Home
ಸುದ್ದಿಜಾಲ

ನಿಮ್ಮ ಫೋನ್‌ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ?..ಹಾಗಿದ್ರೆ, ಈ ಟಿಪ್ಸ್‌ ಫಾಲೋ ಮಾಡಿ!

ಮೊಬೈಲ್‌ ಬಳಕೆದಾರರೇ, ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ?, ಏನಾಗಿದೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ, ಮನೆಯಲ್ಲಿಯೇ ಕೆಲವು ಹಂತಗಳ ಮೂಲಕ ಸಮಸ್ಯೆ ಸರಿ ಮಾಡಲು ಪ್ರಯತ್ನಿಸಬಹುದು.

ಹೌದು, ಬ್ಯಾಟರಿ ಬ್ಯಾಕ್‌ಅಪ್‌ ಸ್ಮಾರ್ಟ್‌ಫೋನ್‌ ಜೀವಾಳ ಆಗಿದೆ. ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಫೋನಿಗೆ ಬಾಳಿಕೆಗೆ ಆಸರೆಯಾಗಿದೆ. ಹೀಗಾಗಿ ಫೋನ್‌ ಅನ್ನು ಸರಿಯಾಗಿ ಚಾರ್ಜ್ ಮಾಡುವುದು ಉತ್ತಮ. ಒಂದು ವೇಳೆ ನಿಮ್ಮ ಫೋನ್‌ ಸರಿಯಾಗಿ ಚಾರ್ಜ್ ಆಗದಿದ್ದರೆ, ನೀವು ಈ ಕೆಳಗಿನ ಹಂತಗಳನ್ನು ಪರಿಶೀಲಿಸಬಹುದು. ಮುಂದೆ ಓದಿರಿ.

ನಿಮ್ಮ ಫೋನ್‌ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ?.ಹಾಗಿದ್ರೆ, ಈ ಟಿಪ್ಸ್‌ ಫಾಲೋ ಮಾಡಿ

ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಅನ್ನು ಚೆಕ್ ಮಾಡಿ :
ಮೊದಲು ಬಾಹ್ಯವಾಗಿ ಏನಾದರೂ ಡ್ಯಾಮೆಜ್‌ ಆಗಿದೆಯಾ ಅಂತಾ ತಿಳಿಯಲು ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಅನ್ನು ಚೆಕ್ ಮಾಡಿ. ಉದಾಹರಣೆಗೆ- ಫ್ರೇಡ್ ವೈರ್‌ಗಳು ಅಥವಾ ಬಾಗಿದ ಕನೆಕ್ಟರ್‌ಗಳು. ಹಾನಿಗೊಳಗಾದ ಕೇಬಲ್‌ಗಳು ಮತ್ತು ಅಡಾಪ್ಟರ್‌ಗಳು ಸರಿಯಾದ ಚಾರ್ಜಿಂಗ್ ಅನ್ನು ತಡೆಯಬಹುದು.

ಬೇರೆ ವಿದ್ಯುತ್ ಸಾಕೆಟ್‌ ಅನ್ನು ಚೆಕ್ ಮಾಡಿ :
ಕೆಲವೊಮ್ಮೆ, ಸಮಸ್ಯೆಯು ವಿದ್ಯುತ್ ಸಾಕೆಟ್‌ ನಲ್ಲಿಯೂ ಇರಬಹುದು. ಹೀಗಾಗಿ ನಿಮ್ಮ ಮೊಬೈಲ್‌ ಚಾರ್ಜರ್ ಅನ್ನು ಬೇರೊಂದು ವಿದ್ಯುತ್ ಸಾಕೆಟ್‌ಗೆ ಪ್ಲಗ್ ಮಾಡಿ ಚೆಕ್ ಮಾಡಬಹುದು.

ಚಾರ್ಜಿಂಗ್ ಪೋರ್ಟ್ ಅನ್ನು ಕ್ಲೀನ್ ಮಾಡಿರಿ :
ಚಾರ್ಜಿಂಗ್ ಪೋರ್ಟ್ ಧೂಳು ಅಥವಾ ಇತರೆ ಕಸ ಏನಾದರೂ ಸೇರಿಕೊಂಡಿರುವ ಸಾಧ್ಯತೆಗಳು ಇರುತ್ತವೆ. ಹಾಗೇನಾದರೂ ಧೂಳು, ಕಸ ಸಲಿಕಿದ್ದರೆ, ಅದು ಚಾರ್ಜಿಂಗ್ ಕನೆಕ್ಟಿವಿಟಿ ಅನ್ನು ನಿರ್ಬಂಧಿಸಬಹುದು. ಹೀಗಾಗಿ ಚಾರ್ಜಿಂಗ್ ಪೋರ್ಟ್ ಅನ್ನು ಸ್ವಚ್ಛಗೊಳಿಸುವುದು ಸೂಕ್ತ. ಆದರೆ ಚಾರ್ಜಿಂಗ್‌ ಪೋರ್ಟ್‌ಹೆ ಹಾನಿ ಆಗದಂತೆ ಕ್ಲೀನ್ ಮಾಡುವುದನ್ನು ಮರೆಯದಿರಿ.

ಸ್ಮಾರ್ಟ್‌ಫೋನ್‌ ಅನ್ನು ರೀಸ್ಟಾರ್ಟ್‌ ಮಾಡಿ ನೋಡಿ :
ಕೆಲವು ಸ್ಮಾರ್ಟ್‌ಫೋನ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡದಿದ್ದಾಗಲೂ ಚಾರ್ಜ್ ಸರಿಯಾಗಿ ಆಗದಿರುವ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಒಮ್ಮೆ ರೀಸ್ಟಾರ್ಟ್‌ ಮಾಡಿ ನೋಡುವುದು ಒಂದು ಸೂಕ್ತ ಮಾರ್ಗ ಆಗಿದೆ.

ನಿಮ್ಮ ಫೋನ್‌ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ?.ಹಾಗಿದ್ರೆ, ಈ ಟಿಪ್ಸ್‌ ಫಾಲೋ ಮಾಡಿ

ಬೇರೆ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಬಳಸಿ ಚೆಕ್ ಮಾಡಿ :
ನಿಮ್ಮ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಮೂಲಕ ಸರಿಯಾಗಿ ಚಾರ್ಜ್ ಆಗದೇ ಇದ್ದಾಗ, ಬೇರೊಂದು ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್‌ ಮೂಲಕ ಚಾರ್ಜ್ ಆಗುತ್ತಾ ಎಂದು ಒಮ್ಮೆ ಪರಿಶೀಲಿಸಿ ನೋಡಿ. ಬೇರೆ ಕೇಬಲ್‌ ಅಥವಾ ಅಡಾಪ್ಟರ್ ಮೂಲಕ ಸರಿಯಾಗಿ ಚಾರ್ಜ್ ಆದರೆ, ನಿಮ್ಮ ಕೇಬಲ್ ಅಥವಾ ಅಡಾಪ್ಟರ್ ಸಮಸ್ಯೆ ಇದೆ ಎಂದು ತಿಳಿಯಬಹುದು.

ಸಾಫ್ಟ್‌ವೇರ್ ಅಪ್‌ಡೇಟ್‌ ಚೆಕ್ ಮಾಡಿರಿ :
ಫೋನಿನ ಹಳೆಯ ಸಾಫ್ಟ್‌ವೇರ್ ಕೆಲವೊಮ್ಮೆ ಚಾರ್ಜಿಂಗ್ ಸಮಸ್ಯೆಗಳಿಗೆ ಕಾರಣ ಆಗುವ ಸಾಧ್ಯತೆಗಳು ಇರುತ್ತವೆ. ಈ ನಿಟ್ಟಿನಲ್ಲಿ ಫೋನ್‌ ಸೆಟ್ಟಿಂಗ್‌ಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್‌ ಚೆಕ್‌ ಮಾಡುವುದು ಉತ್ತಮ. ನಿಮ್ಮ ಫೋನ್‌ ನೂತನ ಸಾಫ್ಟ್‌ವೇರ್ ಅಪ್‌ಡೇಟ್‌ ಬೇಡುತ್ತಿದ್ದರೆ, ಹೊಸ ಸಾಫ್ಟ್‌ವೇರ್ ಗೆ ಅಪ್‌ಡೇಟ್‌ ಮಾಡಿರಿ.

ಸುರಕ್ಷಿತ ಮೋಡ್‌ಗೆ boot ಮಾಡಿ :
ನಿಮ್ಮ ಫೋನಿನಲ್ಲಿರುವ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಚಾರ್ಜಿಂಗ್ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ನಿಮಗೆ ಅನಿಸಿದರೆ, ನಿಮ್ಮ ಆಂಡ್ರಾಯ್ಡ್‌ ಫೋನ್ ಅನ್ನು ಸುರಕ್ಷಿತ ಮೋಡ್‌ಗೆ ಬೂಟ್ ಮಾಡಿ. ಸುರಕ್ಷಿತ ಮೋಡ್‌ನಲ್ಲಿ, ಮೊದಲೇ ಇನ್‌ಸ್ಟಾಲ್‌ ಮಾಡಲಾದ ಆಪ್ಸ್‌ ಮಾತ್ರ ರನ್ ಆಗುತ್ತವೆ. ಫೋನ್ ಸುರಕ್ಷಿತ ಮೋಡ್‌ನಲ್ಲಿ ಸರಿಯಾಗಿ ಚಾರ್ಜ್ ಮಾಡಿದರೆ, ಥರ್ಡ್‌ ಪಾರ್ಟಿ ಆಪ್ಸ್‌ ಕಾರಣವಾಗಿರಬಹುದು.

ವೃತ್ತಿಪರ ಸಹಾಯವನ್ನು ಪಡೆಯಿರಿ :
ಈ ಮೇಲಿನ ಯಾವುದೇ ಹಂತಗಳು ಸಮಸ್ಯೆಯನ್ನು ಪರಿಹರಿಸದಿದ್ದರೆ. ಅದು ಹಾರ್ಡ್‌ವೇರ್ ಸಮಸ್ಯೆ ಆಗಿರಬಹುದು. ಇಂತಹ ಸಂದರ್ಭದಲ್ಲಿ, ಮೊಬೈಲ್‌ ಸರ್ವೀಸ್‌ ಸೆಂಟರ್‌ಗಳಲ್ಲಿ ಫೋನ್‌ ಚೆಕ್ ಮಾಡಿಸುವುದು ಉತ್ತಮ.

Best Mobiles in India

English summary
What to do if your phone is not charging? Try These few quick fixes. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+