ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಕೆದಾರರನ್ನು ಬೆಚ್ಚಿ ಬೀಳಿಸುವ ಸುದ್ದಿ!

|

ಪ್ರಸ್ತುತ ಆನ್‌ಲೈನ್‌ ಪೇಮೆಂಟ್ ಮಾಡುವಾಗ, ಶಾಪಿಂಗ್ ವೇಳೆ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ನೀಡುವಾಗ ಬಳಕೆದಾರರು ಬಹಳಷ್ಟು ಎಚ್ಚರವಹಿಸುತ್ತಾರೆ. ಆದರೆ ಇದೀಗ ಸುಮಾರು 4 ಲಕ್ಷ ಭಾರತೀಯರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿರುವ ಮಾಹಿತಿಯನ್ನು ಸಿಂಗಪೂರ್ ಮೂಲದ ಗ್ರೂಪ್‌ IB (Group-IB) ಸೈಬರ್ ಸೆಕ್ಯುರಿಟಿ ಸಂಸ್ಥೆಯು ಬಹಿರಂಗಪಡಿಸಿದೆ.

4 ಲಕ್ಷ ಭಾರತೀಯ ಡೆಬಿಟ್ ಕಾರ್ಡ್‌

ಹೌದು, 4 ಲಕ್ಷ ಭಾರತೀಯ ಡೆಬಿಟ್ ಕಾರ್ಡ್‌ನ ವ್ಯಾಲಿಡಿಟಿ ಅವಧಿ, CVV ನಂಬರ್, ಬಳಕೆದಾರರ ಹೆಸರು, ಕಾರ್ಡ್‌ ಮುಕ್ತಾಯದ ದಿನಾಂಕ, ಬಳಕೆದಾರರ ಫೋನ್ ನಂಬರ್, ಇ-ಮೇಲ್ ಐಡಿ ಮಾಹಿತಿಗಳು ಸೋರಿಕೆಯಾಗಿವೆ ಎಂಬ ಶಾಕಿಂಗ್ ಮಾಹಿತಿಯನ್ನು ಗ್ರೂಪ್‌ IB ಸೈಬರ್ ಸೆಕ್ಯುರಿಟಿ ಸಂಸ್ಥೆಯು ಹೊರಹಾಕಿದೆ. ಸೈಬರ್‌ ವಂಚನೆಗಳಿಂದ ಗುರುತಿಸಿಕೊಂಡಿರುವ ಪೋರ್ಟೆಲ್ ಡಾರ್ಕ್‌ನೆಟ್‌ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾಹಿತಿ ಮಾರಾಟ ಆಗಿವೆ ಎಂದು ಸಂಸ್ಥೆಯು ತಿಳಿಸಿದೆ.

ಡೆಬಿಟ್ ಕಾರ್ಡ್

ಬಳಕೆದಾರರ ಎಲ್ಲ ಗೌಪ್ಯ ಮಾಹಿತಿಗಳನ್ನು ಒಳಗೊಂಡ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್‌ ಮಾಹಿತಿಗಳು ಸೋರಿಕೆ ಆಗಿವೆ. ಇನ್ನು ಈ ಕಾರ್ಡ್‌ಗಳನ್ನು ಪ್ರತಿ ಕಾರ್ಡ್‌ಗೆ 650ರೂ.ಗಳಂತೆ ಮಾರಾಟ ಮಾಡಲಾಗಿದೆ. ಒಟ್ಟು 4,61,976 ಭಾರತೀಯರ ಕಾರ್ಡ್‌ ಮಾರಾಟ ಆಗಿವೆ ಎನ್ನಲಾಗಿದ್ದು, ಇದರಿಂದ ಆನ್‌ಲೈನ್ ವಂಚಕರು ಸುಮಾರು 30 ಕೋಟಿ ಗಳಿಸಿರಬಹುದು ಎಂದು ಎಂದು ಗ್ರೂಪ್‌ IB ತಿಳಿಸಿದೆ.

ಹ್ಯಾಕ್ ಹೇಗೆ ನಡೆದಿದೆ

ಹ್ಯಾಕ್ ಹೇಗೆ ನಡೆದಿದೆ

ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳ ವಿಷಯದಲ್ಲಿ ಗೌಪ್ಯತೆ ಕಾಪಾಡಿದರೂ ಸೋರಿಕೆ ನಡೆದಿರುವುದು ಕಳವಳಕಾರಿ ಸಂಗತಿ. ವಂಚನೆಯ ಮಾರ್ಗಗಳಾದ ಫಿಶಿಂಗ್, ಮಾಲ್ವೇರ್ ಮತ್ತು ಇ-ಕಾಮರ್ಸ್‌ ಜಾಲತಾಣಗಳನ್ನು ಹ್ಯಾಕ್ ಮಾಡುವ ಮೂಲಕ ಬಳಕೆದಾರರ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಕದಿಯಲಾಗಿದೆ ಎಂದು ತಿಳಿಸಿದೆ. ಇ-ಕಾಮರ್ಸ್‌ ತಾಣಗಳಲ್ಲಿ ಹೆಚ್ಚಿನ ಕಾರ್ಡ್ ಮಾಹಿತಿಗಳು ಲಭ್ಯವಾಗಿರುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಶೇ.98% ಮಾಹಿತಿಗಳು ಬ್ಯಾಂಕ್‌ಗಳಿಂದ ಬಂದಿರುವ ಮಾಹಿತಿಯನ್ನು ಸೈಬರ್ ಸಂಸ್ಥೆ ಗ್ರೂಪ್‌ IB ಹೇಳಿದೆ.

ಇದು ಎರಡನೇ ಸಲ

ಇದು ಎರಡನೇ ಸಲ

ಡಾರ್ಕ್‌ ನೆಟ್ ವಂಚನೆ ತಾಣದಲ್ಲಿ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆ ಆಗಿರುವುದು ಇದು ಎರಡನೇ ಸಲ. 2019ರಲ್ಲಿ ಸುಮಾರು 1.3 ಮಿಲಿಯನ್ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ ಮಾಹಿತಿ ಮಾರಾಟ ಆಗಿದ್ದ ಬಗ್ಗೆ ಗ್ರೂಪ್ ಐಬಿ ಹೇಳಿತ್ತು. ಆದ್ರೆ ಈ ಬಾರಿ ಬಳಕೆದಾರರ ಡೆಬಿಟ್ ಕಾರ್ಡ್ ಸಿವಿವಿ ನಂಬರ್, ಕಾರ್ಡ್‌ದಾರರ ಹೆಸರು ಸಹ ಸೋರಿಕೆ ಆಗಿವೆ ಎನ್ನುವುದು ಶಾಕಿಂಗ್ ಆಗಿದೆ.

Best Mobiles in India

Read more about:
English summary
The Group-IB detected a database containing over 460,000 payment card records uploaded to one of the most popular darknet cardshops on February 5.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X