Home
ಸುದ್ದಿಜಾಲ

PhonePe ನಲ್ಲಿ ಹೊಸ ಫೀಚರ್ಸ್‌: ಇನ್ಮುಂದೆ ಇಲ್ಲೇ ಆದಾಯ ತೆರಿಗೆ ಪಾವತಿ ಮಾಡಬಹುದು!, ಹೇಗೆ?

ಫೋನ್‌ಪೇ ಬಳಕೆ ಈಗ ಅಗಾಧವಾಗಿದೆ. ಬಹುಪಾಲು ಮಂದಿ ಈ ಆಪ್‌ ಬಳಕೆ ಮಾಡಿಕೊಂಡು ತಮ್ಮ ಡಿಜಿಟಲ್ ಆರ್ಥಿಕ ವ್ಯವಹಾರ ನಡೆಸುತ್ತಾರೆ. ಅದರಂತೆ ಕೆಲವು ದಿನಗಳ ಹಿಂದೆ ವೈದ್ಯಕೀಯ ವಿಮಾ ಯೋಜನೆಗಳನ್ನು ಒದಗಿಸಿದೆ. ಜನರಿಗೆ ಈ ಖುಷಿಯೊಂದಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ್ದು, ಈ ಮೂಲಕ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ.

ಹೌದು, ಫೋನ್‌ಪೇ (PhonePe) ಇದೀಗ ಆದಾಯ ತೆರಿಗೆ ಪಾವತಿ ಫೀಚರ್ಸ್‌ ಪ್ರಾರಂಭಿಸಿದೆ. ಈ ಮೂಲಕ ಬಳಕೆದಾರರು ಸುಲಭವಾಗಿ ಯಾವುದೇ ಸಮಸ್ಯೆಗಳಿಲ್ಲದೆ ಆದಾಯ ಇಲಾಖೆಗೆ ಹಣ ಪಾವತಿ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ಆದಾಯ ತೆರಿಗೆ ಪಾವತಿ ಫೀಚರ್ಸ್?, ಇದು ಹೇಗೆ ಕೆಲಸ ಮಾಡುತ್ತದೆ?, ಇದರಿಂದ ಬಳಕೆದಾರರಿಗೆ ಹೇಗೆಲ್ಲಾ ಲಾಭ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

PhonePe ನಲ್ಲಿ ಹೊಸ ಫೀಚರ್ಸ್‌: ಇನ್ಮುಂದೆ ಇಲ್ಲೇ ಆದಾಯ ತೆರಿಗೆ ಪಾವತಿ ಮಾಡಬಹುದು!

ಫೋನ್‌ಪೇನಲ್ಲಿ ಆದಾಯ ತೆರಿಗೆ ಪಾವತಿ ಫೀಚರ್ಸ್‌: ಫೋನ್‌ಪೇ ನಲ್ಲಿ ಇದೀಗ ಆದಾಯ ತೆರಿಗೆ ಪಾವತಿ ಫೀಚರ್ಸ್‌ ಲಭ್ಯ ಇದ್ದು, ಈ ಫೀಚರ್ಸ್‌ ಮೂಲಕ ತೆರಿಗೆದಾರರು ಫೋನ್‌ ಪೇ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತೆರಿಗೆ ಪಾವತಿಸಲು ಅನುಮತಿಸುವ ಗುರಿಯನ್ನು ಹೊಂದಲಾಗಿದೆ. ಈ ಫೀಚರ್ಸ್‌ ಸಕ್ರಿಯಗೊಳಿಸಲು ಡಿಜಿಟಲ್ ಪಾವತಿ ಸೇವೆಗಳ ಕಂಪನಿಯು ಡಿಜಿಟಲ್ B2B ಪಾವತಿಗಳು ಮತ್ತು ಸೇವಾ ಪೂರೈಕೆದಾರರಾದ ಪೇ ಮೇಟ್‌(PayMate) ನೊಂದಿಗೆ ಪಾಲುದಾರಿಕೆ ಹೊಂದಿದೆ.

ಇನ್ನು ಫೋನ್‌ ಪೇ ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಆಪ್‌ನಲ್ಲಿ ಯುಪಿಐ ಆಯ್ಕೆಯನ್ನು ಬಳಸಿಕೊಂಡು ತಮ್ಮ ತೆರಿಗೆಗಳನ್ನು ಪಾವತಿಸಬಹುದಾಗಿದೆ. ಕ್ರೆಡಿಟ್ ಕಾರ್ಡ್ ಪಾವತಿಗಳೊಂದಿಗೆ ಬಳಕೆದಾರರು 45 ದಿನಗಳ ಬಡ್ಡಿ ಮುಕ್ತ ಅವಧಿಯನ್ನು ಪಡೆಯುತ್ತಾರೆ ಹಾಗೂ ಅವರ ಬ್ಯಾಂಕ್ ಅನ್ನು ಅವಲಂಬಿಸಿ ತಮ್ಮ ತೆರಿಗೆ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್‌ ಅನ್ನು ಸಹ ಪಡೆದುಕೊಳ್ಳಬಹುದು.

ಇನ್ನು ಒಮ್ಮೆ ಪಾವತಿಯನ್ನು ಮಾಡಿದ ನಂತರ ತೆರಿಗೆದಾರರು ಒಂದು ಕೆಲಸದ ದಿನದೊಳಗೆ ವಿಶಿಷ್ಟ ವಹಿವಾಟು ಉಲ್ಲೇಖ (UTR) ಸಂಖ್ಯೆಯನ್ನು ಸ್ವೀಕೃತಿಯಾಗಿ ಸ್ವೀಕಾರ ಮಾಡುತ್ತಾರೆ. ಹಾಗೆಯೇ ಈ ತೆರಿಗೆ ಪಾವತಿಯ ಚಲನ್ ಎರಡು ಕೆಲಸದ ದಿನಗಳಲ್ಲಿ ಲಭ್ಯವಿರುತ್ತದೆ. ಹಾಗಿದ್ರೆ, ಈ ಆದಾಯ ತೆರಿಗೆ ಪಾವತಿ ಫೀಚರ್ಸ್‌ ಅನ್ನು ಬಳಕೆ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಹಂತ 1 : ಮೊದಲು ನಿಮ್ಮ ಫೋನ್‌ಪೇ ಆಪ್‌ ಓಪನ್‌ ಮಾಡಿ ಬಳಿ, ಅಲ್ಲಿಯೇ ಅಂದರೆ ಮೇನ್‌ ಪೇಜ್‌ನಲ್ಲಿಯೇ 'ಆದಾಯ ತೆರಿಗೆ' (Income tax) ಎಂಬ ಆಯ್ಕೆಯ ಐಕಾನ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ನಂತರದಲ್ಲಿ ನೀವು ಪಾವತಿಸಲು ಬಯಸುವ ತೆರಿಗೆಯ ಪ್ರಕಾರವನ್ನು ಆಯ್ಕೆಮಾಡಿ. ಜೊತೆಗೆ ಮೌಲ್ಯಮಾಪನ ವರ್ಷವನ್ನು ಇಲ್ಲಿ ಎಂಟ್ರಿ ಮಾಡಬೇಕಿದೆ.

ಹಂತ 2 : ಇದಾದ ಬಳಿಕ ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಎಂಟ್ರಿ ಮಾಡಬೇಕಿದೆ. ಇದರೊಂದಿಗೆ ತೆರಿಗೆ ಚಲನ್ ಮೊತ್ತವನ್ನು ನಮೂದಿಸಿ. ಈ ವೇಳೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಆಯ್ಕೆ ಮಾಡಿಕೊಳ್ಳಬಹುದು. ಪಾವತಿಯ ನಂತರ ಮೊತ್ತವನ್ನು ಎರಡು ಕೆಲಸದ ದಿನಗಳಲ್ಲಿ ತೆರಿಗೆ ಪೋರ್ಟಲ್‌ಗೆ ಕ್ರೆಡಿಟ್ ಮಾಡಲಾಗುತ್ತದೆ.

PhonePe ನಲ್ಲಿ ಹೊಸ ಫೀಚರ್ಸ್‌: ಇನ್ಮುಂದೆ ಇಲ್ಲೇ ಆದಾಯ ತೆರಿಗೆ ಪಾವತಿ ಮಾಡಬಹುದು!

ಆದಾಯ ತೆರಿಗೆ ಸಲ್ಲಿಸಲು ಕೊನೆಯ ಯಾವಾಗ?: ಆದಾಯ ತೆರಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಯಶಸ್ವಿ ಪಾವತಿಯ ನಂತರ ತೆರಿಗೆದಾರರು ರಚಿಸಿದ ಚಲನ್ ಗುರುತಿನ ಸಂಖ್ಯೆ (CIN) ಮತ್ತು ಚಲನ್ ರಶೀದಿಯ ರೂಪದಲ್ಲಿ ಇತರ ಮಾಹಿತಿಗೆ ಪ್ರವೇಶವನ್ನು ಹೊಂದಿರುತ್ತಾರೆ. ಅದೇ ಸಮಯದಲ್ಲಿ, ಸಿಆರ್‌ಎನ್‌ ನ ಸ್ಟೇಟಸ್ ಅನ್ನು ಪೇಮೆಂಟ್‌ ಹಿಸ್ಟರಿ ಟ್ಯಾಬ್ ಅಡಿಯಲ್ಲಿ PAID ಎಂದು ನವೀಕರಿಸಲಾಗುತ್ತದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಇ-ಪೇ ಟ್ಯಾಕ್ಸ್ ಸೇವೆಯ ಮೂಲಕ ಆನ್‌ಲೈನ್ ಪಾವತಿ 24/7 ಲಭ್ಯವಿದೆ.

Best Mobiles in India

English summary
PhonePe has now launched Income Tax payment features. Through this the user can easily make payment to the revenue department without any problems.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+