ಆಡ್-ಬ್ಲಾಕರ್‌ಗಳನ್ನು ಬಳಸುವ ಜನರಿಗೆ ಶಾಕ್ ಕೊಟ್ಟ ಯೂಟ್ಯೂಬ್! ವಿಡಿಯೋ ವೀಕ್ಷಣೆ ಕಷ್ಟ..ಕಷ್ಟ..
ಯೂಟ್ಯೂಬ್ (YouTube) ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಎಲ್ಲರಿಗೂ ಅಗತ್ಯ ಎನಿಸುವ ಕಂಟೆಂಟ್ ಅನ್ನು ಅಲ್ಲಿ ನಾವು ಕಾಣಬಹುದಾಗಿದೆ. ಆದರೆ ಈಗ ಕೆಲವೊಂದಷ್ಟು ಬಳಕೆದಾರರಿಗೆ ಯೂಟ್ಯೂಬ್ ಶಾಕಿಂಗ್ ನ್ಯೂಸ್ ನೀಡಿದೆ.
ಹೌದು, ಕೆಲವು ತಿಂಗಳುಗಳಿಂದ ಯಾರೆಲ್ಲಾ ಆಡ್‌ಬ್ಲಾಕರ್‌ಗಳನ್ನು (YouTube Adblocker) ಬಳಕೆ ಮಾಡುತ್ತಿದ್ದಾರೋ ಅವರ ಮೇಲೆ ಯೂಟ್ಯೂಬ್ ಸಮರ ಸಾರುತ್ತಾ ಬರುತ್ತಿದೆ. ಇದು ಕೆಲವು ನಿರಾಶಾದಾಯಕ ಅನುಭವಗಳಿಗೆ ಕಾರಣ ಆಗುತ್ತಿದ್ದು, ಯೂಟ್ಯೂಬ್ ಬಳಕೆದಾರರು ತಮ್ಮ ಆಡ್‌ಬ್ಲಾಕರ್‌ಗಳನ್ನು ನಿಷ್ಕ್ರಿಯಗೊಳಿಸಲು ಕೇಳುವ ಮೆಸೆಜ್‌ಗಳನ್ನು ಸಹ ಪ್ರದರ್ಶಿಸಲು ಆರಂಭ ಮಾಡಿದೆ. ಹಾಗಿದ್ರೆ, ಏನಿದು ಹೊಸ ಬೆಳವಣಿಗೆ ಬನ್ನಿ ತಿಳಿಯೋಣ.

ಆಡ್‌ಬ್ಲಾಕರ್ ಬಳಕೆ ಮಾಡುವವರೇ ಗಮನಿಸಿ: ಇನ್ನು ಯಾರೆಲ್ಲಾ ಆಡ್‌ಬ್ಲಾಕರ್‌ಗಳನ್ನು ಬಳಕೆ ಮಾಡುತ್ತಾರೋ ಅವರು ವಿಡಿಯೋವನ್ನು (video) ವೀಕ್ಷಣೆ ಮಾಡಲು ಕಷ್ಟ ಸಾಧ್ಯ. ಯೂಟ್ಯೂಬ್‌ನ ಪ್ರಾಂಪ್ಟ್‌ಗಳು ವಿಡಿಯೋ ಪ್ಲೇ ಮಾಡುವುದನ್ನು ತಡೆಯುತ್ತದೆ. ಇದರಿಂದಾಗಿ ಅಗತ್ಯವಾಗಿ ಆಡ್‌ಬ್ಲಾಕರ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಅಥವಾ ಬುದ್ಧಿವಂತ ಪರಿಹಾರಗಳನ್ನು ಹುಡುಕಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಆದರೂ ಸಹ ಈ ವಾರ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಆಡ್‌ಬ್ಲಾಕರ್‌ಗಳನ್ನು ಹೊಂದಿರುವ ಅನೇಕ ಬಳಕೆದಾರರಿಗೆ ಯೂಟ್ಯೂಬ್ ವಿಡಿಯೋಗಳು ಇದ್ದಕ್ಕಿದ್ದಂತೆ ಅಂತ್ಯಗೊಳ್ಳುತ್ತಿವೆ. ನೀವು ವಿಡಿಯೋಗಳು ಹೊಸದಾಗಿ ಪ್ರಾರಂಭಿಸಿದರೂ ಅಥವಾ ಅದನ್ನು ಮರುಪ್ಲೇ ಮಾಡಿದರೂ, ಅದು ತಕ್ಷಣವೇ ಅಂತ್ಯಕ್ಕೆ ನೆಗೆಯುತ್ತದೆ. ಇದು ಯಾರೆಲ್ಲಾ ಆಡ್‌ಬ್ಲಾಕರ್ ಅನ್ನು ಇನ್‌ಸ್ಟಾಲ್ ಮಾಡಿದ್ದಾರೋ ಅವರು ಎದುರಿಸುತ್ತಿದ್ದಾರೆ. ಗಮನಿಸಬೇಕಾದ ವಿಷಯ ಏನೆಂದರೆ ಆಡ್‌ಬ್ಲಾಕರ್ ಅನ್ನು ನಿಷ್ಕ್ರಿಯಗೊಳಿಸಿದಾಗ, ಯಾವುದೇ ಅಡೆತಡೆಗಳಿಲ್ಲದೆ ವಿಡಿಯೋಗಳನ್ನು ಸಾಮಾನ್ಯವಾಗಿ ಪ್ಲೇ ಮಾಡಬಹುದಾಗಿದೆ.

ನೀವು ಸಾಮಾನ್ಯವಾಗಿ ವಿಡಿಯೋ ಪ್ಲೇ ಮಾಡಲು ಮುಂದಾದಾಗ ಈ ವಿಚಿತ್ರ ಅನುಭವ ನಿಮಗೆ ಆಗುವುದಿಲ್ಲ. ವಿಡಿಯೋದ ನಿರ್ದಿಷ್ಟ ಭಾಗಕ್ಕೆ ಸ್ಕಿಪ್ ಮಾಡಲು ಪ್ರಯತ್ನಿಸುವುದರಿಂದ ಇದು ಆಗಲಿದೆ. ಆಡ್‌ಬ್ಲಾಕರ್‌ಗಳ ಬಳಕೆಯನ್ನು ನಿರುತ್ಸಾಹಗೊಳಿಸಲು ಯೂಟ್ಯೂಬ್ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದೆ ಎಂದು ಅನೇಕರು ನಂಬುವಂತೆ ಮಾಡಲಾಗಿದೆ. ಈ ವರ್ಷದ ಆರಂಭದಲ್ಲಿ, ಆಡ್‌ಬ್ಲಾಕ್‌ನಲ್ಲಿನ ದೋಷವು ವಿಡಿಯೋಗಳನ್ನು ನಿಧಾನವಾಗಿ ಲೋಡ್ ಮಾಡಲು ಮತ್ತು ಯೂಟ್ಯೂಬ್ ಚಾಲನೆಯಲ್ಲಿರುವ ಡಿವೈಸ್‌ಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಿತ್ತು.
ಆ ಸಮಯದಲ್ಲಿ, ಅನೇಕ ಬಳಕೆದಾರರು ಸಮಸ್ಯೆಗೆ ಯೂಟ್ಯೂಬ್ ಹೊಣೆ ಎಂದು ಆರೋಪಿಸಿದರು. ಕುತೂಹಲಕಾರಿಯಾಗಿ, ಈ ಇತ್ತೀಚಿನ ಸಮಸ್ಯೆಯನ್ನು ಎದುರಿಸುತ್ತಿರುವ ಹೆಚ್ಚಿನ ಬಳಕೆದಾರರು ಆಡ್‌ಬ್ಲಾಕರ್ ಅನ್ನು ಬಳಸುತ್ತಿರುವಂತೆ ತೋರುತ್ತಿದೆ. ಆದರೆ, ಇತರ ಆಡ್‌ಬ್ಲಾಕರ್‌ಗಳನ್ನು ಹೊಂದಿರುವವರು ಅದೇ ನಡವಳಿಕೆಯನ್ನು ವರದಿ ಮಾಡುತ್ತಿಲ್ಲ. ಆಡ್‌ಬ್ಲಾಕರ್ ಇಲ್ಲದೆಯೇ ಇದು ಸಂಭವಿಸುವ ಕೆಲವು ಸೀಮಿತ ವರದಿಗಳಿವೆ.ಆದರೆ ಅವು ಕೆಲವು ಜನರಿಗೆ ಮಾತ್ರ.

ಈ ಸಮಸ್ಯೆಗಳನ್ನು ಎದುರಿಸುತ್ತಿರುವ ಬಳಕೆದಾರರಿಗೆ, ಹತಾಶೆಯ ಭಾವನೆ ಮೂಡದೇ ಇರದು. ಈ ಪರಿಸ್ಥಿತಿಯು ಬಳಕೆದಾರರು ತಮ್ಮ ಆಡ್‌ಬ್ಲಾಕರ್‌ಗಳನ್ನು ನಿಷ್ಕ್ರಿಯಗೊಳಿಸಲು, ಜಾಹೀರಾತುಗಳೊಂದಿಗೆ ಅವರ ವೀಕ್ಷಣೆಯ ಅನುಭವವನ್ನು ರಾಜಿ ಮಾಡಿಕೊಳ್ಳಲು ಅಥವಾ ಈ ಸಮಸ್ಯೆಗಳನ್ನು ಉಂಟುಮಾಡದ ಬೇರೆ ಆಡ್‌ಬ್ಲಾಕರ್‌ಗೆ ಬದಲಾಯಿಸಲು ಒತ್ತಾಯಿಸುವಂತೆ ಆಗುತ್ತಿದೆ.
ಯೂಟ್ಯೂಬ್ ಉದ್ದೇಶಪೂರ್ವಕವಾಗಿ ಈ ಸಮಸ್ಯೆಯನ್ನು ಉಂಟುಮಾಡುತ್ತಿದೆಯೇ ಅಥವಾ ನಿರ್ದಿಷ್ಟ ಆಡ್‌ಬ್ಲಾಕರ್‌ಗಳ ಸಮಸ್ಯೆಯೇ ಎಂಬುದು ಅನಿಶ್ಚಿತವಾಗಿ ಉಳಿದಿದೆ. ಯೂಟ್ಯೂಬ್ ಮತ್ತು ಆಡ್‌ಬ್ಲಾಕರ್‌ಗಳ ನಡುವಿನ ಈ ಯುದ್ಧದ ಮಧ್ಯದಲ್ಲಿ ಬಳಕೆದಾರರು ಸಿಕ್ಕಿಬಿದ್ದಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿದೆ. ನೀವು ಏನಾದರೂ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಒಮ್ಮೆ ಆಡ್‌ಬ್ಲಾಕರ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ನೋಡಿ.
ಚಂದಾದಾರರಾಗಿ: ಇನ್ನು ನಿಮಗೆ ಯಾವುದೇ ಜಾಹೀರಾತಿನ ಕಿರಿಕಿರಿ ಬೇಡ ಎಂದರೆ ಚಂದಾದಾರಿಕೆ ಪಡೆಯುವ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ನೀವು ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ. ಇದರಿಂದ ಯೂಟ್ಯೂಬ್ ಸಹ ಲಾಭವನ್ನು ಕಾಣಲಿದೆ. ಅದರ ಬದಲಾಗಿ ಥರ್ಡ್ ಫಾರ್ಟಿ ಆಪ್‌ಗಳನ್ನು ಜಾಹೀರಾತು ಕಂಟ್ರೋಲ್ ಮಾಡಲು ಬಳಕೆ ಮಾಡಿದ್ರೆ ನಿಮ್ಮ ಫೋನ್‌ಗೂ ಸಮಸ್ಯೆ, ಯೂಟ್ಯೂಬ್‌ಗೂ ಸಮಸ್ಯೆ.


Click it and Unblock the Notifications








