Subscribe to Gizbot

ನಿಮ್ಮ ಪಾಸ್ವರ್ಡ್ ಯಾವ ರೀತಿ ಇರಬಾರದು ?

Posted By: Super

ಕಳೆದ ವಾರ linked in ವೆಬ್ಸೈಟ್ ಹ್ಯಾಕ್ ಆಗಿ ಸುಮಾರು 60 ಲಕ್ಷಕ್ಕೂ ಹೆಚ್ಚು ಖಾತೆಗಳ ಪಾಸ್ವರ್ಡ್ ಗಳನ್ನು ಹ್ಯಾಕರುಗಳು ಆನ್ಲೈನಿನಲ್ಲಿ ಹಾಕಿದ್ದ ಸುದ್ದಿಯನ್ನು ನೀವು ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ.

ಈ ರೀತಿ, ಖಾತೆಗಳು ಹ್ಯಾಕ್ ಆಗಲು ಕರಣ, ಅಸುರಕ್ಷಿತ ಪಾಸ್ವರ್ಡುಗಳು. ಹ್ಯಾಕರುಗಳು ಪಾಲಿಗೆ ಸುಲಭ ತುತ್ತಾಗುವ ಸಾಮಾನ್ಯ ಪಾಸ್ವರ್ಡುಗಳಿಂದ ನಿಮ್ಮ ಅಮೂಲ್ಯ ಮಾಹಿತಿ ಸೋರಿಕೆಯಾಗಿ, ಕೆಲವೊಮ್ಮೆ ಆನ್ಲೈನ್ ನಲ್ಲಿ ದುಡ್ಡು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ರಾಪಿಡ್ 7 ಎಂಬ ಸಂಸ್ಥೆ ವಿಶ್ಲೇಷಣೆ ಮಾಡಿ ಯಾವ ರೀತಿಯ ಪಾಸ್ವರ್ಡ್ ಗಳನ್ನು ಬಳಸಬಾರದು ಎಂಬ ಇನ್ಫೋಗ್ರಾಫಿಕ್ ಒಂದನ್ನು ಪ್ರಕಟಿಸಿದೆ.

ಇದರ ಪ್ರಕಾರ, ಪೋಲಿ ಪದಗಳು, ಕೆಲಸ ಮಾಡುವ ಕಂಪನಿಯ ಹೆಸರು, ನಿಮ್ಮ ಧರ್ಮದ ಹೆಸರು, ಕೇವಲ ಸಂಖ್ಯೆಗಳು, ಕಡಿಮೆ ಅಕ್ಷರಗಳ ಪದಗಳು, ಪ್ರೇಮಕ್ಕೆ ಸಂಬಂಧಿಸಿದ ಪದಗಳು, ಈ ರೀತಿ ಪದಗಳ  ಪಾಸ್ವರ್ಡ್ ಕೊಟ್ಟಿದ್ದ ಖಾತೆಗಳೇ ಅಂತೆ ಹ್ಯಾಕರುಗಳ ಪಾಲಿಗೆ ಸುಲಭ ತುತ್ತಾಗಿದ್ದು. ಹೀಗಾಗಿ ನೀವು ಈ ರೀತಿಯ ಪದಗಳನ್ನು ಉಪಯೋಗಿಸಬೇಡಿ.

ಪಾಸ್ವರ್ಡ್ ಸಂಬಂಧೀ ಮಾಹಿತಿಯ ಇನ್ಫೋಗ್ರಾಫಿಕ್ ಇಲ್ಲಿದೆ ನೋಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot