ಮಿಂಚಿನಲ್ಲೂ ನಿಮ್ಮ ಟೆಲಿಫೋನ್ ಇನ್ನು ಸಕ್ರಿಯ

By Shwetha
|

ಮಿಂಚಿನಿಂದ ಕುಡಿರುವ ಭಾರೀ ಮಳೆಯಿಂದಾಗಿ ಟೆಲಿಫೋನ್ ಎಕ್ಸ್‌ಚೇಂಜ್‌ಗಳ (ದೂರವಾಣಿ ವಿನಿಮಯ) ಮೇಲೆ ಸಾಮಾನ್ಯ ಪರಿಣಾಮ ಉಂಟಾಗುತ್ತದೆ. ಆದರೆ ಪ್ರಥಮ ಬಾರಿಗೆ ಎಂಬಂತೆ, ಐಐಎಸ್‌ಸಿ (IISC) ಯ ವಿಜ್ಞಾನಿಗಳು ಹೊಸದಾದ ಅನ್ವೇಷಣೆಯೊಂದಿಗೆ ಬಂದಿದ್ದು ಈ ವಿನಿಮಯಗಳು ಮಿಂಚಿನ ದಾಳಿಯನ್ನು ತಡೆಯಲಿವೆ ಎಂಬುದಾಗಿದೆ.

ಮಿಂಚಿನಲ್ಲೂ ನಿಮ್ಮ ಟೆಲಿಫೋನ್ ಇನ್ನು ಸಕ್ರಿಯ

ನೈಸರ್ಗಿಕ ಮಿಂಚು ಮತ್ತು ವಿದ್ಯುತ್ ಪ್ರಸರಣ ಲೈನ್‌ಗಳ ಪರಸ್ಪರ ಕ್ರಿಯೆಗಳಂದಾಗಿ ಎಕ್ಸ್‌ಚೇಂಜ್‌ನಿಂದ ಚಾಲನೆಯಾಗುವ ಟೆಲಿಫೋನ್ ವಯರ್‌ಳಿರುವ ಮನೆಗಳಲ್ಲಿ ಹೆಚ್ಚು ವೋಲ್ಟೇಜ್ ಮತ್ತು ಹೆಚ್ಚಿನ ವಿದ್ಯುತ್ ಏರಿಳಿತ ಉಂಟಾಗುತ್ತದೆ. ವಿದ್ಯುತ್ ಏರಿಳಿತ, ಎಕ್ಸ್‌ಚೇಂಜ್ ಅಥವಾ ಗ್ರಾಹಕ ಆವರಣದಲ್ಲಿ ಕಡಿಮೆ ವಿದ್ಯುತ್ ಶಕ್ತಿಯ ಉಪಕರಣಗಳಿಗೆ ಹಾನಿಯನ್ನುಂಟು ಮಾಡಬಹುದು.

ಓದಿರಿ: ಸೋಲಿಗೆ ಸಡ್ಡುಹೊಡೆದ ಟೆಕ್ ಜಗದ ಮಿಂಚು ನಕ್ಷತ್ರಗಳು

ಐಐಎಸ್‌ಸಿಯ ಸಂಶೋಧಕರು ಹೊಸದೊಂದು ಸಲಕರಣೆಯನ್ನು ಅಭಿವೃದ್ಧಿಪಡಿಸಿದ್ದು ಮಿಂಚಿನ ಏರಿಳಿತಗಳ ವಿರುದ್ಧ ಡಿಜಿಟಲ್ ಟೆಲಿಕಾಮ್ ಎಕ್ಸ್‌ಚೇಂಜ್‌ಗಳ ಉತ್ತಮ ಸುರಕ್ಷತೆಯನ್ನು ಇದು ಒದಗಿಸುತ್ತದೆ. ಐಐಎಸ್‌ಸಿಯ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಈ ಅಧ್ಯಯನವನ್ನು ಕೈಗೊಂಡಿದ್ದಾರೆ.

ಓದಿರಿ: ಹುರ್ರೇ! ಟಾಪ್ ಅಪ್ಲಿಕೇಶನ್‌ಗಳಿಂದ ಉಚಿತ ರೀಚಾರ್ಜ್

ಡಿಜಿಟಲ್ ಟೆಲಿಕಾಮ್ ಎಕ್ಸ್‌ಚೇಂಜ್‌ಗಳು ಬಿಲ್ಟ್ ಇನ್ ಸಿಸ್ಟಮ್ ಆದ ಪ್ರೊಟೆಕ್ಶನ್ ಕಾರ್ಡ್‌ಗಳನ್ನು ಹೊಂದಿದ್ದು, ವೋಲ್ಟೇಜ್ ಮತ್ತು ವಿದ್ಯುತ್ ಏರಿಳಿತಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಈ ಪ್ರೊಟೆಕ್ಶನ್ ಕಾರ್ಡ್‌ಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂರಕ್ಷಣಾ ಹಂತಗಳಿದ್ದು ಹೆಚ್ಚು ವೋಲ್ಟೇಜ್ ಅಥವಾ ಹೆಚ್ಚಿನ ವಿದ್ಯುತ್ ಪ್ರಸಾರವಾದಲ್ಲಿ ಪ್ರಾಥಮಿಕ ಪ್ರೊಟೆಕ್ಶನ್ ಡಿವೈಸ್ ಹೆಚ್ಚುವರಿ ಶಕ್ತಿಯನ್ನು ಹೀರಿಕೊಂಡು ನೆಲಕ್ಕೆ ಅವನ್ನು ರವಾನಿಸುತ್ತದೆ. ಪ್ರಾಥಮಿಕ ಪ್ರೊಟೆಕ್ಶನ್ ಸಕ್ರಿಯಗೊಂಡ ನಂತರ ಇದು ಬಿಟ್ಟಿರುವ ಉಳಿದ ಶಕ್ತಿಯ ಕಾಳಜಿಯನ್ನು ದ್ವಿತೀಯ ಪ್ರೊಟೆಕ್ಶನ್ ಮಾಡುತ್ತದೆ. ಎಕ್ಸ್‌ಚೇಂಜ್‌ಗಳಲ್ಲಿ ಪ್ರೊಟೆಕ್ಶನ್ ಕಾರ್ಡ್‌ಗಳನ್ನು ಅಳವಡಿಸುವಾಗ ಪರೀಕ್ಷೆಯನ್ನು ಮಾಡುವುದು ಕಡ್ಡಾಯವಾಗಿದೆ.

Best Mobiles in India

English summary
Telephone exchanges are commonly affected during heavy rainfall accompanied by lightning. For the first time, researchers at the Indian Institute of Science (IISc) have come up with a technology that can help these exchanges to overcome the lightning attack.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X