iPhone: ಐಫೋನ್ 14 ಪ್ಲಸ್ ಅನ್ನು ದೀಪಾವಳಿ ವಿಶೇಷ ಸೇಲ್‌ನಲ್ಲಿ 20,400ರೂ. ಗೆ ಖರೀದಿಸಿ! ಅದೇಗೆ ಅಂತೀರಾ?
ಐಫೋನ್ (iPhone) ಹೊಂದುವುದು ಇತ್ತೀಚಿನ ದಿನಗಳಲ್ಲಿ ಒಂದು ರೀತಿಯ ಕ್ರೇಜ್ ಆಗಿದೆ. ಈ ಕಾರಣಕ್ಕೆ ಐಫೋನ್‌ಗಳಿಗೆ ಇರುವ ಜಾಗತಿಕ ಬೇಡಿಕೆ ಇತರೆ ಫೋನ್‌ಗಳಿಗೆ ಇಲ್ಲ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ವಿವಿಧ ಐಫೋನ್ ಮಾದರಿಗಳಿಗೆ ಬೊಂಬಾಟ್ ಆಫರ್ ಘೋಷಣೆ ಮಾಡಿದ್ದು, ಈ ಮೂಲಕ ಉತ್ತಮ ಬೆಲೆಯಲ್ಲಿ ಐಫೋನ್ ಖರೀದಿ ಮಾಡಿ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಐಫೋನ್‌ಗಳು ಉತ್ತಮ ಕ್ಯಾಮೆರಾ ಫೀಚರ್ಸ್, ಭದ್ರತಾ ಫೀಚರ್ಸ್ ಸೇರಿದಂತೆ ಅನೇಕ ರೀತಿಯಲ್ಲಿ ಅತ್ಯುತ್ತಮ ಎನಿಸಿಕೊಂಡಿರುವುದರಿಂದ ಈ ಫೋನ್‌ಗಳು ಹೆಚ್ಚು ಹೆಚ್ಚಾಗಿ ಸೇಲ್ ಆಗುತ್ತವೆ. ಈ ನಡುವೆ ದೀಪಾವಳಿ ಹಬ್ಬದ ಅಂಗವಾಗಿ ಫ್ಲಿಪ್‌ಕಾರ್ಟ್ ವಿಶೇಷ ಸೇಲ್ (Flipkart Big Diwali Sale) ಆಯೋಜನೆ ಮಾಡಿದ್ದು, ಈ ಸೇಲ್‌ನಲ್ಲಿ ಐಫೋನ್ 14 ಪ್ಲಸ್ (iPhone 14 Plus) ಫೋನ್ ಅನ್ನು ನೀವು 20,400ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಸಾಧ್ಯ?, ಈ ಫೋನ್‌ನ ಪ್ರಮುಖ ಫೀಚರ್ಸ್ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

20,400ರೂ. ಗೆ ಐಫೋನ್ 14 ಪ್ಲಸ್: ಆಪಲ್ ಐಫೋನ್ 14 ಪ್ಲಸ್ ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಬ್ಲೂ, ಪರ್ಪಲ್, ಮಿಡ್ನೈಟ್, ಸ್ಟಾರ್ಲೈಟ್ ಮತ್ತು ರೆಡ್. ಈ ಫೋನ್ 6.7 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಐಫೋನ್ 13 ಪ್ರೊ (iPhone 13 Pro) ಮಾದರಿಗಳಲ್ಲಿ ಕಂಡುಬರುವಂತೆ ಸುಧಾರಿತ A15 ಬಯೋನಿಕ್ ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ.
ಇದರೊಂದಿಗೆ ಈ ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್‌ಮುಖ್ಯ ಸೆನ್ಸರ್ ಮತ್ತು ಅಲ್ಟ್ರಾ-ವೈಡ್ ಸೆನ್ಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, 5G ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ ಈ ಫೋನ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 26 ಗಂಟೆಗಳವರೆಗೆ ಬ್ಯಾಕಪ್ ನೀಡಲಿದೆ.ಈ ಮೂಲಕ ಈ ಫೋನ್ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಜೊತೆಗೆ ಈ ಫೋನ್ ಅನ್ನು ಭಾರತದಲ್ಲಿ 89,900ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದ್ದು, ನೀವು 43,500ರೂ.ಗಳ ರಿಯಾಯಿತಿಯ ನಂತರ 20,400ರೂ.ಗಳಲ್ಲಿ ಪಡೆಯಬಹುದಾಗಿದೆ.

ಐಫೋನ್ 14 ಪ್ಲಸ್‌ಗೆ 15,901 ರೂ.ಗಳ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ಈ ಫೋನ್ 63,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ನಡುವೆ ಖರೀದಿದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟಿನಲ್ಲಿ 1500 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಬೆಲೆ 62,499ರೂ.ಗೆ ಇಳಿಯಲಿದೆ. ಇಷ್ಟು ಸಾಲುವುದಿಲ್ಲ ಎಂದಾದರೆ ನೀವು ವಿನಿಮಯ ಆಫರ್ ಬಳಕೆ ಮಾಡಬಹುದು.
ಅಂದರೆ ಈ ಫೋನ್ ಖರೀದಿಗೆ ವಿನಿಮಯ ಆಫರ್ ಕೊಡುಗೆಯನ್ನೂ ಸಹ ನೀಡಲಾಗಿದೆ. ನಿಮ್ಮ ಬಳಿ ಹಳಿ ಹಳೆಯ ವೇರಿಯಂಟ್‌ನ ಐಫೋನ್‌ಗಳಿದ್ದರೆ ಅವುಗಳನ್ನು ಮಾರಾಟ ಮಾಡಿ ಈ ಹೊಸ ಐಫೋನ್‌ಗೆ ಬದಲಾಗಬಹುದು. ನಿಮ್ಮ ಹಳೆಯ ಐಫೋನ್ ಅತ್ಯುತ್ತಮವಾಗಿದ್ದರೆ ಅಥವಾ ಯಾವುದೇ ಸ್ಮಾರ್ಟ್‌ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ 42,000ರೂ.ವರೆಗೆ ರಿಯಾಯಿತಿ ಪಡೆಯಬಹುದು. ಈ ಮೂಲಕ ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ ಐಫೋನ್ 14 ಪ್ಲಸ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 20,400ರೂ.ಗಳಿಗೆ ಖರೀದಿ ಮಾಡಬಹುದು.

ಇನ್ನು ಆಪಲ್ ಐಫೋನ್ 14 ಪ್ಲಸ್ ಕಳೆದ ವರ್ಷ ಐಫೋನ್ ಸರಣಿಯಲ್ಲಿ ಮಿನಿ ಮಾಡೆಲ್‌ನ ಬದಲಿಯಾಗಿ ಪದಾರ್ಪಣೆ ಮಾಡಿದ ಹಿನ್ನೆಲೆ ಖರೀದಿದಾರರಿಂದ ಈ ಫೋನ್ ಬದಿಗೆ ಸರಿದಿತ್ತು. ಅದಾಗ್ಯೂ ಈ ಫೋನ್ ವಿಶೇಷ ಫೀಚರ್ಸ್ ಆಯ್ಕೆ ಪಡೆದೆಕೊಂಡಿದೆ. ಅಂದರೆ ದೊಡ್ಡ ಡಿಸ್ಪ್ಲೇ ಮತ್ತು ಉತ್ತಮ ಬ್ಯಾಟರಿ ಆಯ್ಕೆ ಈ ಫೋನ್‌ನಲ್ಲಿ ಇದೆ. ಇದಾದ ಬಳಿಕ ಆಪಲ್ ಐಫೋನ್ 15 ಪ್ಲಸ್ ಅನ್ನು ಲಾಂಚ್ ಮಾಡಿದ ಹಿನ್ನೆಲೆ ಕಂಪನಿಯು ಫೋನ್‌ನ ಬೆಲೆಯನ್ನು 10,000 ರೂ.ರಷ್ಟು ಕಡಿತಗೊಳಿಸಿ ಸದ್ದು ಮಾಡಿತ್ತು.


Click it and Unblock the Notifications








