ಹೈಸ್ಕೂಲ್‌ ವಿದ್ಯಾರ್ಥಿ ಈಗ ವಿಶ್ವದ ಕಿರಿಯ ಮಿಲಿಯನೇರ್‌

Posted By:

ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿ ಜಗತ್ತಿನ ಟೆಕ್‌ ಪಂಡಿತರ ಪ್ರಶಂಸೆಗೆ ಒಳಗಾಗಿದ್ದ ವಿದ್ಯಾರ್ಥಿ ಈಗ ಯಾಹೂ ಕಂಪೆನಿಗೆ ಆಯ್ಕೆಯಾಗಿದ್ದಾನೆ.

17 ವರ್ಷದ ಬ್ರಿಟನ್‌ನ ಹೈಸ್ಕೂಲ್‌ ವಿದ್ಯಾರ್ಥಿ ನಿಕಿ ಡಿ ಅಲೊಸಿಒನನ್ನು ಯಾಹೂ ಕಂಪೆನಿಗೆ ಖರೀದಿಸಿದ್ದು, ಈ ಮೂಲಕ ಅತಿ ಕಡಿಮೆ ವಯಸ್ಸಿನಲ್ಲೇ ಮಿಲಿಯನೇರ್‌ ಪಟ್ಟ ಪಡೆದ ವ್ಯಕ್ತಿಯಾಗಿ ನಿಕಿ ಡಿ ಅಲೊಸಿಒ ಹೊರಹೊಮ್ಮಿದ್ದಾನೆ. ಯಾಹೂ ಕಂಪೆನಿಯ ಸಿಇಒ ಮರಿಸ್ಸಾ ಮೇಯರ್‌ ಆಣತಿಯಂತೆ ಈ ಕಂಪೆನಿ ಖರೀದಿಸಿದ್ದು, ನಿಕಿ ಡಿ ಅಲೊಸಿಒನನ್ನು ಎಷ್ಟು ರುಪಾಯಿ ನೀಡಿ ಖರೀದಿಸಿದೆ ಎಂದು ಯಾಹೂ ಕಂಪೆನಿ ಸ್ಪಷ್ಟಪಡಿಸಿಲ್ಲ.

ಹೈಸ್ಕೂಲ್‌ ವಿದ್ಯಾರ್ಥಿ ಈಗ ವಿಶ್ವದ ಕಿರಿಯ ಮಿಲಿಯನೇರ್‌

ಯಾರು ಈ ವಿದ್ಯಾರ್ಥಿ ?
ಇಂಗ್ಲೆಂಡ್‌ನ ಹೈಸ್ಕೂಲ್‌ ವಿದ್ಯಾರ್ಥಿ ನಿಕಿ ಕಂಪ್ಯೂಟರ್ ಪ್ರೋಗ್ರಾಮ್‌ ಬರೆಯುದರಲ್ಲಿ ಹೆಸರುವಾಸಿ. ಅದರಲ್ಲೂ ಮೊಬೈಲ್ ಅಪ್ಲಿಕೇಶನ್ ರೂಪಿಸಿದುರಲ್ಲಿ ಎತ್ತಿದ ಕೈ. ತನ್ನ ಒಂಭತ್ತನೇ ವಯಸ್ಸಿನಲ್ಲೇ ಸಿನಿಮಾಗಳನ್ನು ಎಡಿಟ್‌ ಮಾಡುವ ಮೂಲಕ ಕಂಪ್ಯೂಟರ್‌ ಕ್ಷೇತ್ರದಲ್ಲಿ ಒಲವು ಮೂಡಿಸಿ 12ನೇ ವಯಸ್ಸಿನಲ್ಲೇ ಅಪ್ಲಿಕೇಶನ್‌ಗಳ ಬರೆದ ಸಾಹಸಿ.ಆಪಲ್‌ ಕಂಪೆನಿಗೆ Trimit ಅಪ್ಲಿಕೇಶನ್‌ ರೂಪಿಸಿದ ರೂವಾರಿ ಇವನು. ಸಮ್ಲಿ(Summly) ಕಂಪೆನಿಗ ಬಂಡವಾಳ ಹೂಡುವ ಮೂಲಕ ವಿಶ್ವದ ಕಿರಿಯ ವಯಸ್ಸಿಗೆ ಬಂಡವಾಳ ಹೂಡಿದ ವ್ಯಕ್ತಿ ಎಂಬ ಪಟ್ಟ ಇವನಿಗಿದೆ.

ಲಿಂಕ್‌ : ತಲೆಯಿದ್ದವರಿಗೆ ಮಾತ್ರ ಈ ಸಾಧನಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot