Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯ: ಮೊಬೈಲ್‌ ಆಫ್‌ಲೈನ್‌ನಲ್ಲಿದ್ದರೂ ಈ ಕೆಲಸ ಸಾಧ್ಯ!

ವಾಟ್ಸಾಪ್‌ ಬಳಕೆದಾರರು ಈಗಾಗಲೇ ತಮ್ಮ ಆಪ್‌ನಲ್ಲಿ ಹಲವಾರು ರೀತಿಯ ಫೀಚರ್ಸ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಹೊಸ ಅನುಭವ ಪಡೆಯುತ್ತಿದ್ದು, ಇದೀಗ ಮತ್ತೊಂದು ಸೌಲಭ್ಯವನ್ನು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಕಲ್ಪಿಸಿಕೊಟ್ಟಿದೆ. ಈ ಸೌಲಭ್ಯ ಪಡೆದುಕೊಳ್ಳಲು ನಿಮ್ಮ ಮೊಬೈಲ್‌ ಆಫ್‌ಲೈನಲ್ಲಿದ್ದರೂ ಸಮಸ್ಯೆ ಇರುವುದಿಲ್ಲ.

ಹೌದು, ವಾಟ್ಸಾಪ್‌ನಲ್ಲಿ ಈಗಾಗಲೇ ಸಾಕಷ್ಟು ಫೀಚರ್ಸ್‌ಗಳನ್ನು ನೀಡಲಾಗಿದ್ದು, ಇದೀಗ ವಾಟ್ಸಾಪ್‌ ವೆಬ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಉಂಟಾಗಲಿದೆ. ಯಾಕೆಂದರೆ, ಮೆಸೇಜಿಂಗ್ ಆಪ್‌ ಅನ್ನು ಅನ್ನು ನಾಲ್ಕು ಡಿವೈಸ್‌ಗಳೊಂದಿಗೆ ಲಿಂಕ್ ಮಾಡಬಹುದಾಗಿದೆ. ಹಾಗಿದ್ರೆ ಇದನ್ನು ಹೇಗೆ ಬಳಕೆ ಮಾಡುವುದು?, ಇದರಿಂದ ಲಾಭ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯ: ಮೊಬೈಲ್‌ ಆಫ್‌ಲೈನ್‌ನಲ್ಲಿದ್ದರೂ ಈ ಕೆಲಸ ಸಾಧ್ಯ!

ನಿಮ್ಮ ವಾಟ್ಸಾಪ್‌ ಖಾತೆಯನ್ನು ಲಿಂಕ್ ಮಾಡುವ ಪ್ರಕ್ರಿಯೆ ಸುಲಭಗೊಳಿಸುವ ಭಾಗವಾಗಿ ಇದೀಗ ವಾಟ್ಸಾಪ್‌ ಹೊಸ ಆಪ್‌ ಬಗ್ಗೆ ಘೋಷಣೆ ಮಾಡಿದ್ದು, ಈ ಮೂಲಕ ಫೋನ್ ಆಫ್‌ಲೈನ್‌ ನಲ್ಲಿ ಇದ್ದರೂ ಸಹ ಬಳಕೆದಾರರು ನಾಲ್ಕು ಡಿವೈಸ್‌ಗಳೊಂದಿಗೆ ಲಿಂಕ್‌ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ, ಮೊಬೈಲ್‌ ಆಫ್‌ಲೈನ್‌ನಲ್ಲಿ ಇದ್ದರೂ ಸಹ ಚಾಟ್‌ಗಳು ಸಿಂಕ್ ಆಗುತ್ತವೆ ಎಂದು ವಾಟ್ಸಾಪ್‌ ತಿಳಿಸಿದೆ.

ವಾಟ್ಸಾಪ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಡಿವೈಸ್‌ಗಳನ್ನು ಲಿಂಕ್ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸಲು ನಾವು ವಿಂಡೋಸ್‌ಗಾಗಿ ಸಂಪೂರ್ಣವಾಗಿ ಹೊಸ ಆಪ್‌ ಅನ್ನು ರಚಿಸಿದ್ದೇವೆ. ಇದು ವೇಗವಾದ ಲೋಡಿಂಗ್ ಮತ್ತು ಪರಿಚಿತ ಇಂಟರ್ಫೇಸ್‌ನೊಂದಿಗೆ ಕೆಲಸ ಮಾಡುತ್ತದೆ. ಹಾಗೆಯೇ ಚಾಟ್ ಮಾಡುವುದು ತಡೆರಹಿತವಾಗಿರುತ್ತದೆ ಎಂದು ಉಲ್ಲೇಖಿಸಿದೆ.

ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯ: ಮೊಬೈಲ್‌ ಆಫ್‌ಲೈನ್‌ನಲ್ಲಿದ್ದರೂ ಈ ಕೆಲಸ ಸಾಧ್ಯ!

ಇದರೊಂದಿಗೆ ವಾಟ್ಸಾಪ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಲಿಂಕ್ ಒಂದನ್ನು ಉಲ್ಲೇಖ ಮಾಡಿದ್ದು, ಇದಕ್ಕಾಗಿ ನೀವು https://whatsapp.com/download ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರ ಹೊರತಾಗಿಯೂ ವಾಟ್ಸಾಪ್‌ ಕರೆ ವಿಭಾಗದಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದ್ದು, ಅದರ ಬಗ್ಗೆಯೂ ತಿಳಿದುಕೊಳ್ಳಿ.

8 ಜನರೊಂದಿಗೆ ಗ್ರೂಪ್‌ ವಿಡಿಯೋ ಕರೆ: ವಿಂಡೋಸ್‌ ಬಳಕೆದಾರರಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈ ಮೂಲಕ 8 ಜನರೊಂದಿಗೆ ಗ್ರೂಪ್‌ ವಿಡಿಯೋ ಕರೆ ಹಾಗೂ 32 ಜನರೊಂದಿಗೆ ಆಡಿಯೊ ಕರೆಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ವಾಟ್ಸಾಪ್‌ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದೆ. ಹಾಗೆಯೇ ನೀವು 8 ಜನರೊಂದಿಗೆ ಎಂಡ್‌ ಟು ಎಂಡ್ ಎನ್‌ಕ್ರಿಪ್ಟ್ ಮಾಡಿದ ವಿಡಿಯೋ ಕರೆಗಳನ್ನು ಮತ್ತು 32 ಜನರೊಂದಿಗೆ ಆಡಿಯೊ ಕರೆಗಳನ್ನು ಮಾಡಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.

ಇನ್ನು ವಾಟ್ಸಾಪ್‌ ಅನ್ನು ‌ಆರಂಭದಲ್ಲಿ ಮೊಬೈಲ್‌ ಬಳಕೆಗಾಗಿ ಆರಂಭಿಸಲಾಗಿದೆಯಾದರೂ ಇದೀಗ ಅದನ್ನು ಇತರೆ ಡಿವೈಸ್‌ನಲ್ಲೂ ಬಳಕೆ ಮಾಡಲು ಜನ ಕಾತುರರಾಗಿದ್ದಾರೆ. ಜೊತೆಗೆ ಇದರಿಂದ ಹಲವಾರು ಅನುಕೂಲ ಸಹ ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ವಾಟ್ಸಾಪ್‌ ವಿಂಡೋಸ್‌ ಬಳಕೆದಾರರಿಗೂ ಸಹ ಹಲವಾರು ಫೀಚರ್ಸ್‌ಗಳನ್ನು ಕಾಲಕಾಲಕ್ಕೆ ಪರಿಚಯಿಸುತ್ತಾ ಬರುತ್ತಿದೆ.

ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯ: ಮೊಬೈಲ್‌ ಆಫ್‌ಲೈನ್‌ನಲ್ಲಿದ್ದರೂ ಈ ಕೆಲಸ ಸಾಧ್ಯ!

ಗ್ರೂಪ್‌ನಲ್ಲಿ ಹೊಸ ಸೌಲಭ್ಯ: ಇದರೊಂದಿಗೆ ಕೆಲವು ದಿನಗಳ ಹಿಂದಷ್ಟೇ ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ಹೊಸ ಸೌಲಭ್ಯ ಕಲ್ಪಿಸಲಾಗಿದ್ದು, ಯಾವುದೇ ಸದಸ್ಯರು ಲಿಂಕ್‌ ಮೂಲಕ ಗ್ರೂಪ್‌ಗೆ ಎಂಟ್ರಿಯಾಗಲು ಮುಂದಾದರೆ ಅವರನ್ನು ಆ ಗ್ರೂಪ್‌ಗೆ ಸೇರಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಮಾಡಬಹುದಾಗಿದೆ. ಈ ಮೂಲಕ ಅನವಶ್ಯಕ ಸದಸ್ಯರಿಂದ ಅಂತರ ಕಾಪಾಡಿಕೊಂಡು ಕ್ರಿಯೇಟ್‌ ಮಾಡಿದ ಗ್ರೂಪ್‌ ಅನ್ನು ಯಾವುದೇ ಸಮಸ್ಯೆ ಇಲ್ಲದೆ ನಡೆಸಿಕೊಂಡು ಹೋಗಬಹುದಾಗಿದೆ.

ಹಾಗೆಯೇ ಮುಂದಿನ ದಿನಗಳಲ್ಲಿ ಗ್ರೂಪ್‌ನಲ್ಲಿ ಸಂಪರ್ಕದ ಹೆಸರನ್ನು ಪತ್ತೆ ಮಾಡುವ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಸಿದ್ಧವಾಗಿದೆ. ಯಾಕೆಂದರೆ ಕೆಲವು ವಾಟ್ಸಾಪ್‌ ಬಳಕೆದಾರರು ಸಾಮಾನ್ಯವಾಗಿ ಹಲವಾರು ಗ್ರೂಪ್‌ ಗಳನ್ನು ಹೊಂದಿರಲಿದ್ದು, ಇದರಲ್ಲಿ ಯಾರು ಯಾವೆಲ್ಲಾ ಗ್ರೂಪ್‌ನಲ್ಲಿದ್ದಾರೆ ಎಂದು ತಿಳಿದುಕೊಳ್ಳುವುದು ಕಷ್ಟ. ಅದರಲ್ಲೂ ನೀವು ಹಾಗೂ ನಿಮಗೆ ಗೊತ್ತಿರುವವರು ಒಂದೇ ಗ್ರೂಪ್‌ನಲ್ಲಿ ಇದ್ದರೂ ಸಹ ಇದು ತಿಳಿಯುವುದಿಲ್ಲ. ಆದರೆ ಮುಂಬರುವ ಹೊಸ ಫೀಚರ್ಸ್‌ನಲ್ಲಿ ಇದು ಸಾಧ್ಯವಾಗಲಿದೆ.

Best Mobiles in India

English summary
WhatsApp has announced new features for web users. It is allowed to link up to four devices even mobile is offline.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+