Just In
Don't Miss
- News
Pervez Musharraf death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನಿಧನ
- Movies
Hitler Kalyana: 400 ಸಂಚಿಕೆ ಪೂರೈಸಿದ ಎಜೆ- ಲೀಲಾ ಕಥೆ: ಸಂಭ್ರಮಾಚರಣೆ ಮಾಡಿದ ತಂಡ
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ ಖರೀದಿಗೆ ಸಕಾಲ!..ಆಪಲ್ ಐಫೋನ್ XR ಬೆಲೆ ಇಳಿಕೆ!
ಸದ್ಯ ಸ್ಮಾರ್ಟ್‌ಫೋನ್ ಎಲ್ಲರಿಗೂ ಅಗತ್ಯ ಡಿವೈಸ್ ಆಗಿದ್ದು, ಅದರಲ್ಲೂ ಆಪಲ್ ಕಂಪನಿಯ ಐಫೋನ್ ಹೊಂದಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಹಾಗೇ ನಿಮಗೂ ಐಫೋನ್ ಖರೀದಿಸುವ ಆಸೆ ಇದ್ದರೆ ಈಗಲೇ ಖರೀದಿಸಲು ಮುಂದಾಗಿ. ಏಕೆಂದರೇ ಇ ಕಾಮರ್ಸ್ ಜಾಲತಾಣ ಅಮೆಜಾನ್ ಇಂಡಿಯಾದಲ್ಲಿ 'ಐಫೋನ್ XR' ಭರ್ಜರಿ ಡಿಸ್ಕೌಂಟ್‌ನಲ್ಲಿ ದೊರೆಲಿದೆ. ಹೀಗಾಗಿ ಐಫೋನ್ ಖರೀದಿಗೆ ಇದುವೇ ಸಕಾಲ.

ಹೌದು, ಜನಪ್ರಿಯ ಇ ಕಾಮರ್ಸ್ ಜಾಲತಾಣ ಅಮೆಜಾನ್ ಐಫೋನ್ XR ಸ್ಮಾರ್ಟ್‌ಫೋನ್‌ಗೆ ಭಾರಿ ರಿಯಾಯಿತಿ ಇದ್ದು, 64GB ಸ್ಟೋರೇಜ್ ಸಾಮರ್ಥ್ಯದ ಈ ಐಫೋನ್ ಆಫರ್‌ನಲ್ಲಿ ಕೇವಲ 53,910ರೂ.ಗಳಿಗೆ ದೊರೆಯಲಿದೆ. ಇದು ಸೀಮಿತ ಅವಧಿಯ ಈ ಆಫರ್ ಆಗಿದ್ದು, ಇದೇ ಜೂನ್ 30ರ ವರೆಗೂ ಮಾತ್ರ ಇರಲಿದೆ. ರಿಯಾಯಿತಿ ಕೊಡುಗೆಯಲ್ಲಿ ಆಯ್ದ ಪ್ರಮುಖ ಬ್ಯಾಂಕ್‌ಗಳಿಂದ ಇಎಮ್‌ಐ ಸೌಲಭ್ಯ ಇದೆ.

ಇದೇ ಆಫರ್ ಅಮೆಜಾನ್‌ನಲ್ಲಿ ಮಾತ್ರವಲ್ಲದೇ ಆಫ್‌ಲೈನ್‌ನಲ್ಲಿಯೂ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಶೇ.10% ವಿಶೇಷ ಡಿಸ್ಕೌಂಟ್ ಪ್ರಯೋಜನ ಪಡೆದುಕೊಳ್ಳಬಹುದು. ಹಾಗಾದರೇ ಆಪಲ್ ಐಫೋನ್ XR ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ
6.10 ಇಂಚಿನ LCD ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 828x1792 ಆಗಿದೆ. ಹಾಗೆಯೇ ಪ್ರತಿ ಇಂಚಿನ ಡಿಸ್‌ಪ್ಲೇ ಸಾಂದ್ರತೆಯು 326 ppi ಆಗಿದೆ. ಈ ಐಫೋನ್ 150.90 x 75.70 x 8.30mm ಸುತ್ತಳತೆಯ ರಚನೆಯನ್ನು ಹೊಂದಿದ್ದು, 194.00ಗ್ರಾಂ ತೂಕವನ್ನು ಪಡೆದುಕೊಂಡಿದೆ. IP67 ಸಾಮರ್ಥ್ಯದಲ್ಲಿ ಧೂಳು ಮತ್ತು ನೀರಿನಿಂದ ರಕ್ಷಣೆಯ ರಚನೆ ಇದೆ.

ಪ್ರೊಸೆಸರ್ ಮತ್ತು ಮೆಮೊರಿ
ಆಪಲ್ XR ಐಫೋನ್ hexa ಕೋರ್ ಆಪಲ್ A12 ಬೈಯೊನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮಲ್ಟಿಟಾಸ್ಕ್ ಕೆಲಸಗಳನ್ನು ವೇಗವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಹಾಗೆಯೇ 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಸಹ ಹೊಂದಿದ್ದು, ಆಪಲ್ iOS 12 ಓಎಸ್ ಈ ಫೋನಿನ ಕಾರ್ಯವೈಖರಿ ಹೆಚ್ಚಿಸಿದೆ.

ಕ್ಯಾಮೆರಾ ಸ್ಪೆಷಲ್
ಆಪಲ್ XR ಐಫೋನ್ ಹಿಂಬದಿಯಲ್ಲಿ 12ಎಂಪಿ ಸಾಮರ್ಥ್ಯದ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಈ ಕ್ಯಾಮೆರಾವು ಆಟೋ ಫೋಕಸ್ ಜೊತೆಗೆ f/1.8 ಅಪಾರ್ಚರ್ ಹೊಂದಿದೆ. ಇನ್ನು ಸೆಲ್ಫಿಗಾಗಿ 7ಎಂಪಿ ಕ್ಯಾಮೆರಾ ಒದಗಿಸಲಾಗಿದ್ದು, ಈ ಕ್ಯಾಮೆರಾವು f/2.2 ಅಪಾರ್ಚರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಕ್ಯಾಮೆರಾದಲ್ಲಿ ವಿಶೇಷ ಆಯ್ಕೆಗಳನ್ನು ಸಹ ನೀಡಲಾಗಿದೆ.

ಬ್ಯಾಟರಿ ಬಲ
ಆಪಲ್ XR ಐಫೋನ್‌ನಲ್ಲಿ 2942 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ 15W ಸಾಮರ್ಥ್ಯದಲ್ಲಿ Qi ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರ ನೆರವಿನಿಂದ ಕೇವಲ 30 ನಿಮಿಷದಲ್ಲಿ ಶೇ.50% ಬ್ಯಾಟರಿ ಪೂರ್ಣಗೊಳ್ಳಲಿದೆ. 65 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಪಡೆದಿದೆ.

ಇತರೆ ಸೌಲಭ್ಯಗಳು
3D ಫೇಸ್ ಅನ್‌ಲಾಕ್ ಸೌಲಭ್ಯವನ್ನು ಪಡೆದುಕೊಂಡಿದ್ದು, ವೈಫೈ 802.11, ಜಿಪಿಎಸ್, ಬ್ಲೂಟೂತ್ v5.00, ಎನ್‌ಎಫ್‌ಸಿ, ಆಂಬಿಯಂಟ್ ಲೈಟ್ ಸೆನ್ಸಾರ್, ಸೇರಿದಂತೆ ಇನ್ನಿತರೆ ಆಯ್ಕೆಗಳನ್ನು ಸಹ ಒಳಗೊಂಡಿದೆ. ಇದರೊಂದಿಗೆ ಬ್ಲ್ಯಾಕ್, ರೆಡ್, ಯೆಲ್ಲೊ, ಬ್ಲೂ, ಕೋರಲ್, ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470