Home
ಸುದ್ದಿಜಾಲ

ಈ ಅತ್ಯುತ್ತಮ ಕ್ಯಾಮೆರಾ ಫೋನಿನ ಬೆಲೆಯಲ್ಲಿ ಈಗ ಸಖತ್ ಇಳಿಕೆ!

ಪೊಕೊ ಸಂಸ್ಥೆಯು ಹಲವು ಫೋನ್‌ಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಆ ಪೈಕಿ ಇತ್ತೀಚಿಗ ಲಾಂಚ್ ಮಾಡಲಾಗಿರುವ ಪೊಕೊ X5 ಪ್ರೊ 5G ಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಈ ಮೊಬೈಲ್‌ ಇದೀಗ ಸಖತ್‌ ರಿಯಾಯಿತಿ ಪಡೆದಿದ್ದು, ಗ್ರಾಹಕರು ಖುಷಿ ಪಡುವಂತೆ ಮಾಡಿದೆ. ಈ ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಹೊಂದಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ ಆಯೋಜಿಸಿರುವ ಬಿಗ್‌ ಸೇವಿಂಗ್ ಡೇಸ್‌ ಮಾರಾಟದಲ್ಲಿ 'ಪೊಕೊ X5 ಪ್ರೊ 5G' ಮೊಬೈಲ್‌ 8GB RAM ವೇರಿಯಂಟ್‌ 2೦% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ವೇರಿಯಂಟ್‌ ಮೊಬೈಲ್‌ ದರವು 28,999ರೂ. ಗಳು ಆಗಿದ್ದು, ಗ್‌ ಸೇವಿಂಗ್ ಡೇಸ್‌ ಮಾರಾಟದ ಆಫರ್‌ನಲ್ಲಿ ಗ್ರಾಹಕರು 22,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಈ ಅತ್ಯುತ್ತಮ ಕ್ಯಾಮೆರಾ ಫೋನಿನ ಬೆಲೆಯಲ್ಲಿ ಈಗ ಸಖತ್ ಇಳಿಕೆ!

ಅಂದಹಾಗೆ ಪೊಕೊ X5 ಪ್ರೊ 5G ಫೋನ್‌ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್‌ 778 SoC ಪವರ್‌ ಪಡೆದಿದ್ದು, ಪ್ರಾಥಮಿಕ ರಿಯರ್ ಕ್ಯಾಮೆರಾ 108 ಮೆಗಾಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನ್ 16 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಪೊಕೊ X5 ಪ್ರೊ 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪೊಕೊ X5 ಪ್ರೊ ಮೊಬೈಲ್‌ ಡಿಸ್‌ಪ್ಲೇ ಹಾಗೂ ವಿನ್ಯಾಸ : ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಎಕ್ಸ್‌ಫಿನಿಟಿ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1920 PWM ಡಿಮ್ಮಿಂಗ್ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು HDR10+ ಬೆಂಬಲ ಮತ್ತು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಸಪೋರ್ಟ್‌ ಮಾಡಲಿದೆ. ಇನ್ನು ಈ ಮೊಬೈಲ್‌ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್‌ 778 SoC ಪವರ್‌ ಪಡೆದಿದ್ದು, ಇತ್ತೀಚಿನ ಆಂಡ್ರಾಯ್ಡ್‌ ಓಎಸ್‌ ಸಪೋರ್ಟ್‌ ಪಡೆದಿದೆ. 8GB RAM ಆಯ್ಕೆ ಸಹ ಇದೆ.

ಪೊಕೊ X5 ಪ್ರೊ ಮೊಬೈಲ್‌ ಕ್ಯಾಮೆರಾ ಸೆನ್ಸಾರ್ ರಚನೆ : ಪೊಕೊ X5 ಪ್ರೊ ಮೊಬೈಲ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆನ್ಸಾರ್ ರಚನೆ ಅನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 108ಎಂಪಿ ಸೆನ್ಸಾರ್‌, ಸೆಕೆಂಡರಿ ಕ್ಯಾಮೆರಾ 8ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2ಎಂಪಿ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ.

ಪೊಕೊ X5 ಪ್ರೊ ಮೊಬೈಲ್‌ ಮುಂಭಾಗದಲ್ಲಿ 16 ಎಂಪಿ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಮೊಬೈಲ್‌ ಹಿಂಭಾಗದ ಕ್ಯಾಮೆರಾ ಮೂಲಕ 30fps ನಲ್ಲಿ 4K ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೇ ಕೆಲವು ಬೇಸಿಕ್ ಎಟಿಡಿಂಗ್ ಆಯ್ಕೆಗಳನ್ನು ಸಹ ಪಡೆದಿದೆ.

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ : ಪೊಕೊ X5 ಪ್ರೊ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಬಲ ಅನ್ನು ಒಳಗೊಂಡಿದೆ. ಈ ಫೋನ್‌ 67W ವೇಗದ ಚಾರ್ಜಿಂಗ್‌ ಬೆಂಬಲಿಸಲಿದ್ದು, ಕೇವಲ 45 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

ಈ ಸ್ಮಾರ್ಟ್‌ಫೋನ್‌ ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ ಅನ್ನು ಒಳಗೊಂಡಿದೆ. ಇದಲ್ಲದೆ ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ 5.1 ವೈರ್‌ಲೆಸ್ ಕನೆಕ್ಟಿವಿಟಿ ಅನ್ನು ಸಪೋರ್ಟ್‌ ಮಾಡಲಿದೆ.

Best Mobiles in India

English summary
POCO X5 Pro 5G Mobile price drop on flipkart. check offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+