ಕಾರಿನಲ್ಲಿರುವ 'ಇಸಿಯು' ಅಪ್‌ಡೇಟ್ ಮಾಡದಿದ್ದರೆ ಕಷ್ಟಕಷ್ಟ!

|

ತಂತ್ರಜ್ಞಾನದ ಸಹಾಯದಿಂದಾಗಿ ಸಾಮಾನ್ಯ ಕಾರುಗಳೆಲ್ಲಾ ಈಗ ಸ್ಮಾರ್ಟ್‌ ಕಾರುಗಳಾಗಿ ಬದಲಾಗಿವೆ. ಕಾರಿನಲ್ಲಿ ಪೆಟ್ರೋಲ್ ಎಷ್ಟಿದೆ ಎಂಬ ಮಾಹಿತಿಯಿಂದ ಹಿಡಿದು, ಕಾರಿನ ಚಕ್ರಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಗಾಳಿ ಇದೆಯೇ ಎಂಬುದೆಲ್ಲವನ್ನು ಆಧುನಿಕ ಕಾರುಗಳಲ್ಲಿರುವ ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ (ಇಸಿಯು) ಎಂಬ ವ್ಯವಸ್ಥೆಯು ನಮಗೆ ತಿಳಿಸುತ್ತಿರುತ್ತದೆ.

ಕಾರಿನಲ್ಲಿರುವ 'ಇಸಿಯು' ಅಪ್‌ಡೇಟ್ ಮಾಡದಿದ್ದರೆ ಕಷ್ಟಕಷ್ಟ!

ಆಧುನಿಕ ಕಾರುಗಳಲ್ಲಿರುವ ಈ ಸೌಲಭ್ಯ ನಮಗೆ ಅತ್ಯಂತ ಉಪಯೋಗಕಾರಿ. ಆದರೆ, ನಾವು ಈ ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸಮಸ್ಯೆಯೇ ಹೆಚ್ಚು ಎನ್ನಬಹುದು. ಏಕೆಂದರೆ, ಕಾರಿನ ಎಂಜಿನ್‌ ಟ್ರಾನ್ಸ್‌ಮಿಷನ್‌ ಅನ್ನು ಸಂಪೂರ್ಣವಾಗಿ ನಿಯಂತ್ರಿಸುವ ಈ ಯುನಿಟ್ ನಿಮಗೆ ಕೆಲವೊಮ್ಮೆ ಸಮಸ್ಯೆ ತಂದೊಡ್ಡಬಹುದು.

ಉದಾಹರಣೆಗೆ, ಈ ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ ವ್ಯವಸ್ಥೆಕೆಟ್ಟರೆ ಎಂಜಿನ್‌ ಸ್ಟಾರ್ಟ್‌ ಆಗಲಾರದು. ಎಂಜಿನ್‌ ಮ್ಯಾನೇಜ್‌ಮೆಂಟ್ ಕಂಟ್ರೋಲ್ ವ್ಯವಸ್ಥೆ ಕೈಕೊಟ್ಟದ್ದರಿಂದ ಕಾರು ಸ್ಟಾರ್ಟ್‌ ಆಗುವುದಿಲ್ಲ. ಕೆಲವೊಮ್ಮೆ ಕಾರು ಚಾಲನೆಯ ಮಧ್ಯದಲ್ಲಿ ಸ್ಥಗಿತಗೊಳ್ಳುವುದು ಅಥವಾ ಎಂಜಿನ್‌ ಮಿಸ್‌ ಫೈರ್‌ ಆಗುವುದು ಸಮಸ್ಯೆಗಳು ಕೂಡ ಇದರಿಂದಲೇ ನಿಮಗೆ ಗೋಚರಿಸಬಹುದು.

ಕಾರಿನಲ್ಲಿರುವ 'ಇಸಿಯು' ಅಪ್‌ಡೇಟ್ ಮಾಡದಿದ್ದರೆ ಕಷ್ಟಕಷ್ಟ!

ಇನ್ನು ಎಂಜಿನ್‌ ಆಯಿಲ್ ಕಡಿಮೆ ಇದೆ ಎಂದು ನಿಮಗೆ ಕಾರಿನ ಮೀಟರ್‌ನಲ್ಲಿ ಲೈಟ್ ಗೋಚರಿಸಬಹುದು. ಆದರೆ ಎಂಜಿನ್‌ ಆಯಿಲ್ ಸರಿಯಾಗಿಯೇ ಇರಬಹುದು. ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ ಸರ್ಕ್ನೂಟ್‌ನಲ್ಲಿ ಕಾಣುವ ಸೆನ್ಸರ್ ಸಮಸ್ಯೆಯಿಂದಾಗಿ ಹೀಗೆ ಆಗುವ ಸಾಧ್ಯತೆ ಇದೆ. ಕೆಲವೊಮ್ಮೆ ಎಂಜಿನ್‌ ಪಿಕಪ್ ಏಕಾಏಕಿ ಕಡಿಮೆ ಆದಂತೆಯೂ ಸಹ ಗೋಚರಿಸಬಹುದಾಗಿದೆ.

ಹಾಗಾಗಿ, ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ (ಇಸಿಯು) ವ್ಯವಸ್ಥೆಯನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕಾದ್ದು ಅಗತ್ಯ. ಸಾಫ್ಟ್ವೇರ್ ಮೂಲಕ ಇವುಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ಒಂದು ವೇಳೆ ನೀವು ಇದನ್ನು ಅಪ್‌ಡೇಟ್ ಮಾಡದಿದ್ದರೆ, ಕಾರಿನ ಒಟ್ಟಾರೆ ಫ‌ರ್ಫಾಮೆನ್ಸ್‌ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.ಹಾಗಾಗಿ, ಇದರ ನಿರ್ವಹಣೆಯನ್ನು ಮರೆಯದಿರಿ.

ಓದಿರಿ: ಭಾರತದಲ್ಲಿ 'ಹುವಾವೇ' ಕಥೆಯೇನು?..ಭೀತಿಯಿಂದ ತತ್ತರಿಸಿದ ಚೀನಾದಿಂದ ಮನವಿ!!

ಎಲ್ಲಾ ಸಾಧನಗಳ ಏಕ ನಿಯಂತ್ರಣವನ್ನು ವ್ಯವಸ್ಥೆ ಸ್ವಯಂಚಾಲಿತವಾಗಿರುವ ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ ಹವಾಮಾನ ಮತ್ತು ವಾತಾವರಣದ ಪರಿಸ್ಥಿತಿಗಳಿಗೆ ಅನುಗುಣವಾಗಿ ಸೂಕ್ತ ಮೋಡ್ ಅನ್ನು ಆಯ್ಕೆ ಮಾಡುತ್ತದೆ. ಹೊಂದಿಕೊಳ್ಳುವಿಕೆ ವ್ಯವಸ್ಥೆ ನಿವಾಸಿಗಳ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲು ಅಳವಡಿಸುತ್ತದೆ. ವ್ಯವಸ್ಥೆಯನ್ನು ಕಾನ್ಫಿಗರ್ ಮಾಡಲು ಸುಲಭವಾಗಿಸುತ್ತದೆ ಮತ್ತು ವೆಚ್ಚ-ಪರಿಣಾಮಕ್ಕೆ ಸೇರಿಸುವುದು ವೆಚ್ಚ ಉಳಿತಾಯ ಮಾಡಲಿದೆ. ಆದರೆ, ಅದಕ್ಕಾಗಿ ನಾವು ಇದನ್ನು ಕಾಲ ಕಾಲಕ್ಕೆ ಅಪ್‌ಡೇಟ್ ಮಾಡುತ್ತಿರಬೇಕು.

Best Mobiles in India

English summary
If the ECU’s OS or the software responsible for sending and receiving data from all the sensors throughout your vehicle is not up-to-date. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X