Home
ಸುದ್ದಿಜಾಲ

Apple ಸಂಸ್ಥೆಯನ್ನೇ ಹಿಂದಿಕ್ಕಿದ ಶಿಯೋಮಿಗೆ ಈಗ ದ್ವಿತೀಯ ಸ್ಥಾನ; ಈ ಯಶಸ್ಸಿಗೆ ಕಾರಣ ಏನು?

ಶಿಯೋಮಿ (Xiaomi) ಮೊಬೈಲ್‌ ಸಂಸ್ಥೆಯು ಆಗಷ್ಟ್‌ 2024 ತಿಂಗಳ ಜಾಗತಿಕ ಮೊಬೈಲ್‌ ಮಾರಾಟದಲ್ಲಿ ಆಪಲ್‌ (Apple) ಸಂಸ್ಥೆಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನ ಅಲಂಕರಿದೆ ಎಂದು ಕೌಂಟರ್‌ಪಾಯಿಂಟ್ ತನ್ನ ವರದಿಯಲ್ಲಿ ತಿಳಿಸಿದೆ. ಕೌಂಟರ್‌ಪಾಯಿಂಟ್‌ನ ಪ್ರಾಥಮಿಕ ಸಂಖ್ಯೆಗಳ ಪ್ರಕಾರ ಆಗಸ್ಟ್ 2021 ರ ನಂತರ ಇದೇ ಮೊದಲ ಬಾರಿಗೆ ಅಂದರೇ, ಆಗಸ್ಟ್ 2024 ರಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶಿಯೋಮಿ (Xiaomi) ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಅಚ್ಚರಿ ಮೂಡಿಸದೆ.

ಹೌದು, ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಶಿಯೋಮಿ ಕಳೆದ ವರ್ಷದಿಂದ ತಿಂಗಳಿಂದ ತಿಂಗಳಿಗೆ ಬಹುತೇಕ ಸ್ಥಿರವಾದ ಮಾರಾಟದ ಟ್ರ್ಯಾಕ್‌ ಅನ್ನು ಹೊಂದಿದ್ದರೂ, ಆಗಷ್ಟ್‌ 2024 ರಲ್ಲಿ ಮಾತ್ರ ಸಂಸ್ಥೆಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ಮೂಲಕ ಟೆಕ್ ದೈತ್ಯ ಆಪಲ್‌ ಸಂಸ್ಥೆಯನ್ನೇ ಓವರ್‌ಟೆಕ್‌ ಮಾಡಿದೆ.

Apple ಸಂಸ್ಥೆಯನ್ನೇ ಹಿಂದಿಕ್ಕಿದ ಶಿಯೋಮಿಗೆ ಈಗ ದ್ವಿತೀಯ ಸ್ಥಾನ; ಯಶಸ್ಸಿಗೆ ಕಾರಣ?

ಶಿಯೋಮಿ H1 2024 ರಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗುರುತಿಸಿಕೊಂಡಿದೆ. ಇನ್ನು ಮಾರಾಟದ ಟ್ರ್ಯಾಕ್‌ನಲ್ಲಿ ಇದು ವರ್ಷದಿಂದ ವರ್ಷಕ್ಕೆ 22% ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹಾಗೆಯೇ ಶಿಯೋಮಿ ಇನ್ನೂ 2024 ರ ಪೂರ್ಣ ವರ್ಷಕ್ಕೆ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸುವ ಸಾಧ್ಯತೆಯಿದೆ. ಹಾಗಾದರೇ ಶಿಯೋಮಿಯ ಯಶಸ್ಸಿಗೆ ಪ್ರಮುಖವಾಗಿ ಕಾರಣ ಎನಿಸಿರುವ ಕೆಲವು ಅಂಶಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಹೈ ಎಂಡ್‌ ಮಾದರಿಯ ಫೋನ್‌ಗಳು ಇದ್ದು, ಹಾಗೆಯೇ ಬಜೆಟ್‌ ದರದ ಮೊಬೈಲ್‌ಗಳು ಸೇರಿವೆ. ಹೀಗಾಗಿ ಎಲ್ಲ ವಿಭಾಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಾ ಸಾಗಿದೆ. ಅದಾಗ್ಯೂ, ಬಜೆಟ್‌ ಬೆಲೆಯಲ್ಲಿ ಹಾಗೂ ಮೀಡ್‌ರೇಂಜ್‌ ದರದ ಫೋನ್‌ಗಳು ಹೆಚ್ಚು ಗಮನ ಸೆಳೆದಿವೆ.

ವಿಶೇಷವಾಗಿ ಶಿಯೋಮಿ (Xiaomi) ಬ್ರ್ಯಾಂಡ್‌ ಅಗ್ಗದ ಹಾಗೂ ಬಜೆಟ್‌ ಬೆಲೆಯ ಬ್ರ್ಯಾಂಡ್‌ಗಳಲ್ಲಿ ಹೆಚ್ಚು ಪ್ರಬಲವಾಗಿದೆ. ಸಂಸ್ಥೆಯ ಸ್ಪರ್ಧಾತ್ಮಕ 5G ಮಾಡೆಲ್‌ಗಳಾದ ರೆಡ್ಮಿ 13 (Redmi 13) ಮತ್ತು ರೆಡ್ಮಿ ನೋಟ್ 13 (Redmi Note 13) ಸರಣಿಯ ಫೋನ್‌ಗಳು ಇತ್ತೀಚಿಗೆ ಹೆಚ್ಚಿನ ಸದ್ದು ಮಾಡಿವೆ ಎನ್ನುವುದನ್ನು ಗಮನಿಸಬಹುದಾಗಿದೆ.

ಇನ್ನು ಸಂಸ್ಥೆಯ ರೆಡ್ಮಿ (Redmi) ಮೊಬೈಲ್‌ಗಳು ಹೆಚ್ಚು ಜನಪ್ರಿಯವಾಗಿದೆ. ಇನ್ನು ಈ ಫೋನ್‌ಗಳು ಶಿಯೋಮಿ ತನ್ನ ಎಲ್ಲಾ ಪ್ರಮುಖ ಮೊಬೈಲ್‌ ಮಾರುಕಟ್ಟೆಗಳಲ್ಲಿ, ಮುಖ್ಯವಾಗಿ ಭಾರತ, ಅಮೇರಿಕಾ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚಿನ ಮಾರಾಟ ಕಾಣಲು ನೆರವಾಗಿವೆ. ಅಲ್ಲದೇ ಶಿಯೋಮಿಯ ಇತ್ತೀಚಿನ ಹೊಸ ಫೋನ್‌ಗಳು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಪಡೆದಿದ್ದು, ಕ್ಯಾಮೆರಾ, ಪ್ರೊಸೆಸರ್‌, ಬ್ಯಾಟರಿ ಹಾಗೂ ಬಾಹ್ಯ ಲುಕ್‌ ನಿಂದಲೂ ಆಕರ್ಷಕ ಎನಿಸಿವೆ.

ಇತ್ತೀಚಿನ ತ್ರೈಮಾಸಿಕಗಳಲ್ಲಿ ಅದರ ಪರಿಣಾಮಕಾರಿ ಬೆಳವಣಿಗೆಯಿಂದಾಗಿ ಆಗಸ್ಟ್‌ನಲ್ಲಿ ಶಿಯೋಮಿ (Xiaomi) ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಹಾಗಂತ ಆಪಲ್‌ ತನ್ನ ಬ್ರ್ಯಾಂಡ್‌ ಮೌಲ್ಯ ಕಳೆದುಕೊಂಡಿತೇ? ಖಂಡಿತಾ ಇಲ್ಲ. ಆಪಲ್‌ ಐಫೋನ್‌ಗಳು ವಿಶ್ವ ಮಾರುಕಟ್ಟೆಯಲ್ಲಿ ತಮ್ಮದೇ ಜನಪ್ರಿಯತೆ ಪಡೆದಿವೆ. ಇನ್ನು ಸಾಮಾನ್ಯವಾಗಿ ಆಪಲ್‌ ತನ್ನ ಹೊಸ ಪೀಳಿಗೆಯ ಐಫೋನ್‌ಗಳು ಸೆಪ್ಟೆಂಬರ್‌ ತಿಂಗಳಿನಲ್ಲಿ ಲಾಂಚ್ ಮಾಡುತ್ತದೆ.

ಗ್ರಾಹಕರು ಸೆಪ್ಟೆಂಬರ್‌ ತಿಂಗಳಿನಲ್ಲಿ ಬರುವ ಹೊಸ ಐಫೋನ್‌ ನಿರೀಕ್ಷೆಯಲ್ಲಿರುವ ಕಾರಣ ಆಗಷ್ಟ್‌ ತಿಂಗಳಿನಲ್ಲಿ ಐಫೋನ್‌ ಖರೀದಿಸಲು ಹಿಂದೇಟು ಹಾಕುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಆಗಷ್ಟ್‌ ತಿಂಗಳಿನಲ್ಲಿ ಐಫೋನ್‌ ಮಾರಾಟದಲ್ಲಿ ಏರಿಕೆ ಕಡಿಮೆ ಆಗಿರುವ ಕಾರಣಗಳು ಇರುತ್ತವೆ. ಇದು ಸಹ ಶಿಯೋಮಿ ಮಾರಾಟದಲ್ಲಿ ಏರಿಕೆಗೆ ಕಾರಣವಾದ ಅಂಶಗಳಲ್ಲಿ ಒಂದಾಗಿರಬಹುದು. ಆಪಲ್‌ ಐಫೋನ್ 16 ಸರಣಿ ಲಾಂಚ್ ಮಾಡಿದೆ. ಮುಂದಿನ ತಿಂಗಳುಗಳಲ್ಲಿ ದ್ವಿತೀಯ ಸ್ಥಾನ ಅಥವಾ ಪ್ರಥಮ ಸ್ಥಾನಕ್ಕೆ ಏರುವ ಸಾಧ್ಯತೆಗಳು ಇವೆ.

Best Mobiles in India

English summary
Xiaomi World’s No. 2 Smartphone Brand in August 2024. Check these Key Factors and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+