ಝೋಲೋದಿಂದ ಕಡಿಮೆ ಬೆಲೆಯ ಕ್ವಾಡ್ ಕೋರ್ ಸ್ಮಾರ್ಟ್‌ಫೋನ್ ಬಿಡುಗಡೆ
ಕಡಿಮೆ ಬೆಲೆಯ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಝೋಲೋ ಕಂಪೆನಿ ಗುಡ್‌ನ್ಯೂಸ್ ನೀಡಿದೆ.ಝೋಲೋ ಕ್ಯೂ700 ಎಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು,9,499 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.
136 x 64.6 x 8.9 ಮಿ.ಮೀ ಗಾತ್ರ,854 x 480 ಪಿಕ್ಸೆಲ್ ರೆಸೂಲೂಶನ್,218 ಪಿಪಿಐ ಹೊಂದಿರುವ 4.5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್,ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್,1.3 GHz ಮಿಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್‌ನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್(854 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಮಿಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್
4 ಜಿಬಿ ಆಂತರಿಕ ಮೆಮೊರಿ
1ಜಿಬಿ RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
1800 MAh ಬ್ಯಾಟರಿ
ಇದನ್ನೂ ಓದಿ: ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು


Click it and Unblock the Notifications