Home
ಸುದ್ದಿಜಾಲ

ಯು ನೆಟ್‌ವರ್ಕ್‌ನ 200 Mbps ಬ್ರಾಡ್‌ಬ್ಯಾಂಡ್‌ ಯೋಜನೆಯ ಬೆಲೆಯಲ್ಲಿ ಇಳಿಕೆ!

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಪೈಪೋಟಿ ಹೆಚ್ಚಿದ್ದು, ಪ್ರತಿಷ್ಠಿತ ಕಂಪನಿಗಳು ಭಿನ್ನ ಬೆಲೆಯಲ್ಲಿ ಯೋಜನೆಗಳನ್ನು ಪರಿಚಯಿಸುತ್ತ ಸಾಗಿವೆ. ಕೆಲವು ಕಂಪನಿಗಳು ಬೆಲೆ ಇಳಿಕೆ ಮಾಡಿದರೇ ಮತ್ತೆ ಕೆಲ ಕಂಪನಿಗಳು ಹೆಚ್ಚಿನ ಪ್ರಯೋಜನ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತವೆ. ಈ ನಿಟ್ಟಿನಲ್ಲಿ ಬ್ರಾಡ್‌ಬ್ಯಾಂಡ್‌ ಪೂರೈಕೆದಾರ ಕಂಪನಿ ಯು ತನ್ನ ಬ್ರಾಡ್‌ಬ್ಯಾಂಡ್‌ ಯೋಜನೆಯಲ್ಲಿ ದರ ಇಳಿಕೆ ಮಾಡಿದೆ.

ಬ್ರಾಡ್‌ಬ್ಯಾಂಡ್‌

ಹೌದು, ಯು ಬ್ರಾಡ್‌ಬ್ಯಾಂಡ್‌' ನೆಟ್‌ವರ್ಕ್ ತನ್ನ 200Mbps ಪ್ಲ್ಯಾನ್‌ನಲ್ಲಿ ಬೆಲೆಯಲ್ಲಿ ಕಡಿತ ಮಾಡಿದೆ. 200Mbps ಬ್ರಾಡ್‌ಬ್ಯಾಂಡ್ ವೇಗದ ಯೋಜನೆಯ ಬೆಲೆ ತೆರಿಗೆ ಸೇರಿದಂತೆ ಕೇವಲ 1,618ರೂ. ಆಗಿದೆ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಯು ಬ್ರಾಡ್‌ಬ್ಯಾಂಡ್ ಮುಂಬೈನಲ್ಲಿ 200Mbps, 150Mbps ಮತ್ತು 100Mbps ವೇಗದೊಂದಿಗೆ ಕೇವಲ ಮೂರು ‘ಡ್ಯುಯಲ್ ಸ್ಪೀಡ್ (ಎಫ್‌ಯುಪಿ) ಯೋಜನೆಗಳನ್ನು ಹೊಂದಿದೆ.

ಒದಗಿಸಲಿದೆ

200Mbps ಡ್ಯುಯಲ್ ಸ್ಪೀಡ್ (ಎಫ್‌ಯುಪಿ) ಯೋಜನೆಯಿಂದ ಪ್ರಾರಂಭವಾಗುವ ಇದರ ಬೆಲೆ 30 ದಿನಗಳವರೆಗೆ 1,618ರೂ. ಆಗಿದ್ದು, 500 ಜಿಬಿ ಡೇಟಾವನ್ನು ನೀಡುತ್ತದೆ. 90 ದಿನಗಳ ವರೆಗಿನ ಯೋಜನೆಯ ಬೆಲೆ 4,839ರೂ. ಆಗಿದ್ದು, 1575 ಜಿಬಿ ಡೇಟಾ ಒದಗಿಸಲಿದೆ. ಹಾಗೆಯೇ 180 ದಿನಗಳವರೆಗಿನ ಯೋಜನೆ, 3300 ಜಿಬಿ ಸೌಲಭ್ಯ ಹಾಗೂ ಎಫ್‌ಯುಪಿ ಮಿತಿಯೊಂದಿಗೆ 9,658 ರೂ. ಪ್ರೈಸ್‌ ಪಡೆದಿದೆ. ಇನ್ನು ಕೊನೆಯದಾಗಿ 360 ದಿನಗಳವರೆಗಿನ ಯೋಜನೆಯು 19,266ರೂ. ಬೆಲೆ ಹೊಂದಿದ್ದು, 6900 ಜಿಬಿ ಡೇಟಾ ಸೌಲಭ್ಯವನ್ನು ಪಡೆದಿದೆ.

ಯೋಜನೆ

150Mbps ಬ್ರಾಡ್‌ಬ್ಯಾಂಡ್ ಯೋಜನೆ 30 ದಿನಗಳು, 90 ದಿನಗಳು, 180 ದಿನಗಳು ಮತ್ತು 360 ದಿನಗಳ ಚಂದಾದಾರಿಕೆಗಳ ಆಯ್ಕೆ ಪಡೆದಿದೆ. ಇನ್ನು ಈ ಯೋಜನೆಗಳ ಬೆಲೆ ಕ್ರಮವಾಗಿ 1,382ರೂ, 4,131ರೂ, 8,242ರೂ ಮತ್ತು 16,434ರೂ. ಹಾಗೆಯೇ ಈ ಯೋಜನೆಗಳ FUP ಮಿತಿ ಕ್ರಮವಾಗಿ 400 ಜಿಬಿ, 1275 ಜಿಬಿ, 2700 ಜಿಬಿ ಮತ್ತು 5700 ಜಿಬಿ ಆಗಿದೆ. ಕೊನೆಯದಾಗಿ, ಯು ಬ್ರಾಡ್‌ಬ್ಯಾಂಡ್‌ನಿಂದ 100Mbps ಬ್ರಾಡ್‌ಬ್ಯಾಂಡ್ ಯೋಜನೆ ಪ್ರತಿ ತಿಂಗಳು ಸುಮಾರು 350 ಜಿಬಿ ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಬೆಲೆಯು 1,326ರೂ.ಗಳಿಂದ ಪ್ರಾರಂಭವಾಗುತ್ತದೆ.

ಎಂಬಿಪಿಎಸ್

ಯು ನೆಟವರ್ಕ್‌ ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಜೊತೆಗೆ ಇತರೆ ಪ್ಲ್ಯಾನ್ ಹೊಂದಿದೆ. 50 Mbps ಮತ್ತು 16 Mbps ವೇಗದೊಂದಿಗೆ ಕಡಿಮೆ ಬೆಲೆಯ ಡೇಟಾ ಯೋಜನೆಗಳನ್ನು ಸಹ ಯು ಟೆಲಿಕಾಂ ಹೊಂದಿದೆ. 250 ಜಿಬಿ ಮಿತಿಯನ್ನು ಹೊಂದಿರುವ 50 ಎಂಬಿಪಿಎಸ್ ಡೇಟಾ ಯೋಜನೆಗೆ 30 ದಿನಗಳವರೆಗೆ 1,087 ರೂ. ಆಗಿದೆ. ಹಾಗೆಯೇ 360 ದಿನಗಳವರೆಗೆ, ಯೋಜನೆಯ ಬೆಲೆ 12,984 ರೂ. ಆಗಿದ್ದು, 3900GB ಡೇಟಾವನ್ನು ನೀಡುತ್ತದೆ.

Best Mobiles in India

English summary
You Broadband's revised broadband plans in Mumbai are not impressive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+