Youtube ನಲ್ಲಿ ಇನ್ಮುಂದೆ ಹಣಗಳಿಕೆ ಭಾರೀ ಸುಲಭ: ಅದೇಗೆ ಅಂತೀರಾ!?
ಯೂಟ್ಯೂಬ್ (Youtube) ಇಂದು ಅಗತ್ಯ ಹಾಗೂ ತುಂಬಾ ಜನಪ್ರಿಯ ಪ್ಲಾಟ್‌ಫಾರ್ಮ್ ಆಗಿದ್ದು, ಈ ಮೂಲಕ ಹಲವರು ಜನರು ಮಾಹಿತಿ ಹಾಗೂ ಮನರಂಜನೆ ಪಡೆದುಕೊಳ್ಳುವುದರ ಜೊತೆಗೆ ಇನ್ನೂ ಹಲವರು ಹಣ ಕೂಡ ಸಂಪಾದನೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ನಡುವೆ ಯೂಟ್ಯೂಬ್ ಮೂಲಕ ಹಣ ಸಂಪಾದನೆ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು, ಯೂಟ್ಯೂಬ್ ಪ್ಲಾಟ್‌ಫಾರ್ಮ್ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ತಮ್ಮ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು ಹಲವು ಅನುಕೂಲ ಮಾಡಿಕೊಟ್ಟಿದೆ. ಈ ನಡುವೆ ಯೂಟ್ಯೂಬ್ ಪಾಲುದಾರ ಕಾರ್ಯಕ್ರಮಕ್ಕೆ (YPP) ಅರ್ಹತಾ ನಿರ್ಬಂಧಗಳನ್ನು ಸಡಿಸಲಾಗೊಳಿಸಲಾಗುವುದು ಎಂದು ಯೂಟ್ಯೂಬ್ ತಿಳಿಸಿದೆ. ಹಾಗಿದ್ರೆ, ಈ ಹೊಸ ನಿಯಮದಿಂದ ಕ್ರಿಯೇಟರ್ಸ್‌ಗೆ ಏನೆಲ್ಲಾ ಲಾಭ, ಇದರಿಂದ ಹಣಗಳಿಕೆ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

ಯೂಟ್ಯೂಬ್‌ನ ಹಣಗಳಿಕೆಯ ಹೊಸ ನಿಯಮಗಳೇನು?: ಯೂಟ್ಯೂಬ್‌ನ ಹಣಗಳಿಕೆ (Monetisation) ವಿಚಾರದಲ್ಲಿ ಈ ಕೆಲವು ಮಾನದಂಡಗಳನ್ನು ಪೂರೈಸಿದ್ರೆ ಕೆಲವೇ ದಿನಗಳಲ್ಲಿ ಹಣ ಮಾಡಬಹುದಾಗಿದೆ. ಮೊದಲನೆಯದಾಗಿ ಯೂಟ್ಯೂಬ್ ಕ್ರಿಯೇಟರ್ಸ್ 500 ಚಂದಾದಾರರನ್ನು ಹೊಂದಿರಬೇಕು. ಎರಡನೆಯದಾಗಿ ಕಳೆದ 90 ದಿನಗಳಲ್ಲಿ ಮೂರು ಅಥವಾ ಹೆಚ್ಚಿನ ಸಾರ್ವಜನಿಕ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರಬೇಕು. ಹಾಗೂ ಮೂರನೇ ಪ್ರಮುಖ ಮಾನದಂಡವಾಗಿ ಕಳೆದ ವರ್ಷದಲ್ಲಿ 3,000 ವೀಕ್ಷಣೆ ಗಂಟೆಗಳು ಅಥವಾ ಕಳೆದ 90 ದಿನಗಳಲ್ಲಿ 3ಮಿಲಿಯನ್ ಶಾರ್ಟ್ಸ್ ವೀಕ್ಷಣೆಗಳನ್ನು ಪೂರ್ಣಗೊಳಿಸಿರಬೇಕು.
ಹಣ ಗಳಿಸಲು ಇದು ಭಾರೀ ಸುಲಭ ಮಾರ್ಗ: ಈ ಸಣ್ಣ ಪ್ರಮಾಣದ ಮಾನದಂಡಗಳನ್ನು ಪೂರೈಸುವುದರ ಜೊತೆಗೆ ಕ್ರಿಯೇಟರ್ಸ್ ಯೂಟ್ಯೂಬ್ ಮೂಲಕ ಭಾರೀ ಹಣ ಸಂಪಾದನೆ ಮಾಡಬಹುದಾಗಿದೆ. ಯಾಕೆಂದರೆ ಹಿಂದಿನ ಮಾನದಂಡಗಳಿಗಿಂತ ಇದು ತೀರಾ ಸುಲಭವಾಗಿದೆ. ಈ ಹಿಂದೆ ಕನಿಷ್ಠ 1,000 ಚಂದಾದಾರರನ್ನು ಮತ್ತು 4,000 ವೀಕ್ಷಣೆ ಗಂಟೆಗಳನ್ನು ಅಥವಾ 90 ದಿನಗಳಲ್ಲಿ 10 ಮಿಲಿಯನ್ ಶಾರ್ಟ್ ವಿಡಿಯೋ ವೀಕ್ಷಣೆಗಳನ್ನು ಪಡೆದಿರಬೇಕಿತ್ತು. ಆದರೆ ಇದರ ಪ್ರಮಾಣ ಈಗ ಕಡಿಮೆ ಆಗಿದೆ.
ಇದು ಎಲ್ಲೆಲ್ಲಿ ಜಾರಿ?: ಯೂಟ್ಯೂಬ್‌ನ ಈ ಮಹತ್ವದ ಹೊಸ ಪ್ಲ್ಯಾನ್ ಮೊದಲು ಯುಎಸ್, ಯುಕೆ, ಕೆನಡಾ, ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಇದನ್ನು ಶೀಘ್ರದಲ್ಲೇ YPP ಯೊಂದಿಗೆ ಇತರ ದೇಶಗಳಿಗೆ ಪರಿಚಯಿಸಲಾಗುವುದು ಎಂದು ಯೂಟ್ಯೂಬ್ ಉಲ್ಲೇಖ ಮಾಡಲಾಗಿದೆ. ಆದರೆ, ಭಾರತದಲ್ಲಿ ಎಂದಿನಿಂದ ಜಾರಿಯಾಗುತ್ತದೆ ಎಂಬುದನ್ನು ನಿರೀಕ್ಷಿಸಬೇಕಿದೆ.
ಇನ್ನುಳಿದಂತೆ YPP ಮಾನದಂಡವು ಆದಾಯ ಹಂಚಿಕೆಗೆ ಅನ್ವಯಿಸುತ್ತದೆ ಎಂದು ಯೂಟ್ಯೂಬ್ ತಿಳಿಸಿದ್ದು, ಜಾಹೀರಾತು ಆದಾಯದಿಂದ ಲಾಭ ಪಡೆಯಲು ಸಣ್ಣ ಕ್ರಿಯೇಟರ್ಸ್ ತಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ನಡುವೆ ಈ ವರ್ಷದ ಫೆಬ್ರುವರಿಯಲ್ಲಿ ಯೂಟ್ಯೂಬ್ ಬ್ಯುಸಿನೆಸ್ ಕ್ರಿಯೇಟರ್ ಮ್ಯೂಸಿಕ್ ಅನ್ನು ಆರಂಭ ಮಾಡಿದೆ. ಇದೂ ಯುಎಸ್‌ನಲ್ಲಿ YPP ಯಲ್ಲಿ ಕ್ರಿಯೇಟರ್ಸ್ ತಮ್ಮ ವಿಡಿಯೋ ಮೂಲಕ ಹಣ ಗಳಿಸಲು ಅನುವು ಮಾಡಿಕೊಟ್ಟಿದೆ.
ಅದರಂತೆ ಇತ್ತೀಚಿನ ನಿಯಮಾವಳಿಗಳನ್ನು ಅನುಸರಿಸುವವರು ಹಣಗಳಿಕೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, YPP ಯ ಭಾಗವಾಗಬಹುದು. ಇದು ಸೂಪರ್ ಥ್ಯಾಂಕ್ಸ್, ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್‌ಗಳ ಮೂಲಕ ಟಿಪ್ಪಿಂಗ್ ಆಯ್ಕೆಗಳನ್ನು ಸಕ್ರಿಯಗೊಳಿಸುವಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿದೆ. ಅದರಂತೆ ಒಮ್ಮೆ ಕ್ರಿಯೇಟರ್ಸ್ ಹಣಗಳಿಕೆಗೆ ಅರ್ಜಿ ಸಲ್ಲಿಕೆ ಮಾಡಿದರೆ ಯೂಟ್ಯೂಬ್ ಒಂದು ತಿಂಗಳೊಳಗೆ ಚಾನಲ್ ಅನ್ನು ಪರಿಶೀಲಿಸುತ್ತದೆ.
ಈ ನಡುವೆ ಕೇಂದ್ರ ಸರ್ಕಾರ 2 ವರ್ಷಗಳಲ್ಲಿ 150ಕ್ಕೂ ಹೆಚ್ಚು ಭಾರತ ವಿರೋಧಿ ಚಾನಲ್‌ಗಳನ್ನು ಯೂಟ್ಯೂಬ್‌ನಿಂದ ಬ್ಯಾನ್ ಮಾಡಿದೆ ಎಂಬ ವರದಿ ಸಹ ಲಭ್ಯವಾಗಿದೆ. ಭಾರತದಲ್ಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮೇ 2021 ರಿಂದ ಇಲ್ಲಿಯವರೆಗೆ 150 ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳನ್ನು ಪತ್ತೆ ಮಾಡಿ ಈ ಕ್ರಮ ಜರುಗಿಸಿದೆ.


Click it and Unblock the Notifications








