ಸ್ಮಾರ್ಟ್‌ಫೋನ್ ನಿಮ್ಮ ಕಂಟ್ರೋಲ್‌ಗೆ ಸಿಗುತ್ತಿಲ್ಲವೇ? ಹಾಗಿದ್ರೆ ಟಚ್‌ಸ್ಕ್ರೀನ್ ಹ್ಯಾಕಿಂಗ್‌ಗೆ ಒಳಗಾಗಿರಬಹುದು!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅದರ ದುರಪಯೋಗ ಸಹ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಸರ್ಕಾರಗಳು ಹಾಗೂ ಸಂಸ್ಥೆಗಳು ತಂತ್ರಜ್ಞಾನ ದುರಪಯೋಗ ಮಾಡುವವರ ವಿರುದ್ಧ ಅದೆಷ್ಟೋ ಕಠಿಣ ಕ್ರಮ ತೆಗೆದುಕೊಂಡರೂ ಸಹ ಅವರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡು ಸಾಮಾನ್ಯರನ್ನು ವಂಚಿಸಿಕೊಂಡೇ ಬರುತ್ತಿದ್ದಾರೆ. ಈ ನಡುವೆ ಮೊಬೈಲ್ ಹ್ಯಾಕಿಂಗ್ ಮಾಡಲು ಸ್ಕ್ಯಾಮರ್‌ಗಳು ಹೊಸ ಮಾರ್ಗವನ್ನು ಹುಡುಕಿದ್ದಾರೆ.
ಹೌದು, ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ನಿಯಂತ್ರಣ ಮೀರಿ ವರ್ತಿಸುತ್ತಿದ್ದರೆ, ಇದ್ದಕ್ಕಿದ್ದಂತೆ ಫೋನ್ ಅನ್‌ಲಾಕ್ ಆಗುತ್ತಿದ್ದರೆ ಖಂಡಿತಾ ನಿಮ್ಮ ಫೋನ್ ಈ ಹೊಸ ಹ್ಯಾಕಿಂಗ್ ತಂತ್ರಜ್ಞಾನಕ್ಕೆ ಒಳಗಾಗಿದೆ ಎಂದರ್ಥ. ಈ ಮೂಲಕ ಸ್ಕ್ಯಾಮರ್‌ಗಳು ನಿಮ್ಮ ಖಾಸಗಿ ಡೇಟಾವನ್ನು ಕದಿಯುವುದರ ಜೊತೆಗೆ ಬ್ಯಾಂಕ್ ಮಾಹಿತಿಯನ್ನೂ ಸಹ ಕದಿಯಲು ಮುಂದಾಗಿದ್ದಾರೆ. ಹಾಗಿದ್ರೆ, ಏನಿದು ಹೊಸ ಟಚ್‌ಸ್ಕ್ರೀನ್ ಹ್ಯಾಕಿಂಗ್?, ಇದನ್ನು ಹೇಗೆ ಮಾಡಲಾಗುತ್ತಿದೆ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಟಚ್‌ಸ್ಕ್ರೀನ್ ಹ್ಯಾಕಿಂಗ್: ಸೈಬರ್ ಕ್ರಿಮಿನಲ್‌ಗಳು ಯಾವಾಗಲೂ ತಮ್ಮ ಕಳ್ಳ ಬುದ್ದಿ ತೋರಿಸಲು ಹೊಸ ಮಾರ್ಗಗಳೊಂದಿಗೆ ಹೊರಬರುತ್ತಲೇ ಇರುತ್ತಾರೆ. ಈ ಮೂಲಕ ಮಾಲ್‌ವೇರ್ ,ಫಿಶಿಂಗ್ ಹಗರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಚೀನಾದ ಝೆಜಿಯಾಂಗ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಟೆಕ್ನಿಕಲ್ ಯೂನಿವರ್ಸಿಟಿ ಡಾರ್ಮ್‌ಸ್ಟಾಡ್‌ನ ಸಂಶೋಧಕರು ಈಗ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳಲು ಹಾರ್ಡ್‌ವೇರ್ ಆಧಾರಿತ ಹೊಸ ವಿಧಾನವನ್ನು ಪತ್ತೆ ಮಾಡಿದ್ದಾರೆ.
ಈ ಪ್ರಕ್ರಿಯೆ ಹೇಗೆ ನಡೆಯಲಿದೆ?: ಈ ಸ್ಮಾರ್ಟ್‌ಫೋನ್‌ಗಳನ್ನು ಅನ್‌ಲಾಕ್ ಮಾಡಲು ಸ್ವ್ಯಾಪಿಂಗ್ ಮತ್ತು ಟ್ಯಾಪಿಂಗ್‌ನಂತಹ ಸನ್ನೆಗಳನ್ನು ಅನುಕರಿಸಲು ಸ್ಕ್ಯಾಮರ್‌ಗಳು ವಿದ್ಯುತ್ಕಾಂತೀಯ ಸಂಕೇತಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ನಾರ್ಡ್‌ವಿಪಿಎನ್ ವಿವರಿಸಿದೆ. ಈ ವಿಧಾನವನ್ನು ಘೋಸ್ಟ್ ಟಚ್ (GhostTouch) ಎಂದು ಕರೆಯಲಾಗುತ್ತದೆ. ಈ ಮೂಲಕ ಹ್ಯಾಕರ್‌ಗಳು ಫೋನ್ ಅನ್ನು ಅನ್‌ಲಾಕ್ ಮಾಡಲು ಮತ್ತು ಪಾಸ್‌ವರ್ಡ್‌ಗಳು ಮತ್ತು ಬ್ಯಾಂಕಿಂಗ್ ಆಪ್‌ನಂತಹ ಸೂಕ್ಷ್ಮ ಡೇಟಾ ವಿಭಾಗಕ್ಕೆ ಪ್ರವೇಶಿಸಲಿದ್ದಾರೆ.

ಈ ರೀತಿ ವಂಚನೆಯನ್ನು ಮಾಡುವವರು ನಮ್ಮ ಹತ್ತಿರದಲ್ಲೇ ಇರುತ್ತಾರಂತೆ. ಅಂದರೆ ಈ ವಿಧಾನವನ್ನು ಕಾರ್ಯಗತಗೊಳಿಸಲು ಆಕ್ರಮಣಕಾರನು ಬಳಕೆದಾರರ ಸಮೀಪದಲ್ಲೇ ಇದ್ದು, ಅವರ ಚಲನವಲನವನ್ನು ಗಮನಿಸುತ್ತಾರೆ. ಈ ಮೂಲಕ ವಿದ್ಯುತ್ಕಾಂತೀಯ ಸಂಕೇತಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಅವರು ತಮ್ಮ ಉಪಕರಣಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಕಾಣದ ಹಾಗೆ ಇರಿಸುತ್ತಾರೆ. ಅದರಲ್ಲೂ ಫೋನ್ ನಿಖರವಾಗಿ 40ಎಂಎಂ ವ್ಯಾಪ್ತಿಯಲ್ಲಿರಬೇಕಂತೆ. ಇದಾದ ಬಳಿಕ ಬಳಕೆದಾರರು ಆ ಸ್ಥಳವನ್ನು ತೊರೆದರೂ ಸಹ ಸ್ಕ್ಯಾಮರ್‌ಗಳು ಅವರ ಫೋನ್‌ಅನ್ನು ಹ್ಯಾಕ್‌ಮಾಡಲು ಸಮರ್ಥರಾಗಿದ್ದಾರಂತೆ.
ಎಲ್ಲೆಲ್ಲಿ ಈ ಘಟನೆ ಎಲೆಲ್ಲಿ ಜರುಗುತ್ತದೆ?: ಈ ಟಚ್‌ಸ್ಕ್ರೀನ್ ಹ್ಯಾಕಿಂಗ್ ಉದ್ದೇಶಕ್ಕಾಗಿ ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಗ್ರಂಥಾಲಯಗಳು, ಕೆಫೆಗಳು ಅಥವಾ ಕಾನ್ಫರೆನ್ಸ್ ಲಾಬಿಗಳಂತಹ ಸಾರ್ವಜನಿಕ ಸ್ಥಳವನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಮೇಜಿನ ಮೇಲೆ ಮುಖಾಮುಖಿಯಾಗಿ ಇರಿಸುತ್ತಾರೆ. ದಾಳಿಕೋರರು ಮುಂಚಿತವಾಗಿ ಮೇಜಿನ ಕೆಳಗೆ ಸಲಕರಣೆಗಳನ್ನು ಸಿದ್ಧಪಡಿಸುತ್ತಾರಂತೆ. ಈ ಮೂಲಕ ದೂರದಿಂದಲೇ ದಾಳಿಯನ್ನು ನಡೆಸುತ್ತಾರೆ ಎಂದು ತಿಳಿದುಬಂದಿದೆ.
ಯಾವೆಲ್ಲಾ ಫೋನ್‌ಗಳು ಈ ದಾಳಿಗೆ ಒಳಗಾಗುತ್ತವೆ?: ಈ ದಾಳಿಗಳು ಎಲ್ಲಾ ಫೋನ್‌ನಲ್ಲಿ ನಡೆಯದಿದ್ದರೂ ಸಹ ಆಪಲ್ ಐಫೋನ್ ಎಸ್‌ಇ (2020), ಸ್ಯಾಮ್ಸಂಗ್ ಗ್ಯಾಲಕ್ಸಿ S20 FE 5G, ನೋಕಿಯಾ 7.2, ಮತ್ತು ರೆಡ್ಮಿ 8 ಸೇರಿದಂತೆ ಒಂಬತ್ತು ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ದಾಳಿಕೋರರು ಸುಲಭವಾಗಿ ಪ್ರವೇಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಈ ಫೋನ್‌ಗಳನ್ನು ಯಾರೆಲ್ಲಾ ಹೊಂದಿದ್ದೀರೋ ಅವರು ಹೆಚ್ಚು ಎಚ್ಚರಿಕೆ ವಹಿಸಿ.

ಇನ್ನು ಫೋನ್ ಅನ್‌ಲಾಕ್ ಇಟ್‌ಸೆಲ್ಫ್ ಎಂದು ಜನರು ಗೂಗಲ್‌ನಲ್ಲಿ ಸರ್ಚ್ ಸರ್ಚ್ ಮಾಡಿದ್ದು, ಈ ಸಂಬಂಧ 209 ಮಿಲಿಯನ್ ಫಲಿತಾಂಶಗಳನ್ನು ಗೂಗಲ್ ನೀಡುತ್ತಿದೆ. ಅಂದರೆ ಊಹೆ ಮಾಡಿಕೊಳ್ಳಿ ಎಷ್ಟು ಜನರು ಈ ಸಮಸ್ಯೆಗೆ ಒಳಗಾಗಿದ್ದಾರೆ ಎಂದು. ಅದಾಗ್ಯೂ ಫೋನ್ ಅನ್‌ಲಾಕ್ ಮಾಡುತ್ತಿರುವ ಪ್ರತಿಯೊಬ್ಬರೂ ಹ್ಯಾಕ್ ಆಗಿದ್ದಾರೆ ಎಂದೂ ಸಹ ಅರ್ಥ ಮಾಡಿಕೊಳ್ಳುವುದು ತಪ್ಪಾಗುತ್ತದೆ.
ನಿಮ್ಮ ಫೋನ್ ಸ್ಕ್ಯಾಮರ್‌ಗಳ ನಿಯಂತ್ರಣಕ್ಕೆ ಒಳಗಾಗಲು ಬಿಡಬಾರದು ಎಂದಾದರೆ ದೃಢೀಕರಣಕ್ಕಾಗಿ ಕೆಲವು ರೀತಿಯ ಭದ್ರತೆಯನ್ನು ಹೊಂದಿರುವುದು ಉತ್ತಮ ಮಾರ್ಗವಾಗಿದೆ. ಜೊತೆಗೆ ಆಗಾಗ್ಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಸೆಕ್ಯೂರಿಟಿ ಫೀಚರ್ಸ್ ಬಳಕೆ ಮಾಡಿಕೊಂಡು ಪಾಸ್‌ವರ್ಡ್ ಬದಲಾಯಿಸಿಕೊಳ್ಳಿ. ಹಾಗೆಯೇ ಕೇವಲ ಸಂಖ್ಯೆಗಳನ್ನು ಪಾಸ್‌ವರ್ಡ್ ಆಗಿ ಬಳಕೆ ಮಾಡದೆ ಚಿಹ್ನೆ ಹಾಗೂ ಅಕ್ಷರಗಳನ್ನು ಬಳಕೆ ಮಾಡಿಕೊಂಡು ಕ್ಲಿಷ್ಟಕರವಾದ ಪಾಸ್‌ವರ್ಡ್ ರಚಿಸಿಕೊಳ್ಳಿ.


Click it and Unblock the Notifications








