ಗೂಗಲ್ ಸರ್ಚ್‌ನಲ್ಲಿ Holi ಎಂದು ಸರ್ಚ್ ಮಾಡಿ!..ಹೋಳಿ ಆಚರಿಸಿ!
ಬಣ್ಣಗಳ ಹಬ್ಬವೆಂದೆ ಕರೆಸಿಕೊಳ್ಳುವ 'ಹೋಳಿ ಹಬ್ಬ' ಮತ್ತೆ ಬಂದಿದೆ. ವಿವಿಧೆಡೆ ಹೋಳಿ ಹಬ್ಬವನ್ನು ಸಾಕಷ್ಟು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿಯ ಬಣ್ಣದ ಹಬ್ಬವನ್ನು ಗೂಗಲ್‌ನೊಂದಿಗೆ ಆಚರಣೆ ಮಾಡಿ ಎಂದು ಗೂಗಲ್ ಹೇಳಿದೆ. ಅರೇ ಅದ್ಹೆಂಗೆ ಗೂಗಲ್‌ನಲ್ಲಿ ಬಣ್ಣಗಳ ಆಟವಾಡುವುದು ಅಂತೀರಾ?..ವಿಶೇಷ ದಿನಗಳಂದು ಗೂಗಲ್ ಏನಾದರೂ ಸರ್‌ಪ್ರೈಸ್ ಪರಿಚಯಿಸುತ್ತಾ ಸಾಗಿ ಬಂದಿದೆ. ಅದೇ ರೀತಿ ಈ ಹೋಳಿ ಹಬ್ಬಕ್ಕೆ ಸರ್ಚ್‌ನಲ್ಲಿ ಬಣ್ಣಗಳ ಆಟಕ್ಕೆ ವ್ಯವಸ್ಥೆ ಮಾಡಿದೆ.

ಹೌದು, ಟೆಕ್ ದೈತ್ಯ ಗೂಗಲ್ ಬಣ್ಣಗಳ ಹಬ್ಬಕ್ಕೆ ವಿಶೇಷ ವೇದಿಕೆ ಒದಗಿಸಿದೆ. ಬಳಕೆದಾರರು ಗೂಗಲ್‌ನಲ್ಲಿ HOLI ಎಂದು ಸರ್ಚ್ ಮಾಡಿದರೇ ಫಲಿತಾಂಶದಲ್ಲಿ ಭಿನ್ನ ಭಿನ್ನ ಬಣ್ಣಗಳ ದರ್ಶನವಾಗುತ್ತದೆ. ಫಲಿತಾಂಶದಲ್ಲಿ ಬಣ್ಣಗಳು ಎರಚಿದಂತೆ ಕಾಣುತ್ತದೆ. ಗೂಗಲ್‌ನಲ್ಲಿ ಹೋಳಿ ಹಬ್ಬದ ಈ ವಿಶೇಷ ಫಲಿತಾಂಶವು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟ್ಯಾಪ್ ಡಿವೈಸ್‌ಗಳಲ್ಲಿಯೂ ಕಂಡುಬರುತ್ತದೆ.

HOLI ಸರ್ಚ್
ಹೋಳಿ ಹಬ್ಬದ ಪ್ರಯುಕ್ತ ಬಹುತೇಕ ಬಳಕೆದಾರರು ಹೋಳಿ ಎಂದು ಸರ್ಚ್ ಮಾಡುತ್ತಾರೆ. ಈ ನಿಟ್ಟಿನಲ್ಲಿ ಗೂಗಲ್ ಹೋಳಿ ಹಬ್ಬಕ್ಕೆ ವಿಶೇಷ ಟ್ರಿಕ್ಸ್ ಮಾಡಿದೆ. ಬಳಕೆದಾರರು ಹೋಳಿ /HOLI ಎಂದು ಸರ್ಚ್ ಮಾಡಿದರೇ ಬಣ್ಣಗಳ ಎರಚಾಟ ಕಾಣಬಹುದು ಎಂದು ಹೇಳಿದೆ.

ಈ ಟ್ರಿಕ್ಸ್ ಬಳಕೆ ಮಾಡುವುದು ಹೇಗೆ
* ಸ್ಮಾರ್ಟ್‌ಫೋನ್/ಲ್ಯಾಪ್‌ಟ್ಯಾಪ್‌ನಲ್ಲಿ ಗೂಗಲ್ ಸರ್ಚ್ ಆಪ್ ತೆರೆಯಿರಿ
* Holi ಎಂದು ಸರ್ಚ್ ಮಾಡಿರಿ.
* ಕಾಣುವ ಬಣ್ಣದ ಪುಡಿ ಬೌಲ್ ಟ್ಯಾಪ್ ಮಾಡಿರಿ.
* ಸ್ಕ್ರೀನ್‌ನಲ್ಲಿನ ಬಣ್ಣಗಳ ಬೌಲ್ ಟ್ಯಾಪ್ ಮಾಡಿರಿ.
* #HappyHoli ಟ್ಯಾಗ್‌ನೊಂದಿಗೆ ಶೇರ್ ಮಾಡಬಹುದು.

ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲಿ ಲಭ್ಯ
ಗೂಗಲ್ ತನ್ನ ಸರ್ಚ್‌ನಲ್ಲಿ ಆಯ್ಕೆಯಲ್ಲಿ Holi ಎಂದು ಸರ್ಚ್ ಮಾಡಿ ಕಲರ್ ಕಲರ್ ಬಣ್ಣಗಳೊಡನೆ ಹೋಳಿ ಆಚರಿಸುವ ಟ್ರಿಕ್ಸ್ ಪರಿಚಯಿಸಿದೆ. ಈ ಟ್ರಿಕ್ಸ್ ಆಂಡ್ರಾಯ್ಡ್ ಮತ್ತು ಐಫೋನ್ ಓಎಸ್ ಮಾದರಿಯ ಎರಡು ಡಿವೈಸ್‌ಗಳಲ್ಲಿಯೂ ಕೆಲಸ ಮಾಡಲಿದೆ.


Click it and Unblock the Notifications








