ಹೊಸ ಸಿಮ್ ಖರೀದಿಸುವಾಗ ಆದ ಒಂದು ತಪ್ಪಿಗೆ ಜೈಲು ಸೇರಿದ!!.ಎಚ್ಚರ ಇಂತಹ ತಪ್ಪು ಮಾಡಬೇಡಿ!!

ಆನ್‌ಲೈನ್‌ ಖದೀಮರ ಚಾಲಾಖಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಿಂದಾಗಿ ಮೊಬೈಲ್ ಬಳಕೆದಾರರ ಫಿಂಗರ್‌ ಪ್ರಿಂಟ್‌ ಅನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬುದು ತಿಳಿದುಬಂದಿದೆ.

|

ಆನ್‌ಲೈನ್‌ ಖದೀಮರ ಚಾಲಾಖಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಿಂದಾಗಿ ಮೊಬೈಲ್ ಬಳಕೆದಾರರ ಫಿಂಗರ್‌ ಪ್ರಿಂಟ್‌ ಅನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಹೊಸದಾಗಿ ಸಿಮ್ ಖರಿದಿಸುವ ಗ್ರಾಹಕರಿಗೆ ವಂಚಿಸಿ ಅವರ ದಾಖಲೆಯನ್ನು ವಂಚನೆ ಕೃತ್ಯಕ್ಕೆ ಬಸಸಿಕೊಂಡಿರುವ ಪ್ರಕರಣವೊಂದು ಹೊರಬಿದ್ದಿದೆ.

ಬೆಂಗಳೂರು ಜೆ.ಪಿ. ನಗರದ ನಿವಾಸಿಯೊಬ್ಬರನ್ನು ಆನ್‌ಲೈನ್‌ ಮೂಲಕ ಸಂಪರ್ಕಿಸಿದ್ದ ಆನ್‌ಲೈನ್‌ ಖದೀಮರು, ಕೋಟ್ಯಂತರ ರೂ. ಲಾಭ ಮಾಡಬಹುದಾದ ಉದ್ಯಮ ಆರಂಭಿಸಿ ಎಂದು ಆಮಿಷ ಒಡ್ಡಿದ್ದಾರೆ. ಅವರ ಮಾತನ್ನು ನಂಬಿ ಮುಂಗಡ ಹಣವೆಂದು ಬರೋಬ್ಬರಿ 20 ಲಕ್ಷ ರೂ. ಹಣವನ್ನು ನೀಡಿ ಅವರಿಂದ ಪಂಗನಾಮ ಹಾಕಿಸಿಕೊಂಡು ನಂತರ ಠಾಣೆಗೆ ದೂರು ನೀಡಿದ್ದಾರೆ.

ಹೊಸ ಸಿಮ್ ಖರೀದಿಸುವಾಗ ಆದ ಒಂದು ತಪ್ಪಿಗೆ ಜೈಲು ಸೇರಿದ!!

ಇನ್ನು ಈ ವಂಚನೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು, ವಂಚಕರು ಬಳಸಿದ್ದ ಮೊಬೈಲ್‌ ಫೋನ್‌ ನಂಬರ್ ಪಡೆದ ಪೊಲೀಸರು ತನಿಖೆ ನಡೆಸಿದಾಗ, ಮೊಬೈಲ್‌ ನಂಬರ್‌ ಖರೀದಿಗಾಗಿ ಆಧಾರ್ ಕಾರ್ಡ್‌ ದಾಖಲೆ ನೀಡಿದ ವ್ಯಕ್ತಿಯನ್ನು ಹುಡುಕಿದ್ದಾರೆ. ಆ ಆಧಾರ್ ದಾಖಲೆ ಹೊಂದಿರುವ ಆ ವ್ಯಕ್ತಿ ಸಿಕ್ಕಿದರೂ ಸಹ ಅವರು ಸಿಮ್ ಖರೀದಿಸಿಯೇ ಇಲ್ಲ ಎಂಬುದು ತಿಳಿದುಬಂದಿದೆ.

ನಂತರ ಸಿಮ್ ಖರೀದಿಸಿದ್ದ ಮೊಬೈಲ್‌ ಅಂಗಡಿಯ ಮಾಹಿತಿ ಸಿಕ್ಕ ನಂತರ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಂಗಡಿ ಮಾಲಿಕ, ಅಮಾಯಕ ವ್ಯಕ್ತಿಗಳು ಸಿಮ್ ಖರೀದಿಗೆಂದು ಬಂದಾಗ ಅವರ ಫಿಂಗರ್‌ಪ್ರಿಂಟ್‌ ಅನ್ನು ಎರಡೆರೆಡು ಬಾರಿ ತೆಗೆದುಕೊಂಡು ಮತ್ತೊಂದು ಸಿಮ್ ಆಕ್ಟಿವೇಟ್ ಮಾಡಿಕೊಂಡು ದುರುಪಯೋಗ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಹೊಸ ಸಿಮ್ ಖರೀದಿಸುವಾಗ ಆದ ಒಂದು ತಪ್ಪಿಗೆ ಜೈಲು ಸೇರಿದ!!

ಅಮಾಯಕ ವ್ಯಕ್ತಿಗಳಿಂದ ಹೀಗೆ ಹಲವು ಸಿಮ್ ಕಾರ್ಡ್‌ಗಳನ್ನು ಆಕ್ಟಿವೇಟ್ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಿಕೊಂಡಿದ್ದಾನೆ. ಇವನು ಇಂತಹ ಸಿಮ್‌ಗಳನ್ನು ವಿದೇಶಿಯರಿಗೂ ಮಾರಾಟ ಮಾಡಿರುವುದು ಕಂಡುಬಂದಿದೆ. ಇದರಿಂದ ಈಗ ಪೊಲೀಸರಿಗೂ ವಂಚಕರನ್ನು ಹುಡುಕಲು ತಲೆನೊವ್ವಾಗಿದ್ದು, ಅಂಗಡಿಯವನು ಜೈಲು ಸೇರಿದ್ದಾನೆ.

ಈ ಘಟನೆಯ ನಂತರ ಮೊಬೈಲ್ ಅಂಗಡಿಗಳಲ್ಲಿ ಸಿಮ್ ಖರೀದಿಸುವ ವೇಳೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂಬುದನ್ನು ತಿಳಿಯಬೇಕಿದೆ. ಅಂಗಡಿಯವರು ಆಧಾರ್ ಕಾರ್ಡ್‌ ವೆರಿಫಿಕೇಷನ್‌ಗಾಗಿ ಒಂದಕ್ಕಿಂತ ಹೆಚ್ಚು ಬಾರಿ ಫಿಂಗರ್‌ ಪ್ರಿಂಟ್‌ ಕೇಳಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದರೆ ಕಂಡಿತ ಪೊಲೀಸ್ ಠಾಣೆಗೆ ದೂರು ನೀಡಿ.

ಓದಿರಿ: ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಸಿದ್ಧಪಡಿಸಿದೆ ಸ್ಯಾಮ್‌ಸಂಗ್!!

Best Mobiles in India

English summary
Aadhaar is premised on the infallibility and security of an individual's biometric data – her fingerprints and iris scans. But this is just a myth.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X