Home
ಸುದ್ದಿಜಾಲ

ಭಾರತಕ್ಕೆ 'ಯಮಹಾ ಸೌಂಡ್‌ ಬಾರ್‌'ಗಳ ಲಗ್ಗೆ!..ಬೆಲೆ ಎಷ್ಟು ಗೊತ್ತಾ?

ಸ್ಮಾರ್ಟ್‌ಟಿವಿ ಜೊತೆಗೆ ಅತ್ಯುತ್ತಮ ಮ್ಯೂಸಿಕ್ ಸ್ಪೀಕರ್‌ ಬಾರ್‌ ಇದ್ದರೇ ಸೂಪರ ಎನ್ನುವುದು ಬಹುತೇಕ ಮ್ಯೂಸಿಕ್ ಪ್ರಿಯರ ಅಭಿಮತ. ಈ ನಿಟ್ಟಿನಲ್ಲಿಯೇ ಸ್ಮಾರ್ಟ್‌ಟಿವಿಗಳ ಬೆನ್ನಲ್ಲೇ ಮಾರುಕಟ್ಟೆಗೆ ಸೌಂಡ್ ಬಾರ್‌ಗಳು ಲಗ್ಗೆ ಇಟ್ಟಿದ್ದು, ಬೆಸ್ಟ್‌ ಸೌಂಡ್‌ ಕ್ವಾಲಿಟಿ ಜೊತೆಗೆ ಅತ್ಯುತ್ತಮ ಡಿಸೈನ್‌ ಹೊಂದಿವೆ. ಇದೀಗ ಈ ಸಾಲಿಗಿಗ ಯಮಹಾ ಮ್ಯೂಸಿಕ್ ಸಂಸ್ಥೆಯು ಸಹ ಹೊಸದೆರಡು ಖಡಕ್ ಸೌಂಡ್‌ ಬಾರ್‌ಗಳನ್ನು ಬಿಡುಗಡೆ ಮಾಡಿದೆ.

YAS-109

ಹೌದು, ಪ್ರತಿಷ್ಠಿತ ಮ್ಯೂಸಿಕ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ 'ಯಮಹಾ ಮ್ಯೂಸಿಕ್' ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಗೆ 'YAS-109' ಮತ್ತು 'YAS-209' ಹೆಸರಿನ ಎರಡು ಸೌಂಡ್‌ ಬಾರಗಳನ್ನು ಲಾಂಚ್ ಮಾಡಿದೆ. ಈ ಎರಡು ಸೌಂಡ್‌ ಬಾರ್‌ಗಳು ಅಲ್ಟ್ರಾ ಸ್ಲಿಮ್ ಡಿಸೈನ್‌ ಆಕಾರದಲ್ಲಿದ್ದು, ಜೊತೆಗೆ ಅಮೆಜಾನ್ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಪಡೆದುಕೊಂಡಿವೆ. ರಾಕ್‌ ಸೌಂಡ್‌ ಮೂಲಕ ಅಬ್ಬರಿಸುವ ಸೂಚನೆ ನೀಡಿದೆ.

ವೈಫೈ ಕನೆಕ್ಟಿವಿಟಿ

ಯಮಹಾ ಮ್ಯೂಸಿಕ್‌ನ ಈ ಸೌಂಡ್‌ ಬಾರ್‌ಗಳು ಸ್ಮಾರ್ಟ್‌ಟಿವಿಗಳೊಟ್ಟಿಗೆ ಸುಲಭವಾಗಿ ವಾಲ್‌ಗೆ ಫಿಕ್ಸ್ ಮಾಡಬಹುದಾಗಿದೆ. ವೈಫೈ ಕನೆಕ್ಟಿವಿಟಿ ಮೂಲಕ ಸ್ಪಾಟಿಫೈ ಕನೆಕ್ಟ್‌, ಅಮೆಜಾನ್ ಮ್ಯೂಸಿಕ್, ಹಾಗೂ ಅಮೆಜಾನ್ ಬೆಂಬಲಿತ ಮ್ಯೂಸಿಕ್ ಸೇವೆಗಳನ್ನು ಸಪೋರ್ಟ್‌ ಮಾಡಲಿದ್ದು, ಮ್ಯೂಸಿಕ್ ಪ್ಲೇಬ್ಯಾಕ್ ಕೇಪೆಬಿಲಿಟಿ ಆಯ್ಕೆ ಇದೆ. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡುವ ಅವಕಾಶವನ್ನು ಒಳಗೊಂಡಿದೆ.

ಫ್ಲೆಕ್ಸಿಬಲ್ ಪ್ಲೆಸ್‌ಮೆಂಟ್‌

ಯಮಹಾ YAS-109 ಸೌಂಡ್‌ ಬಾರ್ ಬಿಲ್ಟ್‌ಇನ್ ಸಬ್‌ವೂಫರಗಳನ್ನು ಹೊಂದಿದ್ದು, ಡೀಪ್‌ ಆಡಿಯೊ ಬಾಸ್‌ ಜೊತೆಗೆ ಸೌಂಡ್‌ನ ಗುಣಮಟ್ಟ ಉನ್ನತ ಮಟ್ಟದಲ್ಲಿರಲಿದೆ. ಹಾಗೆಯೇ ಯಮಹಾ YAS-209' ಡಿವೈಸ್‌ ವಾಯರ್‌ಲೆಸ್‌ ಸಬ್‌ವೂಫರ್‌ ಫ್ಲೆಕ್ಸಿಬಲ್ ಪ್ಲೆಸ್‌ಮೆಂಟ್‌ ಆಯ್ಕೆಗಳಿವೆ. ಇದರೊಂದಿಗೆ ಅಬ್ಬರಿಸುವ ಆಡಿಯೊ ಬಾಸ್‌ ಸೌಂಡ್‌ ಸೌಲಭ್ಯ ಇದೆ. ಮುಖ್ಯವಾಗಿ ಈ ಎರಡು ಡಿವೈಸ್‌ಗಳು 'ವಾಯಿಸ್‌ ಕ್ಲಿಯರ್‌' ತಂತ್ರಜ್ಞಾನವನ್ನು ಪಡೆದುಕೊಂಡಿವೆ.

DTS ಡಿಜಿಟಲ್ ಸೌಂಡ್‌

ಈ ಎರಡು ಡಿವೈಸ್‌ಗಳು ಡಾಲ್ಬಿ ಆಡಿಯೊ ಜೊತೆಗೆ DTS ಡಿಜಿಟಲ್ ಸೌಂಡ್‌ ಆಯ್ಕೆಯನ್ನು ಹೊಂದಿವೆ. ಸಿನಿಮಾ ಮತ್ತು ಡೈಲಾಗ್ ದೈಶ್ಯಗಳ ವಾಯಿಸ್‌ ಅತ್ಯುತ್ತಮವಾಗಿ ಕೇಳಿಸಿಲಿದೆ. ಅಮೆಜಾನ್ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್‌ ಇರುವುದರಿಂದ ವಾಯಿಸ್‌ ಮೂಲಕವೇ ಸೌಂಡ್‌ ಬಾರ್‌ ಅನ್ನು ನಿಯಂತ್ರಿಸಬಹುದು. ಭಾರತೀಯ ಆಡಿಯೊ ಮಾರುಕಟ್ಟೆಯಲ್ಲಿ ಈ ಎರಡು ಡಿವೈಸ್‌ಗಳು ಜನಪ್ರಿಯತೆ ಪಡೆಯುವ ವಿಶ್ವಾಸವನ್ನು ಸಂಸ್ಥೆಯು ಹೊಂದಿದೆ.

ಸೌಂಡ್‌ ಬಾರ್ ಬೆಲೆ

ಯಮಹಾ YAS-109 ಸೌಂಡ್‌ ಬಾರ್ ಬೆಲೆಯು 23,990ರೂ.ಗಳಾಗಿದ್ದು, ಇನ್ನು ಯಮಹಾ YAS-209 ಸೌಂಡ್‌ ಬಾರ್ 35,490ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಈ ಎರಡು ಸೌಂಡ್ ಡಿವೈಸ್‌ಗಳು ಅಧಿಕೃತ ಯಮಹಾ AV ಡೀಲರ್‌ಗಳ ಹತ್ತಿರ ಲಭ್ಯವಾಗಲಿವೆ.

Best Mobiles in India

English summary
The Yamaha YAS-109 has been priced at Rs. 23,990, while the YAS-209 has been priced at Rs. 35,490. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+