ನಿಮ್ಮ ಸಂಪೂರ್ಣ ಗುಟ್ಟು ಬಿಟ್ಟು ಕೊಡಲಿದೆ ಸ್ಮಾರ್ಟ್‌ಫೋನ್: ಎಚ್ಚರ..!
ಆಂಡ್ರಾಯ್ಡ್ ಫೋನ್ ಗಳು ಹಾಗೂ ನೀವು ಬಳಕೆ ಮಾಡಿಕೊಳ್ಳುವ ಆಪ್‌ಗಳು ನಿಮ್ಮ ಪ್ರತಿ ಚಲನೆಯ ಮೇಲೆಯೂ ಕಣ್ಣಿಡಲಿದ್ದು, ಇದು ನಿಮ್ಮ ಅರಿವೆಗೆ ಬರುವುದಿಲ್ಲ. ಆದರೆ ಗೂಗಲ್ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎನ್ನಲಾಗಿದೆ.
ಸ್ಮಾರ್ಟ್‌ಫೋನ್ ಇಂದು ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿದೆ. ಆದರೆ ಇದೇ ಸ್ಮಾರ್ಟ್‌ಫೋನ್ ನಮ್ಮ ಪ್ರೈವಸಿಯನ್ನು ಬಯಲು ಮಾಡುತ್ತಿದೆ. ನಿಮ್ಮ ಸ್ಮಾರ್ಟ್‌ಫೋನ್ ನೀವು ರಿಯಲ್ ಟೈಮಿನಲ್ಲಿ ಏನು ಮಾಡುತ್ತಿದ್ದೀರಿ ಎಂಬುದನ್ನು ಗೂಗಲ್‌ಗೆ ತಿಳಿಸಲಿದೆ. ನಿಮ್ಮ ಪ್ರತಿ ಚಲನೆಯೂ ಗೂಗಲ್ ಟ್ರಾಕ್ ಮಾಡಬಹುದಾಗಿದೆ.

ಓದಿರಿ: ಡಿಸೆಂಬರ್ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇನಷ್ಟು ವೇಗವಾಗಲಿದೆ...!
ಆಂಡ್ರಾಯ್ಡ್ ಫೋನ್ ಗಳು ಹಾಗೂ ನೀವು ಬಳಕೆ ಮಾಡಿಕೊಳ್ಳುವ ಆಪ್‌ಗಳು ನಿಮ್ಮ ಪ್ರತಿ ಚಲನೆಯ ಮೇಲೆಯೂ ಕಣ್ಣಿಡಲಿದ್ದು, ಇದು ನಿಮ್ಮ ಅರಿವೆಗೆ ಬರುವುದಿಲ್ಲ. ಆದರೆ ಗೂಗಲ್ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎನ್ನಲಾಗಿದೆ.

ನೀವು ಕುಳಿತಿದ್ದು, ನಿಂತಿದ್ದು ತಿಳಿಸಲಿದೆ:
ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿರುವ ಸೆನ್ಸರ್ ಗಳು ನೀವು ಕುಳಿತಿದ್ದನ್ನು ನಿಂತಿದ್ದನ್ನು ಕರಾರುವಕ್ಕಾಗಿ ನಿರ್ಧರಿಸಲಿದೆ. ಇದನ್ನು ಗೂಗಲ್ ಗೆ ತಿಳಿಸಲಿದೆ. ಇಲ್ಲದೇ ನೀವು ಬಳಸು ಫಿಟ್‌ನೆಸ್ ಆಪ್‌ಗಳು ಈ ಸೆನ್ಸಾರ್‌ಗಳಿಂದಲೇ ಕಾರ್ಯನಿರ್ವಹಿಸುವುದು.

ನಿಮ್ಮ ಫೋನ್ ಮಾಯಾಪಟ್ಟಿಗೆ:
ನೀವು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಅನ್ನು ಟೇಬಲ್ ಮೇಲೆ ಇಟ್ಟಿದನ್ನು ಕೈಗೆ ಎತ್ತಿಕೊಂಡರು ಸಹ ಅದನ್ನು ಗ್ರಹಿಸುವ ಶಕ್ತಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಇದೆ ಎನ್ನಲಾಗಿದೆ.

ಆಕ್ಟಿವಿಟಿ ರೆಕಗ್ನೇಷನ್ ಆಯ್ಕೆ:
ಸ್ಮಾರ್ಟ್‌ಫೋನ್‌ಗಳಲ್ಲಿ ಇದಕ್ಕಾಗಿಯೇ ಆಕ್ಟಿವಿಟಿ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿರುತ್ತದೆ. ಇದರಿಂದಾಗಿ ನೀವು ನಡೆದಾಡುವ ಇಲ್ಲವೇ ಓಡಾಡುವ ಪ್ರತಿ ಅಂಶಗಳು ರೆಕಾರ್ಡ್ ಆಗಲಿದೆ.

ಕ್ಯಾಮೆರಾ ಸಹ:
ನಿಮ್ಮ ಮೊಬೈಲ್‌ನಲ್ಲಿರುವ ಕ್ಯಾಮೆರಾವನ್ನು ನಿಮಗೆ ಅರಿವಿಲ್ಲದಂತೆ ಬಳಸುವ ಸಾಧ್ಯತೆ ಇದೆ. ಅಲ್ಲದೇ ಅದರಲ್ಲಿ ತೆಗೆದ ಫೋಟೋಗಳನ್ನು ನಿಮಗೆ ತಿಳಿಯದಂತೆ ಗೂಗಲ್ ನೋಡಬಹುದಾಗಿದೆ.


Click it and Unblock the Notifications








