Home
ಸುದ್ದಿಜಾಲ

ಭಾರತೀಯರಿಗೆ ಯೂಟ್ಯೂಬ್ ಅಂದ್ರೆ ಬಹಳ ಪ್ರೀತಿ: 93% ಜನ ಈ ವಿಷಯಕ್ಕಾಗಿ ಜಾಲಾಡುತ್ತಾರೆ!

ಸಾಮಾನ್ಯವಾಗಿ ಮನರಂಜನೆ ಹಾಗೂ ಇನ್ನಿತರೆ ವಿಷಯಕ್ಕೆ ಅತ್ಯಂತ ಸುಲಭವಾಗಿ ನಮಗೆಲ್ಲಾ ದಕ್ಕುವುದು ಯೂಟ್ಯೂಬ್‌. ಇತ್ತೀಚೆಗಂತೂ ನಿತ್ಯವೂ ಯೂಟ್ಯಬ್‌ನಲ್ಲಿ ಕೆಲವು ವಿಡಿಯೋಗಳನ್ನು ವೀಕ್ಷಣೆ ಮಾಡದೆ ಮುಂದಿನ ಕೆಲಸವನ್ನೇ ಮಾಡದ ಅದೆಷ್ಟೋ ಮಂದಿಯನ್ನು ಕಾಣಬಹುದು. ಈ ಕಾರಣಕ್ಕಾಗಿಯೇ ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಭಾರತೀಯ ಭಾಷೆಯ ಡಿಜಿಟಲ್ ಸುದ್ದಿ ಗ್ರಾಹಕರಿಗೆ ಅತ್ಯಂತ ಜನಪ್ರಿಯ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿದೆ.

ಹೌದು, ಗೂಗಲ್ ಒಡೆತನದ ಯೂಟ್ಯೂಬ್ ಭಾರತೀಯ ಭಾಷೆಯ ಡಿಜಿಟಲ್ ಸುದ್ದಿ ಗ್ರಾಹಕರಿಗೆ ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು, ಶೇ.93ರಷ್ಟು ಜನರು ಸುದ್ದಿಗಳಿಗಾಗಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಕೆಟಿಂಗ್ ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿ ಕಾಂತಾರ್ ಜೊತೆಗಿನ ಪಾಲುದಾರಿಕೆಯಲ್ಲಿ ಗೂಗಲ್‌ ನ್ಯೂಸ್‌ನ ಉಪಕ್ರಮ ಇದಾಗಿದ್ದು, ದೇಶದಲ್ಲಿ ಆನ್‌ಲೈನ್ ಭಾರತೀಯ ಭಾಷಾಸುದ್ದಿ ಗ್ರಾಹಕರ ನಿರ್ದಿಷ್ಟ ಸುದ್ದಿ ವಿಷಯ ಬಳಕೆಯ ಆದ್ಯತೆಗಳು ಮತ್ತು ನಡವಳಿಕೆಗಳನ್ನು ಇದು ಕಂಡುಕೊಂಡಿದೆ. ಹಾಗಿದ್ರೆ, ಬನ್ನಿ ಇದರ ವಿವರ ತಿಳಿಯೋಣ.

ಭಾರತೀಯರಿಗೆ ಯೂಟ್ಯೂಬ್ ಅಂದ್ರೆ ಬಹಳ ಪ್ರೀತಿ:93% ಜನ ಈ ವಿಷಯಕ್ಕಾಗಿ ಜಾಲಾಡುತ್ತಾರೆ

ಭಾರತೀಯ ಭಾಷಾ ಗ್ರಾಹಕರು ಆನ್‌ಲೈನ್‌ನಲ್ಲಿ ಸುದ್ದಿ ಪಡೆಯಲು ಸರಾಸರಿ 5.05ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ ಎಂದು ಈ ಮೂಲಕ ತಿಳಿದುಬಂದಿದ್ದು, ಇದರ ನಡುವೆ ಸುದ್ದಿಯನ್ನು ಪ್ರವೇಶಿಸಲು ಯೂಟ್ಯೂಬ್ ಅತ್ಯಂತ ಜನಪ್ರಿಯ ಮಾರ್ಗವಾಗಿ ಹೊರಹೊಮ್ಮಿದೆ. ಇದಾದ ನಂತರ ಸಾಮಾಜಿಕ ಮಾಧ್ಯಮ 88%ಮತ್ತು ಚಾಟ್ ಅಪ್ಲಿಕೇಶನ್‌ಗಳು 82%ಇದ್ದು, 45% ಭಾರತೀಯ ಭಾಷೆಗಳಲ್ಲಿ ಸುದ್ದಿ ಪ್ರಕಾಶಕರ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳ ಮೂಲಕ ಸುದ್ದಿಯನ್ನು ವೀಕ್ಷಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೊತೆಗೆ ಮನರಂಜನೆ, ಅಪರಾಧ ಮತ್ತು ರಾಷ್ಟ್ರೀಯ ಅಥವಾ ರಾಜ್ಯ ಅಥವಾ ನಗರ ಮುಖ್ಯಾಂಶಗಳು ಪ್ರಮುಖ ಸುದ್ದಿ ಪ್ರಕಾರಗಳು ಓದುಗರು ಆದ್ಯತೆ ನೀಡುತ್ತವೆ.ಅದರಲ್ಲಿ ಮಲಯಾಳಂ ಸುದ್ದಿ ಓದುಗರು ಅಂತಾರಾಷ್ಟ್ರೀಯ ಸುದ್ದಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ,ಬಂಗಾಳಿಗರು ಕ್ರೀಡಾ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಹಾಗೆಯೇ ಜನರು ಡಿಜಿಟಲ್ ಸುದ್ದಿಗಳನ್ನು ಇಂಗ್ಲಿಷ್‌ನಲ್ಲಿ ಓದಲು ದೇಶದ ಸಾಂಪ್ರದಾಯಿಕ ಪ್ರಮುಖ ಸುದ್ದಿ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಬಳಕೆ ಮಾಡುತ್ತಾರೆ ಎನ್ನುವ ಅಂಶವೂ ಬಹಿರಂಗವಾಗಿದೆ.

ಭಾರತೀಯರಿಗೆ ಯೂಟ್ಯೂಬ್ ಅಂದ್ರೆ ಬಹಳ ಪ್ರೀತಿ:93% ಜನ ಈ ವಿಷಯಕ್ಕಾಗಿ ಜಾಲಾಡುತ್ತಾರೆ
ಇದರಲ್ಲಿ ಕಂಡುಬಂದ ಫಲಿತಾಂಶದ ಪ್ರಕಾರ ಜನರು ದೇಶಾದ್ಯಂತ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ ಮತ್ತು ಹಿಂದಿ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಡಿಜಿಟಲ್ ಸುದ್ದಿಗಳನ್ನು ಓದುತ್ತಿದ್ದಾರೆ ಎನ್ನಲಾಗಿದೆ. ಈ ವಿಭಾಗದಲ್ಲಿ ಶೇಕಡ 93% ರಷ್ಟು ಮಂದಿ ಸುದ್ದಿಗಾಗಿ ಯೂಟ್ಯೂಬ್ ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಯೂಟ್ಯೂಬ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇಂಗ್ಲಿಷ್ ಭಾಷೆಯ ಸುದ್ದಿ ಗ್ರಾಹಕನಿಗೆ ಹೋಲಿಸಿದರೆ ಭಾರತೀಯ ಭಾಷೆಯ ಸುದ್ದಿ ಗ್ರಾಹಕರಲ್ಲಿ ಸಾಂಪ್ರದಾಯಿಕವಾಗಿ ಸಂಕೀರ್ಣ ವಿಷಯದ ಹಸಿವು ಕಡಿಮೆ ಎಂದು ಪರಿಗಣಿಸಲಾಗಿದೆ. ಈ ಮೂಲಕ ಭಾಷಾ ಸುದ್ದಿ ಗ್ರಾಹಕರು ವಿಕಸನಗೊಂಡಿದ್ದಾರೆ. ಜೊತೆಗೆ ಡಿಜಿಟಲ್ ಪಾವತಿ ಮಾಡುವ ಇಚ್ಛೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ಪ್ರಕಾಶಕರು ಮತ್ತು ಜಾಹೀರಾತುದಾರರಿಗೆ ಅಗಾಧವಾದ ಅವಕಾಶಗಳನ್ನು ನೀಡಿದಂತೆ ಆಗುತ್ತಿದೆ ಎಂದು ಕಾಂತಾರ್ ನಿರ್ದೇಶಕ ಬಿಸ್ವಪ್ರಿಯಾ ಭಟ್ಟಾಚಾರ್ಯ ತಿಳಿಸಿದ್ದಾರೆ.

ಒಟ್ಟಾರೆ ಭಾಷಾ ಇಂಟರ್ನೆಟ್ ಬಳಕೆದಾರರಿಗೆ ಹೋಲಿಸಿದರೆ ಡಿಜಿಟಲ್ ಸುದ್ದಿ ಓದುಗರು ಹೆಚ್ಚು ವಿಕಸನಗೊಂಡಿದ್ದಾರೆ ಎಂದು ಕಂಡುಕೊಳ್ಳಲಾಗಿದೆ. ಜೊತೆಗೆ ಈ ವೇಳೆ ಆನ್‌ಲೈನ್ ವಹಿವಾಟುಗಳಿಗೂ ಹೆಚ್ಚಿನ ಒಲವನ್ನು ತೋರಲಾಗಿದೆ. ಈ ಮೂಲಕ ಏಳು ಬಳಕೆದಾರರಲ್ಲಿ ಒಬ್ಬರು ಆನ್‌ಲೈನ್‌ನಲ್ಲಿ ಸುದ್ದಿಗಾಗಿ ಪಾವತಿಸುತ್ತಿದ್ದಾರಂತೆ. ಹೀಗಾಗಿ ವೆಬ್‌ಸೈಟ್‌ಗಳು ಹಾಗೂ ಆಪ್‌ಗಳಲ್ಲಿ ಸುದ್ದಿಯನ್ನು ಓದುವ ಬಳಕೆದಾರರಲ್ಲಿ ಈ ಅಂಕಿ ಅಂಶವು 1.5 ಪಟ್ಟು ಹೆಚ್ಚಾಗಿದೆ ಎಂದು ಕಂಡುಕೊಳ್ಳಲಾಗಿದೆ.

ಭಾರತೀಯರಿಗೆ ಯೂಟ್ಯೂಬ್ ಅಂದ್ರೆ ಬಹಳ ಪ್ರೀತಿ:93% ಜನ ಈ ವಿಷಯಕ್ಕಾಗಿ ಜಾಲಾಡುತ್ತಾರೆ

ಡಿಜಿಟಲ್ ಸುದ್ದಿ ಪ್ರಕಾಶಕರು ಸೇರಿದಂತೆ ಇತರೆ ಕಂಟೆಂಟ್‌ ವ್ಯವಹಾರಗಳು, ಭಾರತೀಯ ಭಾಷಾ ಡಿಜಿಟಲ್ ಸುದ್ದಿ ಗ್ರಾಹಕರ ವಿಕಸನಗೊಂಡ ಮತ್ತು ಶ್ರೀಮಂತ ಸಮೂಹದೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳುವ ಮೂಲಕ ಹೊಸ ಬೆಳವಣಿಗೆಯ ಮಾರ್ಗಗಳನ್ನು ಅನ್‌ಲಾಕ್‌ ಮಾಡುವ ಸಾಮರ್ಥ್ಯವನ್ನು ಪಡೆದಿದ್ದಾರೆ ಎಂದು ಗೂಗಲ್ ಇಂಡಿಯಾದ ಉಪಾಧ್ಯಕ್ಷ ಸಂಜಯ್ ಗುಪ್ತಾ ಹೇಳಿದ್ದಾರೆ.

ಈ ಅಧ್ಯಯನಕ್ಕಾಗಿ 16 ನಗರಗಳಲ್ಲಿ 64 ಕ್ಕೂ ಹೆಚ್ಚು ಗುಣಾತ್ಮಕ ಚರ್ಚೆಗಳನ್ನು ನಡೆಸಲಾಗಿದೆ. ಜೊತೆಗೆ ನವೆಂಬರ್ 2022 ರಿಂದ ಮಾರ್ಚ್ 2023 ರವರೆಗೆ 14 ರಾಜ್ಯಗಳಾದ್ಯಂತ 43 ನಗರ ನಗರಗಳಲ್ಲಿ 4,600 ಕ್ಕೂ ಹೆಚ್ಚು ವೈಯಕ್ತಿಕ ಸಂದರ್ಶನಗಳನ್ನು ನಡೆಸಲಾಗಿದ್ದು, ಈ ವಿಭಾಗದಲ್ಲಿ ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳ ಜನರನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಇನ್ನು ವಿಶ್ವಾದ್ಯಂತ 250 ಮಿಲಿಯನ್‌ಗಿಂತಲೂ ಹೆಚ್ಚು ಜನರು ಯೂಟ್ಯೂಬ್‌ ಬಳಕೆದಾರರಿದ್ದಾರೆ. ಯೂಟ್ಯೂಬ್‌ ನಲ್ಲಿ ಶತಕೋಟಿ ವಿಡಿಯೋಗಳಿದ್ದು, ನೀವೇನಾದರೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರೆ, ಯೂಟ್ಯೂಬ್‌ ನಲ್ಲಿ ಡ್ರಾಯಿಂಗ್ ಕಲಾವಿದರು ಪೋಸ್ಟ್ ಮಾಡಿದ ವಿಡಿಯೋಗಳನ್ನು ನೋಡುವ ಮೂಲಕ ಕಲಿಯಬಹುದು. ಹಾಗೆಯೇ ರುಚಿಕರವಾದ ಅಡುಗೆ ಮಾಡಲು ಇಚ್ಚೆ ಪಟ್ಟರೆ ಅದಕ್ಕೂ ಇಲ್ಲಿ ಅವಕಾಶ ಇದೆ.

ಈ ರೀತಿಯ ಸಾಮಾನ್ಯ ವಿಡಿಯೋಗಳಿಂದ ಆರಂಭಿಸಿ ವಿಜ್ಞಾನ, ಗಣಿತ, ತಂತ್ರಜ್ಞಾನ, ಕ್ರೀಡೆ, ಸಿನಿಮಾ ಸಂಬಂಧಿತ ವಿಡಿಯೋಗಳು ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಲಭ್ಯವಿವೆ. ಇದರಿಂದಾಗಿ ಯೂಟ್ಯೂಬ್ ಚಂದಾದಾರರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೊದಲು ಮನರಂಜನೆಗಾಗಿ ಮಾತ್ರ ಬಳಸಲಾಗುತ್ತಿದ್ದ ಯೂಟ್ಯೂಬ್ ಈಗ ನಮ್ಮ ದೇಶದ ಲಕ್ಷಾಂತರ ಯೂಟ್ಯೂಬರ್‌ಗಳಿಗೆ ಮಾಸಿಕ ಸಂಬಳದ ಉದ್ಯೋಗ ಸಂಸ್ಥೆಯಾಗಿಯೂ ಹೊರಹೊಮ್ಮಿದೆ.

Best Mobiles in India

English summary
Google-owned YouTube is the most popular platform for Indian-language digital news consumers, with 93 percent of people using it for news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+