ಡಿಸೆಂಬರ್ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇನಷ್ಟು ವೇಗವಾಗಲಿದೆ...!

Written By:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಮತ್ತೊಂದು ಹೊಸ ಮಾದರಿ, ಅತೀ ವೇಗದ ಪ್ರೋಸೆಸರ್ ವೊಂದನ್ನು ಲಾಂಚ್ ಮಾಡಿದೆ ಎನ್ನಲಾಗಿದೆ. ಈ ವರ್ಷದಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಲಾಂಚ್ ಮಾಡಿತ್ತು. ಈ ಬಾರಿ ಮತ್ತೊಂದು ಹೊಸ ಪ್ರೋಸೆಸರ್ ಲಾಂಚ್ ಮಾಡಲು ಮುಂದಾಗಿದೆ.

ಡಿಸೆಂಬರ್ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇನಷ್ಟು ವೇಗವಾಗಲಿದೆ...!

ಓದಿರಿ: ಜಿಯೋ DTH ಸೇವೆಗೆ ಟ್ವಿಸ್ಟ್: Tv ನೋಡಲು ಡಿಶ್ ಬೇಕಾಗಿಲ್ಲ..!

ಡಿಸೆಂಬರ್ ಅಂತ್ಯದ ವೇಳೆಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದು ಮುಂದಿನ ತಲೆಮಾರಿನ ಪ್ರೋಸೆಸರ್ ಎಂದು ಗುರುತಿಸಲಾಗಿದ್ದು, ಸ್ಮಾರ್ಟ್‌ಫೋನ್ ಭಾಷ್ಯದಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸೆಂಬರ್ 4ಕ್ಕೆ ಬಿಡುಗಡೆ:

ಡಿಸೆಂಬರ್ 4ಕ್ಕೆ ಬಿಡುಗಡೆ:

ಈಗಾಗಲೇ ಸ್ಮಾರ್ಟ್‌ಫೋನ್ ಚಿಪ್ ತಯಾರಿಕೆಯಲ್ಲಿ ಹೆಸರು ಮಾಡಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಇದೇ ಡಿಸೆಂಬರ್ 4ಕ್ಕೆ ಹೊಸ ಪ್ರೋಸೆಸರ್ ಲಾಂಚ್ ಮಾಡಲಿದೆ. ಡಿಸೆಂಬರ್ 4 ರಿಂದ 8 ರ ವರೆಗೆ ಸ್ನಾಪ್‌ಡ್ರಾಗನ್ ಟೆಕ್ನಾಲಜಿ ಸಮವೇಶವು ನಡೆಯಲಿದೆ. ಅಲ್ಲಿ ಈ ಪ್ರೋಸೆಸರ್ ಬಿಡುಗಡೆಯಾಗಲಿದೆ.

ಆಡ್ರಿನೋ 630:

ಆಡ್ರಿನೋ 630:

ಇದಲ್ಲದೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಆಡ್ರಿನೋ 630 ಸಹ ದೊರೆಯಲಿದೆ ಎನ್ನಲಾಗಿದೆ. ಇದು ಹೆಚ್ಚಿನ ಗ್ರಾಫಿಕ್ಸ್ ಗೇಮ್‌ಗಳನ್ನು ಆಡಲು ಇದು ಸಹಾಯಕಾರಿಯಾಗಿದೆ.

AR-VR ಸಪೋರ್ಟ್:

AR-VR ಸಪೋರ್ಟ್:

ಇದಲ್ಲದೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ AR-VR ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ AR-VR ಹೆಚ್ಚು ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳಲಿದೆ.

1.2 GBPS ವೇಗ:

1.2 GBPS ವೇಗ:

1.2 GBPS ವೇಗ ವೇಗದಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಕಾರ್ಯನಿರ್ವಹಿಸಲಿದೆ. ಇದು ಮೊಬೈಲ್ ವೇಗವನ್ನು ಹೆಚ್ಚು ಮಾಡಲಿದೆ ಎನ್ನಲಾಗಿದೆ.

ಟಾಪ್‌ಎಂಡ್ ಫೋನ್:

ಟಾಪ್‌ಎಂಡ್ ಫೋನ್:

ಈಗಾಗಲೇ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ಟಾಪ್‌ ಎಂಡ್ ಫೋನ್‌ಗಳಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಕಾಣಿಸಿಕೊಳ್ಳಲಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಮುಂದಿನ ಸರಣಿಯಲ್ಲಿ ಈ ಪ್ರೋಸೆಸರ್ ಇರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Qualcomm Snapdragon 845 processor. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot