Subscribe to Gizbot

ಕ್ಸೋಲೋ ಪ್ಲೇ 8X-1020 ಸ್ಮಾರ್ಟ್‌ಫೋನ್ ರೂ 9,700 ಕ್ಕೆ

Posted By:

ಕ್ಸೋಲೋ ಪ್ಲೇ 8X-1020 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವ ಇರಾದೆಯಲ್ಲಿದ್ದು, ಇದರ ಬೆಲೆ ರೂ 9,700 ಎಂದು ನಿರ್ಧರಿಸಲಾಗಿದೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಫೋನ್ ಕುರಿತಾದ ವಿಶೇಷತೆಗಳನ್ನು ಪ್ರಕಟಪಡಿಸಿದ್ದು ಇದು 5 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು ಓಕ್ಟಾ ಕೋರ್ 1.4GHZ ಅನ್ನು ಡಿವೈಸ್ ಪಡೆದುಕೊಂಡಿದೆ. 1ಜಿಬಿ RAM ಅನ್ನು ಫೋನ್ ಹೊಂದಿದೆ. ಕ್ಸೋಲೋ ಪ್ಲೇ 8X-1020 ನ ರಿಯರ್ ಕ್ಯಾಮೆರಾ ಸಾಮರ್ಥ್ಯ 8 ಮೆಗಾಪಿಕ್ಸೆಲ್ ಆಗಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಫೋನ್ ಹೊಂದಿದೆ. ಸೋನಿ ಎಕ್ಸಾಮರ್ ಆರ್ ಸೆನ್ಸಾರ್ ಅನ್ನು ಡಿವೈಸ್ ಒಳಗೊಂಡಿದ್ದು, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಫೋನ್‌ನಲ್ಲಿದೆ.

ರೂ 9,700 ಕ್ಕೆ ಕ್ಸೋಲೋ ಪ್ಲೇ 8X-1020 ಸ್ಮಾರ್ಟ್‌ಫೋನ್

ಇದನ್ನೂ ಓದಿ: ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?

ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು. ಫೋನ್‌ನ ಬ್ಯಾಟರಿ ಸಾಮರ್ಥ್ಯ 2500mAh ಆಗಿದೆ. ಇದರಲ್ಲಿ ಆಂಡ್ರಾಯ್ಡ್‌ನ ಯಾವ ಆವೃತ್ತಿ ಚಾಲನೆಯಾಗುತ್ತದೆ ಎಂಬುದನ್ನು ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮತ್ತು ಡ್ಯುಯಲ್ ಸಿಮ್ ಅನ್ನು ಫೋನ್ ಹೊಂದಿದೆಯೇ ಎಂಬುದನ್ನು ಕುರಿತು ಮಾಹಿತಿ ದೊರಕಬೇಕಾಗಿದೆ.

ಇನ್ನು ಫೋನ್ ಮುಂಭಾಗ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದ್ದು, ಡಿವೈಸ್‌ನಲ್ಲಿ ಎದ್ದುಗಾಣುವ ಅಂಶ ಇದಾಗಿದೆ. ಇದು ಅನಿಯಮಿತ ಮ್ಯೂಸಿಕ್ ಮತ್ತು 3 ತಿಂಗಳುಗಳ ಪೂರ್ವ ಸ್ಥಾಪಿತ ಹಂಗಾಮ ಮ್ಯೂಸಿಕ್ ಅಪ್ಲಿಕೇಶನ್ ಜೊತೆಗೆ ಬಂದಿದೆ.

English summary
This article tells about Xolo seems to be gearing up to launch the Play 8X-1020 smartphone in India, if information from an established retailer from Mumbai is to be believed. So far, no announcement has been made by Xolo.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot