Home
ಸುದ್ದಿಜಾಲ

ಐಫೋನ್‌ 15 ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ; ಉದ್ದದ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!

ಭಾರತದಲ್ಲಿ ನಿನ್ನೆಯಿಂದ ಆಪಲ್‌ ಐಫೋನ್‌15 ಸರಣಿ (iPhone 15 series) ಸೇಲ್‌ ಆರಂಭ ಆಗಿದೆ. ಅದಾಗ್ಯೂ ಕೆಲವು ಕಡೆಗಳಲ್ಲಿ ಜನರು ಈ ಫೋನ್‌ಗಳನ್ನು ಖರೀದಿ ಮಾಡಲು ದೊಡ್ಡ ಕ್ಯೂನಲ್ಲೇ ಕಾದು ನಿಂತಿರುವುದನ್ನು ನೀವು ನೋಡಿಬಹುದು. ಆದರೆ, ಈ ನಗರದ ಜನರು ಹೊಸ ಐಫೋನ್‌ ಅನ್ನು ಕೇವಲ 10 ನಿಮಿಷದಲ್ಲೇ ತಮ್ಮ ಮನೆಗೆ ತರಿಸಿಕೊಳ್ಳಬಹುದು.

ಹೌದು, ಬ್ಲಿಂಕಿಟ್ ದೆಹಲಿ ಎನ್‌ಸಿಆರ್, ಮುಂಬೈ ಮತ್ತು ಪುಣೆಯ (Delhi NCR, Mumbai,Pune) ಗ್ರಾಹಕರಿಗೆ ಹೊಸ ಐಫೋನ್‌ 15 ಸರಣಿಯನ್ನು ಆರ್ಡರ್ ಮಾಡುವ ಆಯ್ಕೆ ನೀಡಿದೆ. ಈ ಮೂಲಕ ಗ್ರಾಹಕರು ಆರ್ಡರ್ ಮಾಡಿದ ಕೇವಲ 10 ನಿಮಿಷದಲ್ಲಿ ಅವರ ಮನೆ ಬಾಗಿಲಿಗೆ ಐಫೋನ್‌ ಹೋಗುತ್ತದೆ. ಹಾಗಿದ್ರೆ, ಏನಿದು ವಿಶೇಷ ಸೇವೆ?, ಯಾವ ಫೋನ್‌ಗೆ ಎಷ್ಟು ಬೆಲೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 15 ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ...

ಹತ್ತೆ ನಿಮಿಷದಲ್ಲಿ ಮನೆ ಬಾಗಿಲಿಗೆ ಐಫೋನ್‌ 15: ಐಫೋನ್ 15 ಸರಣಿಯನ್ನು ಕೆಲವೇ ನಿಮಿಷಗಳಲ್ಲಿ ಖರೀದಿಸಬಹುದು ಎಂದರೆ ನೀವು ನಂಬಲೇಬೇಕು. ಬ್ಲಿಂಕಿಟ್ (Blinkit ) ದೆಹಲಿ ಎನ್‌ಸಿಆರ್, ಮುಂಬೈ ಮತ್ತು ಪುಣೆಯ ಗ್ರಾಹಕರಿಗೆ ಹೊಸ ಐಫೋನ್ 15 ಸರಣಿಯನ್ನು ಆರ್ಡರ್ ಮಾಡಲು ಅವಕಾಶ ನೀಡಿದೆ. ಹೊಸ 2023 ಐಫೋನ್ ಅನ್ನು ಕನಿಷ್ಠ 10 ನಿಮಿಷಗಳಲ್ಲಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ಆಪಲ್‌ನ ನ ಅಧಿಕೃತ ಅಂಗಡಿಯಾದ ಯೂನಿಕಾರ್ನ್‌ನೊಂದಿಗೆ ಪಾಲುದಾರಿಕೆ ಪಡೆಯಲಾಗಿದೆ.

ಆಪಲ್‌ನ ಅಧಿಕೃತ ಮಳಿಗೆಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು ಆದ್ಯತೆ ನೀಡುವ ವ್ಯಕ್ತಿಗಳಿಗೆ ಫೋನ್‌ಗಳನ್ನು ಪೂರೈಸಲು ಈ ಸೇವೆಯನ್ನು ಆರಂಭಿಸಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಭಾರತದಾದ್ಯಂತ ಅನೇಕ ಆಪಲ್ ಅಭಿಮಾನಿಗಳು ಮುಂಬೈ ಮತ್ತು ದೆಹಲಿ ಸ್ಟೋರ್‌ಗಳಲ್ಲಿ ನೆರೆದಿದ್ದರು. ಅಷ್ಟೇ ಅಲ್ಲದೆ ಓರ್ವ ವ್ಯಕ್ತಿ ಐಫೋನ್‌ 15 ಪ್ರೊ ಮ್ಯಾಕ್ಸ್‌ ನ ಮೊದಲ ಗ್ರಾಹಕನಾಗುವ ಬಯಕೆಯಿಂದ ಮುಂಬೈನ ಆಪಲ್‌ BKC ಸ್ಟೋರ್‌ನಲ್ಲಿ 17 ಗಂಟೆಗಳ ಕಾಲ ಕಾದಿರುವುದು ಸುದ್ದಿಯಾಗಿತ್ತು.

ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿಯಾಡಲು ಬ್ಲಿಂಕಿಟ್ ಸಜ್ಜಾಗಿದೆ. ಅಂದರೆ ಕೆಲವೇ ನಿಮಿಷಗಳಲ್ಲಿ ಐಫೋನ್ ಅನ್ನು ತಲುಪಿಸುವ ಭರವಸೆ ನೀಡಿದೆ. ಆಪಲ್ ಪ್ರೀಮಿಯಂ ಮರುಮಾರಾಟಗಾರ ಯುನಿಕಾರ್ನ್‌ನೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಗೆ ಧನ್ಯವಾದಗಳು, ಈ ಸೇವೆಯು ಈಗಾಗಲೇ ಗ್ರಾಹಕರಿಗೆ ನಾಲ್ಕು ಡಿವೈಸ್‌ಗಳನ್ನು ಯಶಸ್ವಿಯಾಗಿ ತಲುಪಿಸಿದೆ ಎಂದು ಬ್ಲಿಂಕಿಟ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದೆ.

ಇನ್ನು ಐಫೋನ್ 15 ಮತ್ತು ಐಫೋನ್ 15 ಪ್ಲಸ್ ವಿವಿಧ ಬಣ್ಣಗಳು ಮತ್ತು ಸ್ಟೋರೇಜ್‌ ಆಯ್ಕೆಗಳಲ್ಲಿ ಬ್ಲಿಂಕಿಟ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಸಲು ಲಭ್ಯವಿದೆ. ಖರೀದಿದಾರರು ಲಾಂಚ್‌ ನ ಕೊಡುಗೆಗಳ ಲಾಭವನ್ನು ಸಹ ಈ ವೇಳೆ ಪಡೆಯಬಹುದು. ಇವುಗಳಲ್ಲಿ ಯಾವುದೇ ವೆಚ್ಚದ ಇಎಮ್‌ಐ ಕಡಿಮೆ-ವೆಚ್ಚದ ಇಎಮ್‌ಐ ಮತ್ತು ಅರ್ಹ ಹೆಚ್‌ಡಿಎಫ್‌ಸಿ ಕಾರ್ಡ್‌ಗಳ ಮೇಲೆ 5,000 ರೂ.ಗಳ ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆ ಸಹ ಲಭ್ಯ ಇದೆ.

ಬ್ಲಿಂಕಿಟ್ ಮೂಲಕ ಐಫೋನ್ 15 ಅಥವಾ ಐಫೋನ್ 15 ಪ್ಲಸ್‌ ಅನ್ನು ಆರ್ಡರ್ ಮಾಡಲು ಬಯಸುವವರು ಆಪ್‌ಮೂಲಕ ಬುಕ್‌ ಮಾಡಬಹುದು. ಅವರ ಆದ್ಯತೆಯ ಮಾದರಿಯನ್ನು ಹುಡುಕಿ, ಬಯಸಿದ ವೇರಿಯಂಟ್‌ ಅನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲಾಗಿದೆ. ಅದನ್ನು ತಮ್ಮ ಕಾರ್ಟ್‌ಗೆ ಸೇರಿಸಿ ಮತ್ತು ಚೆಕ್‌ಔಟ್‌ಗೆ ಮುಂದುವರಿಯಬಹುದು. ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಮಾರಾಟವು ವಿಳಂಬವಾಗಲಿದ್ದು, ಸದ್ಯಕ್ಕೆ ಎರಡು ಸಾಮಾನ್ಯ ಮಾದರಿಗಳನ್ನು ಮಾತ್ರ ಬ್ಲಿಂಕಿಟ್ ಮಾರಾಟ ಮಾಡುತ್ತಿದೆ.

ಐಫೋನ್‌ 15 ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ...

128GB ಬೇಸ್ ಮಾಡೆಲ್ ಐಫೋನ್‌ 15 ಬೆಲೆ 79,900 ರೂ.ಗಳೊಂದಿಗೆ ಆರಂಭ ಆಗಲಿದೆ. ಐಫೋನ್‌ 15 ಪ್ಲಸ್ 128GB ಯ ಬೆಲೆ 89,900 ರೂ. ಗಳನ್ನು ಹೊಂದಿದ್ದು, ಐಫೋನ್‌ 15 ಪ್ರೊ 1,34,900 ರೂ.ಗೆ ಮಾರಾಟವಾಗಲಿದೆ ಮತ್ತು ಆಪಲ್‌ನಿಂದ ಅತ್ಯಂತ ಪ್ರೀಮಿಯಂ ಐಫೋನ್ ಆಗಿರುವ ಐಫೋನ್‌ 15 ಪ್ರೊ ಮ್ಯಾಕ್ಸ್‌ ಬೆಲೆ 1,59,900 ರೂ.ಗಳಾಗಿದೆ.

Best Mobiles in India

English summary
Blinkit offers to the customers of Delhi NCR, Mumbai and Pune an option to order the new iPhone 15 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+