ನೀವು ಏರ್‌ಟೆಲ್ ಸಿಮ್ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ಪ್ಲ್ಯಾನ್ ಬಗ್ಗೆ ತಿಳಿದಿರಿ!
ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಜಿಯೋಗೆ ಪ್ರಬಲ ಪೈಪೋಟಿ ನೀಡುತ್ತಿರುವ ಟೆಲಿಕಾಂ ಆಗಿ ಏರ್‌ಟೆಲ್ ಕಾಣಿಸಿಕೊಂಡಿದೆ. ಏರ್‌ಟೆಲ್ ಅಲ್ಪಾವಧಿಯ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿಯ ಯೋಜನೆಗಳ ಆಯ್ಕೆಯನ್ನು ಒಳಗೊಂಡಿದೆ. ಸಂಸ್ಥೆಯ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ ಪ್ರಯೋಜನಗಳನ್ನು ಪಡೆದಿವೆ. ಅದಾಗ್ಯೂ, ಗ್ರಾಹಕರು ಏರ್‌ಟೆಲ್ ಸಿಮ್ ಆಕ್ಟೀವ್ ಇಡಲು ಕೆಲವು ಬೇಸಿಕ್ ಯೋಜನೆಗಳ ಆಯ್ಕೆ ಸಹ ಪಡೆದಿದೆ.

ಹೌದು, ಬಹುತೇಕ ಬಳಕೆದಾರು ಡ್ಯುಯಲ್ ಸಿಮ್ ಬಳಕೆ ಮಾಡುತ್ತಾರೆ. ಒಂದು ವೇಳೆ ಏರ್‌ಟೆಲ್ ಸಿಮ್ ಅನ್ನು ಎರಡನೇ ಸಿಮ್ ಆಗಿ ಬಳಕೆ ಮಾಡುತ್ತಿದ್ದು, ಅದನ್ನು ಆಕ್ಟಿವ್ ಇರಿಸಬೇಕಿದ್ದರೆ ಕನಿಷ್ಠಿ ರೀಚಾರ್ಜ್ ಮಾಡಬೇಕಿರುತ್ತದೆ. ಈ ನಿಟ್ಟಿನಲ್ಲಿ ಏರ್‌ಟೆಲ್ ಕೆಲವು ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದೆ. ಆರಂಭಿಕ ಬೆಲೆಯು 99 ರೂ. ಆಗಿದ್ದು, ಸಿಮ್ ಚಾಲ್ತಿ ಇಡಲು ಇವು ನೆರವಾಗಲಿವೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ ಕನಿಷ್ಠಿ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.
ಏರ್‌ಟೆಲ್ 99ರೂ. ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 99 ರೂ. ಯೋಜನೆಯು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200 MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗುತ್ತದೆ.

ಏರ್‌ಟೆಲ್ 109ರೂ. ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 109 ರೂ. ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗುತ್ತದೆ.
ಏರ್‌ಟೆಲ್ 111ರೂ. ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 111 ರೂ. ಸ್ಮಾರ್ಟ್ ಪ್ಲಾನ್ 99 ರೂ. ಟಾಕ್ ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಎಸ್‌ಎಂಎಸ್‌ಗೆ ಸಂಬಂಧಿಸಿದಂತೆ, ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್ ಗೆ 1.5 ರೂ. ವೆಚ್ಚವಾಗಲಿದೆ. ಈ ಯೋಜನೆಯು ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 128ರೂ. ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 128 ರೂ. ಸ್ಮಾರ್ಟ್ ಯೋಜನೆಯು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸುತ್ತದೆ. ಹೆಚ್ಚುವರಿಯಾಗಿ, ಮೊಬೈಲ್ ಡೇಟಾಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಸ್ಥಳೀಯ ಎಸ್‌ಎಮ್‌ಎಸ್ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್ ಗೆ 1.5 ರೂ. ಈ ಪ್ಯಾಕ್ 30 ದಿನಗಳ ವರೆಗೆ ಮಾನ್ಯವಾಗಿರುತ್ತದೆ.


Click it and Unblock the Notifications








