ರೈಲು ಪ್ರಯಾಣಿಕರೇ ಗಮನಿಸಿ: ತತ್ಕಾಲ್, ಜನರಲ್ ಟಿಕೆಟ್‌ನಲ್ಲಿ ಯಾವುದು ಮೊದಲು ಕನ್ಫರ್ಮ್ ಆಗಲಿದೆ!?
ಸುಲಭ ಪ್ರಯಾಣಕ್ಕೆ ಬಹುಪಾಲು ಮಂದಿ ಭಾರತೀಯ ರೈಲನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಕೆಲವು ದೂರ ಪ್ರದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗಲು ರೈಲು ಸಂಚಾರ ಅತ್ಯಂತ ಸರಳವಾದ ಮಾರ್ಗವಾಗಿದೆ. ಈ ನಡುವೆ ಬಹುಪಾಲು ಮಂದಿ ಜನರಲ್ ಟಿಕೆಟ್ ಬುಕ್ ಮಾಡಿದರೆ ಇನ್ನೂ ಕೆಲವರು ತ್ವರಿತ ಪ್ರಯಾಣದ ಉದ್ದೇಶದಿಂದ ತತ್ಕಾಲ್ ಟಿಕೆಟ್ ಬುಕ್ ಮಾಡುತ್ತಾರೆ.
ಹೌದು, ರೈಲಿನಲ್ಲಿ ಎಲ್ಲಾ ಸೀಟ್‌ಗಳು ಭರ್ತಿಯಾದ ನಂತರವೂ ಕನಿಷ್ಠ 200 ರಿಂದ 300ಪ್ರಯಾಣಿಕರಿಗೆ ರೈಲ್ವೇ ವೇಟಿಂಗ್ ಟಿಕೆಟ್ ನೀಡುತ್ತದೆ. ಈ ವೇಳೆ ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರು ಟಿಕೆಟ್ ಅನ್ನು ರದ್ದುಗೊಳಿಸಿದರೆ ಮಾತ್ರ ವೇಟಿಂಗ್ ಲಿಸ್ಟ್‌ನಲ್ಲಿ ಇರುವ ಪ್ರಯಾಣಿಕರಿಗೆ ಸೀಟ್ ಸಿಗುತ್ತದೆ. ಈ ನಡುವೆ ರೈಲು ಇಲಾಖೆ ಮೊದಲು ತತ್ಕಾಲ್ ಟಿಕೆಟ್ ಅನ್ನು ಕನ್ಫರ್ ಮಾಡುತ್ತದೋ ಅಥವಾ ಜನರಲ್ ಟಿಕೆಟ್ ಅನ್ನು ಕನ್ಫರ್ಮ್ ಮಾಡುತ್ತದೋ ತಿಳಿಯೋಣ ಬನ್ನಿ.

ಯಾರೇ ಆದರೂ ಸಹ ಒಂದು ಬಾರಿಯಾದರು ವೇಟಿಂಗ್ ಟಿಕೆಟ್ ಸಮಸ್ಯೆ ಎದುರಿಸಿಯೇ ಇರುತ್ತಾರೆ. ಪ್ರಯಾಣಕ್ಕೆ ಹಲವು ದಿನಗಳ ಮೊದಲು ಟಿಕೆಟ್ ಬುಕಿಂಗ್ ಮಾಡಿದರೂ ಸಹ ಈ ಸಮಸ್ಯೆ ಎದುರಾಗುತ್ತದೆ. ಇದರ ನಡುವೆ ಪ್ರಯಾಣದ ಒಂದು ದಿನ ಮೊದಲು ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಲು ಸಹ ಅನುವು ಮಾಡಿಕೊಡಲಾಗುತ್ತದೆ. ಜೊತೆಗೆ ಇದರಲ್ಲಿ ತತ್ಕಾಲ್ ವೇಟಿಂಗ್ ಎಂಬ ಆಯ್ಕೆಯೂ ಇದೆ.
ಇನ್ನು ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಜನರಲ್ ಟಿಕೆಟ್ ಆಯ್ಕೆಯನ್ನು ಸಾಮಾನ್ಯ ವೇಟಿಂಗ್ ಟಿಕೆಟ್‌ನಲ್ಲಿ ಆಯ್ಕೆಯಲ್ಲಿ ಇರಿಸಲಾಗುತ್ತದೆ. ಹಾಗೆಯೇ ತತ್ಕಾಲ್ ಅನ್ನು ತತ್ಕಾಲ್ ವೇಟಿಂಗ್ ಟಿಕೆಟ್ ವಿಭಾಗದಲ್ಲಿ ಇರಿಸಲಾಗುತ್ತದೆ. ಈ ವೇಳೆ ಜನರಲ್ ಮತ್ತು ತತ್ಕಾಲ್ ವೇಟಿಂಗ್ ಲಿಸ್ಟ್ ಟಿಕೆಟ್‌ಗಳಲ್ಲಿ ಯಾವುದು ಮೊದಲು ದೃಢೀಕರಿಸಲ್ಪಡುತ್ತದೆ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ನಿಮಗೆ ಗೊತ್ತಾ?.
ಈ ಟಿಕೆಟ್‌ಗಳಿಗೆ ಮೊದಲ ಪ್ರಾಶಸ್ತ್ಯ: ವೇಟಿಂಗ್ ಲಿಸ್ಟ್‌ನಲ್ಲಿ ಜನರಲ್ ಟಿಕೆಟ್‌ಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ನೀವು ಸಾಮಾನ್ಯ ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿದ್ದರೆ ಖಂಡಿತಾ ನಿಮ್ಮ ಟಿಕೆಟ್‌ಗಳು ಕನ್ಫರ್ಮ್ ಆಗಲಿದೆ. ಇದರಿಂದ ತಿಳಿದುಬರುವುದು ಏನೆಂದರೆ ತತ್ಕಾಲ್ ವೇಟಿಂಗ್ ಲಿಸ್ಟ್‌ನಲ್ಲಿ ಇರುವ ಪ್ರಯಾಣಿಕರಿಗೆ ಅಷ್ಟು ಸುಲಭದಲ್ಲಿ ಟಿಕೆಟ್ ಲಭ್ಯವಾಗುವುದಿಲ್ಲ. ಈ ಮೂಲಕ ಟಿಕೆಟ್ ಕನ್ಫರ್ಮ್ ಸಾಧ್ಯತೆ ತುಂಬಾ ಕಡಿಮೆ ಇರಲಿದೆ.

ಇದಕ್ಕೆ ಕಾರಣ ಏನು?: ತತ್ಕಾಲ್ ಟಿಕೆಟ್ ಎಂದರೆ ತುರ್ತು ಸಂದರ್ಭದಲ್ಲಿ ಪ್ರಯಾಣ ಮಾಡಲು ಇರುವ ಅವಕಾಶ. ಅದರಲ್ಲೂ ಈ ಟಿಕೆಟ್ ಬುಕ್ ಮಾಡಲು ಹೆಚ್ಚಿನ ಹಣ ಸಹ ಪಾವತಿ ಮಾಡಬೇಕು. ಅದಾಗ್ಯೂ ಟಿಕೆಟ್ ಕನ್ಫರ್ಮ್ ಆಗಲಿಲ್ಲ ಎಂದರೆ ಖಂಡಿತಾ ಪ್ರಯಾಣಿಕರಿಗೆ ಬೇಸರ ಆಗಲಿದೆ. ಈ ರೀತಿ ಆಗಲು ಕಾರಣ ಏನೆಂದರೆ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸಿದ ಎಲ್ಲರೂ ಸಹ ಪ್ರಯಾಣಿಸಿದರೆ ವೇಟಿಂಗ್ ಲಿಸ್ಟ್‌ನಲ್ಲಿ ಇರುವವರಿಗೆ ಟಿಕೆಟ್ ಸಿಗುವುದೇ ಇಲ್ಲ.
ವಿಷಯ ಏನೆಂದರೆ ತತ್ಕಾಲ್‌ನಲ್ಲಿ ಬುಕಿಂಗ್ ಮಾಡುವ ಪ್ರಯಾಣಿಕರು ಟಿಕೆಟ್‌ಗಳು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕೊನೆಯವರೆಗೂ ಕಾದು ನೋಡುವ ಯತ್ನ ಇದಾಗಿದೆ. ಅದಾಗ್ಯೂ ಟಿಕೆಟ್ ಕನ್ಫರ್ಮ್ ಆಗಲಿಲ್ಲ ಎಂದು ನೀವು ಬೇಸರ ಅಗಬೇಡಿ. ಯಾಕೆಂದರೆ ಚಾರ್ಟ್ ಸಿದ್ಧವಾಗುವವರೆಗೆ ನಿಮ್ಮ ಟಿಕೆಟ್ ದೃಢೀಕರಿಸದಿದ್ದರೆ ಆ ಟಿಕೆಟ್ ಆಟೋಮ್ಯಾಟಿಕ್ ಆಗಿ ರದ್ದುಗೊಳ್ಳಲಿದ್ದು, ನಿಮ್ಮ ಹಣ ನಿಮಗೆ ವಾಪಸ್ ಬರಲಿದೆ.

ಈ ನಡುವೆ ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ಮರು ಆರಂಭಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಹಿರಿಯ ನಾಗರಿಕರಿಗೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ.


Click it and Unblock the Notifications








