Subscribe to Gizbot

ಗೂಗಲ್ ನಡೆ ಅನುಸರಿಸುತ್ತಿರುವ ಶಿಯೋಮಿ: ಮುಂದಿನ ವರ್ಷದಲ್ಲಿ ಭಾರತಕ್ಕೇ ಹೊಸ ಸೇವೆ! ಯಾವುವು?

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಮೂಲಕವೇ ಗ್ರಾಹಕರ ಮನ ಗೆದ್ದಿರುವ ಚೀನಾ ಮೂಲದ ಶಿಯೋಮಿ ಕಂಪನಿಯೂ ದಿನಕ್ಕೊಂದು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ತೀವ್ರಗತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಗೂಗಲ್ ಕಾರ್ಯಯೋಜನೆಯನ್ನು ಅನುಸರಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದೆ.

ಗೂಗಲ್ ಮಾದರಿ ನಡೆ ಅನುಸರಿಸುತ್ತಿರುವ ಶಿಯೋಮಿ

ಓದಿರಿ: ಮೊಬೈಲ್ ಡೇಟಾ ಬಳಕೆಯಲ್ಲಿ ಮಾತ್ರವೇ ಭಾರತ ನಂ.1: ಆದರೆ ಓಕ್ಲಾ ಬಿಚ್ಚಿಟ್ಟ ಸತ್ಯವೇ ಬೇರೆ..!

ಶಿಯೋಮಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ ಶೂ, ಸ್ಮಾರ್ಟ್‌ ಟಿವಿ( ಭಾರತದಲ್ಲಿ ಸದ್ಯ ಲಭ್ಯವಿಲ್ಲ) ಸ್ಮಾರ್ಟ್‌ ಹೋಮ್ ಉತ್ಪನ್ನಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಅಲ್ಲದೇ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಗ್ರಾಹಕರ ಮನಗೆದ್ದಿದೆ. ಇದೇ ಹಿನ್ನಲೆಯಲ್ಲಿ ಹೊಸದೊಂದು ಸಾಹಸಕ್ಕೆ ಕೈ ಹಾಕಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇ-ವಾಹನಗಳ ಉತ್ಪಾದನೆ:

ಇ-ವಾಹನಗಳ ಉತ್ಪಾದನೆ:

ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಇ-ವಾಹನಗಳ ಭರಾಟೆ ಆರಂಭವಾಗಿಲ್ಲ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಗೆ ಬ್ಯಾಟರಿ ಚಾಲಿತ ಇ-ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯೊಂದನ್ನು ಶಿಯೋಮಿ ರೂಪಿಸಿದೆ ಎನ್ನಲಾಗಿದೆ. ಈಗಾಗಲೇ ಪ್ರಯತ್ನವನ್ನು ಆರಂಭಿಸಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಮೊದಲಿಗೆ ಬೈಕ್‌- ಸ್ಕೂಟರ್:

ಮೊದಲಿಗೆ ಬೈಕ್‌- ಸ್ಕೂಟರ್:

ಈಗಾಗಲೇ ಚೀನಾದಲ್ಲಿ ವಾಯು ಮಾಲಿನ್ಯವೂ ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಹಿನ್ನಲೆಯಲ್ಲಿ ಇ-ವಾಹನಗಳು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿವೆ. ಈ ಹಿನ್ನಲೆಯಲ್ಲಿ ಭಾರತದಲ್ಲಿಯೂ ಪೇಟ್ರೋಲ್ ಬೆಲೆ ಹೆಚ್ಚಾಗಿರುವ ಕಾರಣ ಮೊದಲಿಗೆ ದೇಶದಲ್ಲಿ ಎಲೆಕ್ಟ್ರಿಕ್ ಬೈಕ್‌- ಸ್ಕೂಟರ್ ಗಳು ಕ್ಲಿಕ್ ಆಗಲಿದ್ದು, ಇದಕ್ಕಾಗಿ ಶಿಯೋಮಿ ಭಾರತದಲ್ಲಿ ಇ-ವಾಹನಗಳು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಇದಲ್ಲದೇ ಪೇಮೆಂಟ್ ಬ್ಯಾಂಕ್:

ಇದಲ್ಲದೇ ಪೇಮೆಂಟ್ ಬ್ಯಾಂಕ್:

ಶಿಯೋಮಿ ಮತ್ತೊಂದು ಯೋಜನೆಯನ್ನು ರೂಪಿಸಲು ಮುಂದಾಗಿದೆ. ಈಗಾಗಲೇ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಸೇವೆಯೂ ಹೆಚ್ಚಿನ ಆದ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಪೇಮೆಂಟ್ ಬ್ಯಾಂಕ್ ವೊಂದನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿಯೂ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi wants to foray into electric vehicles, payments space in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot