ರೇಮಿಗಳ ದಿನದ ಪ್ರಯುಕ್ತ ವ್ಯಾಲಂಟೇನ್ಸ್‌ ಡೇ ಸೇಲ್‌ ಆಯೋಜಿಸಿದ್ದು, ಆಯ್ದ ಸ್ಮಾರ್ಟ್‌ ಡಿವೈಸ್‌ಗಳು ಹಾಗೂ ಇತರೆ ಸಂಸ್ಥೆಯ ಇತರೆ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿ ತಿಳಿಸಿದೆ.

ಶಿಯೋಮಿ

ಹೌದು, ಶಿಯೋಮಿ ತನ್ನ ವೆಬ್‌ಸೈಟ್‌ನಲ್ಲಿ ವ್ಯಾಲಂಟೇನ್ಸ್‌ ಡೇ ಸೇಲ್‌ ಆಯೋಜಿಸಿದ್ದು, ಸಂಸ್ಥೆಯ ಆಯ್ದ ಉತ್ಪನ್ನಗಳ ಮೇಲೆ ಭಾರೀ ಡಿಸ್ಕೌಂಟ್ ನೀಡುತ್ತಿದೆ. ಈ ವಿಶೇಷ ಮಾರಾಟದಲ್ಲಿ ಧರಿಸಬಹುದಾದ ಗ್ಯಾಡ್ಜೆಟ್ಸ್‌, ಆಡಿಯೋ ಉತ್ಪನ್ನಗಳು, ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ IoT ಡಿವೈಸ್‌ಗಳಿಗೆ ರಿಯಾಯಿತಿಯನ್ನು ಲಭ್ಯ ಮಾಡಿದೆ. ಆದರೆ ಈ ಸೇಲ್‌ ಆಫರ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಕಾಣಿಸಿಕೊಂಡಿಲ್ಲ.

ಆಚರಿಸುತ್ತಿದೆ

ವ್ಯಾಲೆಂಟೈನ್ಸ್ ಡೇ ಜೊತೆಗೆ ಶಿಯೋಮಿಯು ಮೂರು ವರ್ಷಗಳ ಮಿ ಟಿವಿ ವಾರ್ಷಿಕೋತ್ಸವ ಸಹ ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಮಿ ಟಿವಿಗಳ ಮೇಲೆಯು ಭರ್ಜರಿ ರಿಯಾಯಿತಿ ತಿಳಿಸಿದೆ. ಸಂಸ್ಥೆಯ ಮಿ ಟಿವಿ 4A Pro (43 ಇಂಚು) ಡಿವೈಸ್ ಬೆಲೆಯು 23,999ರೂ. ಆಗಿದೆ. ಮಿ ಟಿವಿ 4X (43 ಇಂಚು) ಡಿವೈಸ್‌ ಬೆಲೆಯು 27,999ರೂ. ಆಗಿದ್ದು, ಹಾಗೆಯೇ ಮಿ ಟಿವಿ 4X (50 ಇಂಚು) ಡಿವೈಸ್‌ ಬೆಲೆಯು 33,999ರೂ.ಆಗಿದೆ. ಇದರೊಂದಿಗೆ ಸಂಸ್ಥೆಯ ಮಿ ಮಿ ಟಿವಿ Horizon ಆವೃತ್ತಿ (32-ಇಂಚು) ಟಿವಿಗೆ 500 ರೂ.ಗಳ ರಿಯಾಯಿತಿ ಲಭ್ಯ ಇದ್ದು, ಈಗ 15,499ರೂ.ಗೆ ಲಭ್ಯ.

ಡಿವೈಸ್‌

ಮಿ ಟಿವಿ ಸ್ಟಿಕ್ ಮತ್ತು ಮಿ ಬಾಕ್ಸ್ 4K ಡಿವೈಸ್‌ಗಳ ಮೇಲೆಯು ರಿಯಾಯಿತಿ ಇದ್ದು, ಇವುಗಳು ಕ್ರಮವಾಗಿ 2,299 ಮತ್ತು 3,299ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ. ಇನ್ನು ಸಂಸ್ಥೆಯ ಆಡಿಯೊಗೆ ಸಂಬಂಧಿಸಿದಂತೆ, ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ 2 ಬೆಲೆ 2,999ರೂ.ಆಗಿದೆ. ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ಸ್ 2C ಬೆಲೆ 2,199ರೂ. ಆಗಿದೆ. ಮಿ ಡ್ಯುಯಲ್ ಡ್ರೈವರ್ ಇನ್-ಇಯರ್ ಇಯರ್‌ಫೋನ್‌ 699ರೂ. ಬೆಲೆ ಹೊಂದಿದೆ.

ಶಿಯೋಮಿ

ರೆಡ್ಮಿ ಪವರ್ ಬ್ಯಾಂಕ್ ಡಿವೈಸ್‌ ಮೇಲೆ 200ರೂ.ಗಳ ಬೆಲೆ ಕಡಿತವಾಗಿದ್ದು, 1,199ರೂ. ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಶಿಯೋಮಿ ಮಿ ವಾಚ್ ರಿವಾಲ್ವ್ ಡಿವೈಸ್‌ 10,999ರೂ.ಗಳ ಪ್ರೈಸ್‌ ಅನ್ನು ಹೊಂದಿದ್ದು, ಆದರೆ ಈ ಸೇಲ್‌ನಲ್ಲಿ 7,999ರೂ.ಗಳಿಗೆ ಲಭ್ಯವಿದೆ. ಹಾಗೆಯೇ ರೆಡ್ಮಿ ಬ್ಯಾಂಡ್ ಡಿವೈಸ್‌ 200ರೂ. ಡಿಸ್ಕೌಂಟ್‌ ಪಡೆದಿದ್ದು, 1,399ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
Xiaomi has introduced a special Valentine's Day sale offering discounts on a number of Xiaomi products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+