Home
ಸುದ್ದಿಜಾಲ

ಶಿಯೋಮಿಯ ಹೊಸ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌ಗೆ ರೆಡಿ!..ಅಬ್ಬರಿಸೋದು ಪಕ್ಕಾ!

ಟೆಕ್‌ ಮಾರುಕಟ್ಟೆಯಲ್ಲಿ ಶಿಯೋಮಿಯ ಸ್ಮಾರ್ಟ್‌ಡಿವೈಸ್‌ಗಳು ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಇದರ ನಡುವೆ ಸ್ಮಾರ್ಟ್‌ಫೋನ್‌ ಹೊರತುಪಡಿಸಿ ಸ್ಮಾರ್ಟ್‌ವಾಚ್‌ ಹಾಗೂ ಇಯರ್‌ಬಡ್ಸ್‌ ಮತ್ತು ಫಿಟ್‌ನೆಸ್‌ಬ್ಯಾಂಡ್‌ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ಹೆಚ್ಚಿನ ಬೇಡಿಕೆಯೇ ಇದೆ. ಇದರ ಭಾಗವಾಗಿ ಈಗ ಶಿಯೋಮಿ ಹೊಸದಾಗಿ ಸ್ಮಾರ್ಟ್‌ವಾಚ್‌ ಹಾಗೂ ಇಯರ್‌ಬಡ್ಸ್‌ ಅನಾವರಣ ಮಾಡಲು ಮುಂದಾಗಿದ್ದು, ಈಗಾಗಲೇ ಟೆಕ್‌ ವಲಯದಲ್ಲಿ ಈ ಗ್ಯಾಜೆಟ್‌ಗಳ ಕೆಲವು ಮಾಹಿತಿಗಳು ಲೀಕ್‌ ಆಗಿವೆ.

ಶಿಯೋಮಿಯ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌ಗೆ ರೆಡಿ!..ಅಬ್ಬರಿಸೋದು ಪಕ್ಕಾ!

ಹೌದು, ಲಾಂಚ್‌ ಆಗುವ ಮುನ್ನವೇ ಶಿಯೋಮಿಯ ಶಿಯೋಮಿ ವಾಚ್ S1 ಪ್ರೊ ಹಾಗೂ ಶಿಯೋಮಿ ಬಡ್ಸ್ 4 ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅನಾವರಣ ಆಗಲಿವೆ. ಈ ಗ್ಯಾಜೆಟ್‌ಗಳು ವಿವಿಧ ರೀತಿಯ ಹೊಸ ಫೀಚರ್ಸ್‌ನೊಂದಿಗೆ ಲಗ್ಗೆ ಇಡಲಿವೆ ಎನ್ನಲಾಗಿದ್ದು, ಲೀಕ್‌ ಆದ ಮಾಹಿತಿ ಪ್ರಕಾರ ನಿರೀಕ್ಷಿತ ಬೆಲೆ ಎಷ್ಟು?, ಯಾವಾಗ ಲಾಂಚ್ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಶಿಯೋಮಿ ವಾಚ್ S1 ಪ್ರೊ ಪ್ರಮುಖ ಫೀಚರ್ಸ್‌

ಶಿಯೋಮಿ ವಾಚ್ S1 ಪ್ರೊ ಸ್ಮಾರ್ಟ್‌ವಾಚ್‌ 1.47 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದ್ದು, ಇದರ ಸುತ್ತಲಿನ ಬೆಜೆಲ್‌ಗಳು ತೆಳುವಾಗಿ ಆಕರ್ಷಕ ನೋಟ ನೀಡಲಿವೆ ಹಾಗೆಯೇ ವೃತ್ತಾಕಾರದ ಬಟನ್‌ನೊಂದಿಗೆ ವೃತ್ತಾಕಾರದ ಡಯಲ್ ಅನ್ನು ಹೊಂದಿರುವುದು ಇನ್ನಷ್ಟು ವಿಶೇಷ. ಈ ಮೂಲಕ ಈ ವಾಚ್‌ 480 x 480 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರಲಿದ್ದು, ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವುದಂತೂ ಪಕ್ಕಾ.

ಹಾಗೆಯೇ ಈ ವಾಚ್ ಹಲವಾರು ಆರೋಗ್ಯ ಮತ್ತು ಫಿಟ್‌ನೆಸ್ ಸಂಬಂಧಿತ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ಹೃದಯ ಬಡಿತ ಮಾನಿಟರಿಂಗ್, SPO2 ಮಾನಿಟರಿಂಗ್ ಇತ್ಯಾದಿಗಳಿಗೆ ಬೆಂಬಲ ನೀಡಲಿದೆ ಎನ್ನಲಾಗಿದೆ. ಜೊತೆಗೆ 100 ಫಿಟ್‌ನೆಸ್ ಮೋಡ್‌ಗಳ ಆಯ್ಕೆ ಸಹ ಇದರಲ್ಲಿದ್ದು, ಐಓಎಸ್‌ ಹಾಗೂ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಸುಲಭವಾಗಿ ಬೆಂಬಲ ನೀಡುತ್ತದಂತೆ.

ಶಿಯೋಮಿಯ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌ಗೆ ರೆಡಿ!..ಅಬ್ಬರಿಸೋದು ಪಕ್ಕಾ!

ಶಿಯೋಮಿ ವಾಚ್ S1 ಪ್ರೊ ಸ್ಮಾರ್ಟ್‌ವಾಚ್‌ ನೀರಿನ ಪ್ರತಿರೋಧಕ್ಕಾಗಿ 5ATM ರೇಟಿಂಗ್ ಹೊಂದಿರಲಿದ್ದು, ಯವುದೇ ಆತಂಕ ಇಲ್ಲದೆ ಎಲ್ಲಾ ಖುತುವಿನಲ್ಲೂ ಬಳಕೆ ಮಾಡಬಹುದಾದ ಸೌಲಭ್ಯ ಕಲ್ಪಿಸಿಕೊಡಲಿದೆ ಎಂದು ತಿಳಿದುಬಂದಿದೆ.

ಶಿಯೋಮಿ ವಾಚ್ S1 ಪ್ರೊ ಬ್ಯಾಟರಿ ಸಾಮರ್ಥ್ಯ

ಇನ್ನು ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಕಪ್‌ ನೀಡಲಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ, ಈ ವಾಚ್‌ ವಾಯರ್‌ಲೆಸ್‌ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತಿರುವುದು ಮತ್ತೊಂದು ವಿಶೇಷ ಎನ್ನಬಹುದು. ಈ ಬಗ್ಗೆ ಶಿಯೋಮಿ ಮಾಹಿತಿ ದೃಢಪಡಿಸಿದೆ.

ಶಿಯೋಮಿ ಇಯರ್‌ಬಡ್ಸ್‌4 ಫೀಚರ್ಸ್‌

ಇನ್ನು ಲಾಂಚ್‌ ಆಗಲಿರುವ ಶಿಯೋಮಿ ಇಯರ್‌ಬಡ್ಸ್‌4 ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ಓಪನ್ ಇಯರ್‌ ವಿನ್ಯಾಸ ಹೊಂದಿರುವುದರಿಂದ ಕಿವಿಗೆ ಆರಾಮದಾಯಕ ಅನುಭವ ನೀಡುತ್ತವೆ. ಇದರೊಂದಿಗೆ ಸಕ್ರಿಯ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದ್ದುಸ, ಯಾವುದೇ ಅಡೆತಡೆಯ ಶಬ್ಧದ ಅಡಚಣೆ ಇಲ್ಲದೆ ಕರೆ ಹಾಗೂ ಇನ್ನಿತರೆ ಸಮಯದಲ್ಲಿ ಉತ್ತಮ ಅನುಭವ ಪಡೆಯಬಹುದು.

ಇನ್ನು ಪ್ರಾದೇಶಿಕ ಆಡಿಯೋದಂತಹ ಫೀಚರ್ಸ್‌ಗಳಿಗೆ ಬೆಂಬಲ ನೀಡುವ ಈ ಇಯರ್‌ಬಡ್ಸ್‌ ಡ್ಯುಯಲ್ ಮ್ಯಾಗ್ನೆಟಿಕ್ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿರಲಿದ್ದು, ಸಂಗೀತ ಆಲಿಸುವಾಗ ಅಥವಾ ಕರೆ ಸಮಯದಲ್ಲಿ ನವೀನ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಇಯರ್‌ಬಡ್‌ಗಳು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿವೆಯಂತೆ.

ಶಿಯೋಮಿಯ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌ಗೆ ರೆಡಿ!..ಅಬ್ಬರಿಸೋದು ಪಕ್ಕಾ!

ಶಿಯೋಮಿ ಬಡ್ಸ್‌ 4 ಬ್ಯಾಟರಿ ಸಾಮರ್ಥ್ಯ

ಈ ಇಯರ್‌ಬಡ್ಸ್‌ 35mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪ್ರತಿ ಇಯರ್‌ಬಡ್ ಆರು ಗಂಟೆಗಳವರೆಗೆ ಬ್ಯಾಕಪ್‌ ನೀಡಲಿವೆ ಎಂದು ಹೇಳಲಾತ್ತಿದೆ. ಹಾಗೆಯೇ ಚಾರ್ಜಿಂಗ್ ಕೇಸ್‌ 480mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 30 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ವಿಶೇಷ ಬಡ್ಸ್‌ ಫಾಸ್ಟ್‌ ಚಾರ್ಜಿಂಗ್‌ ಬೆಂಬಲಿಸಲಿದೆ ಎನ್ನಲಾಗಿದ್ದು, ಈ ಮೂಲಕ 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 2.5 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.

ಶಿಯೋಮಿ ವಾಚ್‌ S1 ಪ್ರೊ ಸ್ಮಾರ್ಟ್‌ವಾಚ್‌, ಶಿಯೋಮಿ ಬಡ್ಸ್‌4 ಬೆಲೆ

ಈ ಇಯರ್‌ಬಡ್ಸ್‌ EUR 59 (ಸುಮಾರು 5,200 ರೂ. ಗಳು) ಜಾಗತಿಕ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದ್ದು, ಇದು ಹಸಿರು, ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಕಂಡುಬರಲಿದೆ. ಹಾಗೆಯೇ ಸ್ಮಾರ್ಟ್‌ವಾಚ್‌ ಬೆಳ್ಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, EUR 299 (ಸುಮಾರು 26,600 ರೂ.ಗಳು) ಬೆಲೆ ಹೊಂದಿರಲಿದೆ ಎನ್ನಲಾಗಿದೆ. ಈ ಗ್ಯಾಜೆಟ್‌ಗಳು ಶೀಘ್ರದಲ್ಲೇ ಜಾಗತಿಕವಾಗಿ ವಾರ್ಷಿಕ ಟೆಕ್ ಈವೆಂಟ್‌ನಲ್ಲಿ ಲಾಂಚ್ ಆಗಲಿವೆ ಎನ್ನಲಾಗಿದೆ.

Best Mobiles in India

English summary
Xiaomi Watch S1 Pro is tipped to launch at the annual tech event. Alongside, the company is also said to launch the Buds 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+