ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

By Ashwath
|

ಮನಷ್ಯನ ಕಲ್ಪನೆಗೆ ಮಿತಿಯಿಲ್ಲ. ಏನೇನೋ ಕಲ್ಪನೆಗಳ ಮೂಲಕ ವಿಜ್ಞಾನಿಗಳು ಹೊಸ ಹೊಸ ಸಾಧನಗಳನ್ನು ಕಂಡುಹಿಡಿಯುತ್ತಾರೆ. ಇಲ್ಲಿ ಕೆಲವು ಸಾಧನಗಳ ಚಿತ್ರಗಳಿವೆ. ಇವು ಅಂತಿಂಥ ಸಾಧನಗಳಲ್ಲ. ವ್ಯಕ್ತಿಯ ತಲೆಯಲ್ಲಿರುವ ಮೆದುಳು ಹೇಗೆ ಯೋಚನೆ ಮಾಡುತ್ತದೋ ಅದನ್ನು ಗೃಹಿಸಿ ಕೆಲಸ ಮಾಡುವಂತಹ ಸಾಧನಗಳಿವು. ಸದ್ಯ ವಿದೇಶದಲ್ಲಿ ಈಗಷ್ಟೇ ಪ್ರಚಾರಕ್ಕೆ ಈ ಸಾಧನಗಳು ಬರುತ್ತಿವೆ.
ಹಾಗಾದ್ರೆ ತಲೆಯಿದ್ದವರಿಗೆ ಮಾತ್ರ ವಿನ್ಯಾಸಗೊಂಡಿರುವ ಈ ವಿಶೇಷ ಸಾಧನಗಳನ್ನು ನೀವು ನೋಡಬೇಕಲ್ವೆ.? ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

ಲ್ಯಾಪ್‌ಟಾಪ್‌ ಕೀಬೋರ್ಡ್ ಮತ್ತು ಮೌಸ್‌ ಬಳಸಿ ಸುಸ್ತಾಗಿದ್ದೀರಾ?. ಅದಕ್ಕೆ ಬಂದಿದೆ ಹೊಸ ಸಾಧನEmotiv EPOC . ಈ ಸಾಧನವನ್ನು ನೀವು ಧರಿಸಿದ್ರೆ ಮೌಸ್‌ನ ಮೇಲೆ ಕೈ ಉಪಯೋಗಿಸದೇ ಲ್ಯಾಪ್‌ಟಾಪ್‌/ಕಂಪ್ಯೂಟರ್‌ನಲ್ಲಿ ನಿಮ್ಮ ಕೆಲಸ ಮಾಡಬಹುದು. ಕೇವಲ ತಲೆಯನ್ನು ಮೇಲೆ ಕೆಳಗೆ ಅಲ್ಲಾಡಿಸಿದ್ರೆ ಒಂದು ಪೇಜ್‌ನಿಂದ ಇನ್ನೊಂದು ಪೇಜ್‌ಗೆ ಹೋಗಬಹುದು. ಎಡದಿಂದ ಬಲಕ್ಕೆ ತಿರುಗಿದರೆ ಸ್ಕ್ರೀನ್‌ನಲ್ಲಿರುವ ಪೇಜ್‌ ಸಹ ಇದೇ ರೀತಿ ಬಲಕ್ಕೆ ತಿರುಗುತ್ತದೆ.

ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

ಈ ಗ್ಯಾಡ್ಜೆಟ್‌ನ್ನು ವಿಶೇಷವಾಗಿ ಸ್ಮಾರ್ಟ್‌ಫೋನ್‌ ಬಳಕೆಗೆಂದೇ ಕಂಡುಹಿಡಿಯಲಾಗಿದೆ. ಈMuse ಸಾಧನವನ್ನು ಧರಿಸಿದ್ರೆ ಆಂಡ್ರಾಯ್ಡ್ ಮತ್ತು ಐಫೋನ್‌ಗಳನ್ನು ಸುಲಭವಾಗಿ ನಿಯಂತ್ರಣ ಮಾಡಬಹುದಂತೆ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದೆ.

ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

ವಿಶೇಷವಾಗಿ ಮಕ್ಕಳಿಗಾಗಿ ತಯಾರಿಸಿದ ಗ್ಯಾಡ್ಜೆಟ್. ಈNeuroSky MindWaveನಲ್ಲಿ 79 ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳು ಮಕ್ಕಳು ಬುದ್ದಿಯನ್ನು ಚುರುಕು ಮಾಡುವಂತಹ ಗೇಮ್ಸ್, ಜೊತೆಗೆ ಗಣಿತಕ್ಕೆ ಸಂಬಂಧಿಸಿದ ವಿಷಯಗಳಿವೆ. ಮುಂದಿನ ತಲೆಮಾರಿನ ಮಕ್ಕಳನ್ನು ಸೂಪರ್‌ಹ್ಯೂಮನ್ ಆಗಿ ಬದಲಾಯಿಸಲು ಈ ಸಾಧನವನ್ನು ಕಂಡುಹುಡುಕಿದಾಗಿ ಕಂಪೆನಿ ತಿಳಿಸಿದೆ.

ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

ಕಾರಿನ ಸ್ಟೇರಿಂಗ್‌ ಹಿಡಿಯದೇ ಡ್ರೈವ್ ಮಾಡುವ ಕಾಲ ಸನ್ನಿಹಿತವಾಗುತ್ತೆ. Emotiv EPOC ಮತ್ತು ಜಿಪಿಎಸ್ ತಂತ್ರಜ್ಞಾನದಿಂದ ಈ ಸಾಧನ ಕೆಲಸ ಮಾಡುತ್ತದೆ. Emotiv EPOC ಧರಿಸಿ ಲ್ಯಾಪ್‌ಟಾಪ್‌ನಲ್ಲಿ ಮೌಸ್‌ ಹಿಡಿಯದೇ ಹೇಗೆ ಸ್ಕ್ರೀನ್ ಚಲಿಸುವಂತೆ ತಂತ್ರಜ್ಞಾನ ರೂಪಿಸಲಾಗಿದೆಯೋ ಅದೇ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಬ್ರೈನ್‌ ಡ್ರೈವರ್‌ ಕೆಲಸಮಾಡುತ್ತದೆ.

ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

ವಿಶೇಷವಾಗಿ ಕೈಯನ್ನು ಕಳೆದುಕೊಂಡವರಿಗೆ,ಕೈ ಇಲ್ಲದವರಿಗೆ ಈ ತಂತ್ರಜ್ಞಾನದ ಕೈಯನ್ನು ರೂಪಿಸಲಾಗಿದೆ. ಈ ತಂತ್ರಜ್ಞಾನದ ಕೈಯನ್ನು ವ್ಯಕ್ತಿಯ ಭುಜಕ್ಕೆ ಫಿಕ್ಸ್‌ ಮಾಡಿದ್ರೆ, ಹೇಗೆ ವ್ಯಕ್ತಿ ಆಲೋಚನೆ ಮಾಡುತ್ತನೋ ಅದೇ ರೀತಿಯಾಗಿDARPA's Prosthetic ಕೈ ಸಹ ಕೆಲಸ ಮಾಡಲಾರಂಭಿಸಿತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X