Subscribe to Gizbot

5,699 ಕ್ಕೆ ಕ್ಸೋಲೋ ಪ್ರೈಮ್ ಲಾಲಿಪಪ್ ಫೋನ್

Written By:

ಕ್ಸೋಲೋ ಆಂಡ್ರಾಯ್ಡ್ 5.0 ಲಾಲಿಪಪ್ ಉಳ್ಳ ಬಜೆಟ್ ಹ್ಯಾಂಡ್‌ಸೆಟ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಕ್ಸೋಲೋ ಪ್ರೈಮ್ ಎಂಬ ಹೆಸರನ್ನು ಈ ಡಿವೈಸ್ ಹೊಂದಿದೆ. ಇದರ ಬೆಲೆ ರೂ 5,699 ಆಗಿದೆ. ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್‌ಗೆ ಪ್ರತಿಸ್ಪರ್ಧಿಯಾಗಿ ಈ ಫೋನ್ ಅನ್ನು ಕ್ಸೋಲೋ ಲಾಂಚ್ ಮಾಡಿದೆ. ಭಾರತದಾದ್ಯಂತ ರೀಟೈಲ್ ಮಳಿಗೆಗಳಿಗೆ ಇದು ಆಗಮಿಸಲಿದೆ.

5,699 ಕ್ಕೆ ಕ್ಸೋಲೋ ಪ್ರೈಮ್ ಲಾಲಿಪಪ್ ಫೋನ್

ಕ್ಸೋಲೋ ಪ್ರೈಮ್ ಡ್ಯುಯಲ್ ಬೆಂಬಲವನ್ನು ನೀಡುತ್ತಿರುವ ಸ್ಮಾರ್ಟ್‌ಫೋನ್ ಆಗಿದ್ದು ಇದು 4.5 ಇಂಚಿನ ಐಪಿಎಸ್ ಡಿಸ್‌ಪ್ಲೇ ಜೊತೆಗೆ (480x854) ಪಿಕ್ಸೆಲ್ ರೆಸಲ್ಯೂಶನ್ ಬೆಂಬಲವನ್ನು ಒದಗಿಸುತ್ತಿದೆ. ಇದು 1.3GHZ ಕ್ವಾಡ್ ಕೋರ್ ಮೀಡಿಯಾ ಟೆಕ್ MT6582M ಪ್ರೊಸೆಸರ್ ಅನ್ನು ಒಳಗೊಂಡಿದ್ದು 1 ಜಿಬಿ RAM ಡಿವೈಸ್‌ನಲ್ಲಿದೆ. ಮಾಲಿ 400 ಎಮ್‌ಪಿ ಜಿಪಿಯುವನ್ನು ಡಿವೈಸ್‌ನಲ್ಲಿ ಕಾಣಬಹುದಾಗಿದೆ.

ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

ಫೋನ್ 8 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. 5 ಮೆಗಪಿಕ್ಸೆಲ್ ಆಟೊಫೋಕಸ್ ರಿಯರ್ ಕ್ಯಾಮೆರಾದ ಜೊತೆಗೆ ಎಲ್ಇಡಿ ಫ್ಲ್ಯಾಶ್ ಅನ್ನು ಫೋನ್ ಹೊಂದಿದ್ದು, ವಿಜಿಎ 0.3 ಮುಂಭಾಗದಲ್ಲಿದೆ. 1800mAh ಬ್ಯಾಟರಿಯನ್ನು ಡಿವೈಸ್ ಹೊಂದಿದ್ದು ಇದು 20.8 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತಿದೆ.

English summary
Xolo on Thursday on launched a new Android 5.0 Lollipop-based budget handset in India, the Xolo Prime. Priced at Rs. 5,699, the smartphone is set to compete with the Micromax Canvas Spark, a recently launched budget smartphone also running Android 5.0 Lollipop.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot