ಯೂಟ್ಯೂಬ್‌ ನಿಂದ ಹೊಸ ಫೀಚರ್ಸ್‌; ಸ್ಮಾರ್ಟ್‌ಟಿವಿಯಲ್ಲಿ ಶಾರ್ಟ್ಸ್‌ ವಿಡಿಯೋ ವೀಕ್ಷಣೆ!

|

ಯೂಟ್ಯೂಬ್‌ನಲ್ಲಿ ಸಾಕಷ್ಟು ನವೀಕರಣ ಪ್ರಕ್ರಿಯೆಗಳು ಆಗುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆಯಷ್ಟೇ ಯೂಟ್ಯೂಬ್‌ ಆಂಬಿಯಂಟ್‌ ಮೋಡ್‌, ಗೋ ಲೈವ್‌ ಟುಗೆದರ್‌ ಸೇರಿದಂತೆ ಆಕರ್ಷಕ ಫೀಚರ್ಸ್‌ ಅನ್ನು ಹೊರತಂದಿದೆ. ಇದರ ನಡುವೆ ಈಗ ಯೂಟ್ಯೂಬ್‌ ಬಳಕೆದಾರರಿಗೆ ಮತ್ತಷ್ಟು ಪ್ರಯೋಜನ ನೀಡಲು ಮುಂದಾಗಿದೆ. ಈ ಮೂಲಕ ಬಳಕೆದಾರರು ಸ್ಮಾರ್ಟ್‌ಟಿವಿಯಲ್ಲಿ ಯೂಟ್ಯೂಬ್‌ ಶಾರ್ಟ್ಸ್‌ ವಿಡಿಯೋ (Shorts) ವೀಕ್ಷಣೆ ಮಾಡಬಹುದಾಗಿದೆ.

ಯೂಟ್ಯೂಬ್

ಹೌದು, ಇನ್ಮುಂದೆ ಯೂಟ್ಯೂಬ್ ನ ಶಾರ್ಟ್ಸ್‌ ವಿಡಿಯೋಗಳನ್ನು ಸ್ಮಾರ್ಟ್‌ಟಿವಿಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ. 2019 ಮತ್ತು ಇದರ ನಂತರ ಲಾಂಚ್‌ ಆಗಿರುವ ಸ್ಮಾರ್ಟ್ ಟಿವಿ ವೇರಿಯಂಟ್‌ಗಳಲ್ಲಿ ಮಾತ್ರ ಈ ಫೀಚರ್ಸ್‌ ಬೆಂಬಲ ನೀಡಲಿದೆ. ಈ ಮೂಲಕ 60 ಸೆಕೆಂಡುಗಳು ಅಥವಾ ಇದಕ್ಕೂ ಕಡಿಮೆ ಇರುವ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಶಾರ್ಟ್ಸ್

ಇನ್ನು ಯಾವುದೇ ಶಾರ್ಟ್ಸ್ ವಿಡಿಯೋಗಳು ಸಾಮಾನ್ಯವಾಗಿ ಅದರಲ್ಲೂ ಸ್ಮಾರ್ಟ್‌ಫೋನ್‌ ಕೇಂದ್ರಿತವಾಗಿ ವರ್ಟಿಕಲ್ ಫಾರ್ಮೆಟ್‌ನಲ್ಲಿ ಪ್ಲೇ ಆಗುತ್ತವೆ. ಆದರೆ, ಟಿವಿಗಳನ್ನು ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ವೀಕ್ಷಿಸಲಾಗುವುದರಿಂದ ಈ ವಿಡಿಯೋಗಳ ಎರಡೂ ಬದಿಯಲ್ಲಿ ಖಾಲಿಜಾಗ ಇರುತ್ತದೆ. ಈ ಬಗ್ಗೆ ಅರಿತ ಗೂಗಲ್ ಇದಕ್ಕೂ ಸಹ ಹೊಸತನ ನೀಡಿದೆ.

 ಶಾರ್ಟ್ಸ್‌ ವಿಡಿಯೋ

ಟಿವಿಯಲ್ಲಿ ಶಾರ್ಟ್ಸ್‌ ವಿಡಿಯೋ ಪ್ಲೇ ಮಾಡಿದಾಗ ವಿಡಿಯೋ ಸುತ್ತಲೂ ಬಿಳಿ ಬಣ್ಣದ ಬಾರ್ಡರ್‌ ಇರಲಿದ್ದು, ವಿಡಿಯೋ ಕ್ಲಿಪ್‌ನ ಪ್ರಮುಖ ಬಣ್ಣವನ್ನು ಆಧರಿಸಿ ಖಾಲಿ ಜಾಗದಲ್ಲಿ ಆಕರ್ಷಕ ಬಣ್ಣವು ಡಿಸ್‌ಪ್ಲೇ ಆಗುವಂತೆ ಮಾಡಲಾಗಿದೆ. ಇದಿಷ್ಟೇ ಅಲ್ಲದೆ ಶಾರ್ಟ್ಸ್‌ ವಿಡಿಯೋ ಬಲಭಾಗದಲ್ಲಿ ವಿಡಿಯೋಗೆ ಸಂಬಂಧಿಸಿದ ಶೀರ್ಷಿಕೆ, ಕ್ರಿಯೇಟರ್ಸ್‌ ವಿವರ ಹಾಗೂ ಯಾವ ಸಾಂಗ್‌ ಅಥವಾ ಯಾವ ಆಡಿಯೋವನ್ನು ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ವಿವರ ಕಾಣಿಸಿಕೊಳ್ಳುತ್ತದೆ.

ವಿನ್ಯಾಸ

ಇಂದು ಪರಿಚಯಿಸಲಾಗುತ್ತಿರುವ ವಿನ್ಯಾಸದಲ್ಲಿ ನಾವು ಬಲಭಾಗಲ್ಲಿನ ವಿನ್ಯಾಸವನ್ನು ಸರಳಗೊಳಿಸಿದ್ದೇವೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಫೀಚರ್ಸ್‌ ಅನ್ನು ಸಹ ತರುತ್ತೇವೆ. ಈ ಹೊಸ ಅನುಭವ ಶಾರ್ಟ್ಸ್‌ ವಿಡಿಯೋಗಳಲ್ಲಿನ ಮೋಜು, ಚಮತ್ಕಾರವನ್ನು ಸ್ಮಾರ್ಟ್‌ಟಿವಿಯಲ್ಲಿ ಸಹಜವಾಗಿ ಭಾವಿಸುವ ರೀತಿಯಲ್ಲಿ ಸಮತೋಲನಗೊಳಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು UX ನಿರ್ದೇಶಕರಾದ ಬ್ರೈನ್ ಇವಾನ್ಸ್ ಮತ್ತು ಮೆಲಾನಿ ಫಿಟ್ಜ್‌ಗೆರಾಲ್ಡ್ ಅವರು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಫೀಚರ್ಸ್‌ ಅನಾವರಣ

ಅಂತಿಮವಾಗಿ ಈ ಫೀಚರ್ಸ್‌ ಅನಾವರಣ ಆಗುವ ಮೊದಲ ಜೂಕ್‌ಬಾಕ್ಸ್(Jukebox) ಒಳಗೊಂಡಂತೆ ವಿವಿಧ UI ನಲ್ಲಿ ಇದನ್ನು ಪರೀಕ್ಷಿಸಲಾಗಿದೆ. ಅಲ್ಲಿ ಹಲವು ಶಾರ್ಟ್ಸ್‌ ವಿಡಿಯೋಗಳು ಡಿಸ್‌ಪ್ಲೇ ಯನ್ನು ಆವರಿಸಿದ್ದವಂತೆ. ಹಾಗೆಯೇ ಪ್ರಮುಖ ಶಾರ್ಟ್ ವಿಡಿಯೋ ಡಿಸ್‌ಪ್ಲೇ ಮಧ್ಯದಲ್ಲಿ ಪ್ಲೇ ಆಗಲಿದ್ದು, ಹಿಂದಿನ ಮತ್ತು ಮುಂದಿನ ಶಾರ್ಟ್ಸ್‌ ವಿಡಿಯೋಗಳು ಕ್ರಮವಾಗಿ ಎಡ ಮತ್ತು ಬಲಭಾಗದಲ್ಲಿ ಕಾಣಿಸಿಕೊಳ್ಳಲಿವೆ ಎಂಬ ಬಗ್ಗೆ ಯೂಟ್ಯೂಬ್‌ ತಿಳಿಸಿದೆ.

ಟಿವಿಯಲ್ಲಿ ಈ ವಿಡಿಯೋಗಳನ್ನು ವೀಕ್ಷಿಸುವುದು ಹೇಗೆ?

ಟಿವಿಯಲ್ಲಿ ಈ ವಿಡಿಯೋಗಳನ್ನು ವೀಕ್ಷಿಸುವುದು ಹೇಗೆ?

ದೊಡ್ಡ ಪರದೆಯಲ್ಲಿ ನೀವು ಶಾರ್ಟ್‌ವಿಡಿಯೋ ವೀಕ್ಷಿಸಲು ಮುಂದಾದರೆ ಅದಕ್ಕೆ ಹಲವಾರು ಡಿವೈಸ್‌ಗಳು ಲಭ್ಯ ಇವೆ. ಅದರಲ್ಲೂ ಪ್ರಮುಖವಾಗಿ ಸ್ಮಾರ್ಟ್ ಟಿವಿ, ಗೇಮಿಂಗ್ ಕನ್ಸೋಲ್ ಹಾಗೂ ಇನ್ನಿತರೆ ಸ್ಟ್ರೀಮಿಂಗ್ ಡಿವೈಸ್‌ಗಳಿವೆ. ಇದೆಲ್ಲಕ್ಕಿಂತ ಮಿಗಿಲಾಗಿ 2019 ಕ್ಕೂ ಮೊದಲು ಅನಾವರಣಗೊಂಡ ಡಿವೈಸ್‌ಗಳಲ್ಲಿ ಈ ಫೀಚರ್ಸ್ ಬೆಂಬಲ ನೀಡುವುದಿಲ್ಲ. ಹೀಗಾಗಿ ಮೊದಲು ನಿಮ್ಮ ಸ್ಮಾರ್ಟ್‌ ಟಿವಿ ಹಾಗೂ ಇತರೆ ದೊಡ್ಡ ಡಿವೈಸ್‌ಗಳು 2019ರ ನಂತರ ಬಿಡುಗಡೆಗೊಂಡಿರುವವೇ ಎಂಬುದನ್ನು ತಿಳಿದುಕೊಳ್ಳಿ.

ಟಿವಿ

ಇನ್ನು ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಯೂಟ್ಯೂಬ್‌ ಅಪ್ಲಿಕೇಶನ್ ಓಪನ್‌ ಮಾಡಿ ನಂತರ 'ಶಾರ್ಟ್ಸ್ ಶೆಲ್ಫ್‌' ವಿಭಾಗವನ್ನು ಗಮನಿಸಿ. ಇದಾದ ಬಳಿಕ ಅಲ್ಲಿ ಶಾರ್ಟ್ಸ್‌ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಬೇಕಾದ ವಿಡಿಯೋ ಮೇಲೆ ನಿಮ್ಮ ಸ್ಮಾರ್ಟ್‌ ರಿಮೋಟ್‌ ಮೂಲಕ ಕ್ಲಿಕ್‌ ಮಾಡಿ ವೀಕ್ಷಣೆ ಮಾಡಬಹುದು.

ಕ್ರಿಯೇಟರ್ಸ್‌

ಹಾಗೆಯೇ ಕ್ರಿಯೇಟರ್ಸ್‌ ಪ್ರೊಫೈಲ್‌ಗೆ ತೆರಳಿ ನೆರವಾಗಿ ವಿಡಿಯೋ ವೀಕ್ಷಿಸುವ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ನಿಮಗೆ ಇಷ್ಟವಾದ ಕ್ರಿಯೇಟರ್ಸ್ ಪ್ರೊಫೈಲ್‌ ಮೇಲೆ ಕ್ಲಿಕ್‌ ಮಾಡಿ, ನಂತರ ಶಾರ್ಟ್ಸ್‌ ವಿಡಿಯೋ ವಿಭಾಗಕ್ಕೆ ತೆರಳಲು ಅಲ್ಲಿ ಕಾಣಿಸಿಕೊಳ್ಳುವ 'ಶಾರ್ಟ್ಸ್‌ ಶೆಲ್ಫ್‌' ಮೇಲೆ ಕ್ಲಿಕ್‌ ಮಾಡಿದರೆ ಅವರ ಎಲ್ಲಾ ಶಾರ್ಟ್ಸ್‌ ವಿಡಿಯೋಗಳು ಓಪನ್‌ ಆಗುತ್ತವೆ.

Best Mobiles in India

English summary
YouTube has a lot of updating process going on. Meanwhile, YouTube has now made it possible to watch short videos on the TV

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X