ಹೆಸರು ಬದಲಿಸುತ್ತಿದೆ "ಯಾಹೂ"!! ಈಗಲಾದರೂ ಒಲಿಯುತ್ತಾ ಅದೃಷ್ಟ?

|

ಒಂದು ಕಾಲದಲ್ಲಿ ಅಂತರ್ಜಾಲ ಜಗತ್ತನ್ನು ಆಳಿದ್ದ ಸರ್ಚ್ ಎಂಜಿನ್ "ಯಾಹೂ' Yahoo) ತನ್ನ ಹೆಸರನ್ನು ಶೀಘ್ರದಲ್ಲೇ ಬದಲಾಯಿಸಿಕೊಳ್ಳಲಿದೆ ಎನ್ನುವ ಸುದ್ದಿ ಹರಿದಾಡಿದೆ. ! ಹೌದು, ಯಾಹೂ ಶೀಘ್ರದಲ್ಲೇ ತನ್ನ ಹೆಸರನ್ನು ಬದಲಾಗುತ್ತದೆ ಎನ್ನಲಾಗಿರುವ ಸುದ್ದಿಯನ್ನು ಖಾಸಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಅಂತರ್ಜಾಲ ಜಗತ್ತಿನ ದಿಗ್ಗಜನಾಗಿ ಮೆರೆದಿದ್ದ ಯಾಹೂ ನಂತರ ಹಲವು ಕಾರಣಗಳಿಂದ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತ್ತು. ಹಾಗಾಗಿ, 2016ರ ಜುಲೈನಲ್ಲಿ ಯಾಹೂ ಸಂಸ್ಥೆಯನ್ನು ವೆರಿಜೋನ್ ಎಂಬ ಅಮೆರಿಕದ ವೈರ್‌ಲೆಸ್ ಸಂವಹನ ಸಂಸ್ಥೆ 4.8 ಬಿಲಿಯನ್‌ ಡಾಲರ್ ಹಣಕ್ಕೆ ಖರೀದಿಸಿ ಇದೀಗ ಯಾಹೂ ಹೆಸರಿನ ಬದಲಾಗಿ ಬೇರೆ ಹೆಸರನ್ನು ಇಡಲು ಬಯಸಿದೆ ಎನ್ನಲಾಗಿದೆ.

ಹೆಸರು ಬದಲಿಸುತ್ತಿದೆ

2016ರಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರ ಬದಲಿಸಿದ ಟಾಪ್ 5 ನಂಬರ್‌ಗಳು!!?

ಇನ್ನು ಯಾಹೂ ಹೆಸರನ್ನು Altaba ಆಗಿ ಬದಲಾಯಿಸಲಾಗುತ್ತದೆ ಎನ್ನುವ ಮಾಹಿತಿ ಬಂದಿದ್ದು, ಯಾಹೂ ಹೆಸರಿನ ಬದಲಾವಣೆ ಜೊತೆಯಲ್ಲಿಯೇ ಪ್ರಸ್ತುತ ಯಾಹೂವಿನ ಸಿಇಒ ಮಾರಿಸ್ಸಾ ಮೇಯರ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಮತ್ತು ಸಂಸ್ಥೆಯ 6 ಜನ ನಿರ್ದೇಶಕರು ಹೊರ ಹೋಗಲಿದ್ದಾರೆ ಎಂದು ವರದಿಯಾಗಿದೆ.

ಹೆಸರು ಬದಲಿಸುತ್ತಿದೆ

ಅಂತರ್ಜಾಲ ಪ್ರಪಂಚದಲ್ಲಿ ಗೂಗಲ್‌ಗೆ ಸೆಡ್ಡು ಹೊಡೆದು ನಿಂತಿದ್ದ ಯಾಹು, ಗೂಗಲ್‌ಗಿಂತಲೂ ಮುಂಚೆಯೇ ಹೆಸರಾದರೂ ಸಹ. ನಂತರದ ದಿನಗಳಲ್ಲಿ ಗೂಗಲ್‌ಗೆ ಪೈಪೋಟಿ ನೀಡುವಲ್ಲಿ ಎಡವಿತು. ಇನ್ನು ಇತ್ತೀಚಿಗೆ ಯಾಹೂವಿನ 100ಕೋಟಿ ಅಕೌಂಟ್‌ಗಳು ಹ್ಯಾಕ್ ಆಗಿದೆ ಎಂದು ಯಾಹೂ ಸಂಸ್ಥೆಯೇ ಹೇಳಿಕೊಂಡಿತ್ತು. ಇದೆಲ್ಲದರ ಪರಿಣಾಮ ಯಾಹೂ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತಿದೆ ಎನ್ನಲಾಗಿದೆ.

Best Mobiles in India

English summary
the world big search engine Yahoo can change thair name. to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X