ಯಾಹೂ ಹ್ಯಾಕ್: 4.5 ಲಕ್ಷ ಖಾತೆ ಢಮಾರ್

By Varun
|
ಯಾಹೂ ಹ್ಯಾಕ್: 4.5 ಲಕ್ಷ ಖಾತೆ ಢಮಾರ್

ಗೂಗಲ್ ನ ಜಿಮೇಲ್ ಬರುವ ಮುನ್ನ ಅಧಿಕವಾಗಿ ಉಪಯೋಗಿಸಲ್ಪಡುತ್ತಿದ್ದ ಯಾಹೂ ಮೇಲ್ ಅನ್ನು ಅಜ್ಞಾತ ಹ್ಯಾಕರುಗಳು ಹ್ಯಾಕ್ ಮಾಡಿ ವಿಶ್ವದಾದ್ಯಂತ ಸುಮಾರು 4.5 ಲಕ್ಷ ಖಾತೆಗಳ ಪಾಸ್ವರ್ಡ್ ಅನ್ನು ಇಂಟರ್ನೆಟ್ ನಲ್ಲಿ ಹಾಕಲಾಗಿದೆ ಎಂದು ಆರ್ಸ್ ಟೆಕ್ನಿಕಾ ತಂತ್ರಜ್ಞಾನ ವೆಬ್ಸೈಟ್ ವರದಿ ಮಾಡಿದೆ.

ಬಾಧಿತ ಖಾತೆಗಳು, ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (VOIP) ಉಪಯೋಗಿಸುತ್ತಿದ್ದ ಜನರದಾಗಿದ್ದು,ಅಲ್ಲಿಂದ ಕದಿಯಲಾಗಿದೆಯಂತೆ. ಹ್ಯಾಕರುಗಳು ಕದ್ದ ಪಾಸ್ವರ್ಡ್ ಗಳ ವಿವರವನ್ನು d33ds.co ಎಂಬ ವೆಬ್ಸೈಟ್ ನಲ್ಲಿ ಹಾಕಿದ್ದು, ಗುರುವಾರದ ನಂತರ ಈ ವಿವರಗಳು ವೆಬ್ಸೈಟ್ ನಲ್ಲಿ ಪತ್ತೆಯಾಗಿಲ್ಲ.

ಯಾಹೂನ ಇಂಟರ್ನೆಟ್ ಸೆಕ್ಯೂರಿಟಿ ಅಷ್ಟು ಸುಭದ್ರವಾಗಿಲ್ಲದ ಕಾರಣ ಹ್ಯಾಕರುಗಳ ಉದ್ದೇಶ ಕೇವಲ ಯಾಹೂ ಅನ್ನು ಎಚ್ಚರಿಸಲು ಮಾಡಿರಬಹುದು ಎಂದು CNET ಅಭಿಪ್ರಾಯ ಪಟ್ಟಿದೆ.

ಕೆಲವು ತಿಂಗಳುಗಳ ಹಿಂದೆ ಇದೇ ರೀತಿ ಹ್ಯಾಕರುಗಳು ಲಿಂಕ್ಡ್ ಇನ್ ಅನ್ನು ಹ್ಯಾಕ್ ಮಾಡಿ ಸುಮಾರು 60 ಲಕ್ಷಕ್ಕೂ ಹೆಚ್ಚು ಖಾತೆಗಳ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಹಾಕಿದ್ದನ್ನು ಕನ್ನಡ ಗಿಜ್ಬಾಟ್ ಪ್ರಕಟಿಸಿತ್ತು.ನಿಮ್ಮ ಪಾಸ್ವರ್ಡ್ ಯಾವ ರೀತಿ ಇರಬಾರದು ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X