Home
ಸುದ್ದಿಜಾಲ

ಯೂಟ್ಯೂಬ್‌ನಲ್ಲಿ ಹಾಡು ಕೇಳುವವರಿಗೆ ಗುಡ್‌ನ್ಯೂಸ್! ಏನದು ಗೊತ್ತಾ!?

ಯಾವುದೇ ಮಾಹಿತಿ ಮನರಂಜನೆಗೆ ತಕ್ಷಣ ಯೂಟ್ಯೂಬ್‌ ಆಪ್‌ ಅನ್ನು ಓಪನ್‌ ಮಾಡಲಾಗುತ್ತದೆ. ಅದರಲ್ಲೂ ಕೆಲವರು ಸಂಚಾರ ಮಾಡುವಾಗ ಅಥವಾ ವಿಶ್ರಾಂತಿ ತೆಗೆದುಕೊಳ್ಳುವಾಗ ಯೂಟ್ಯೂಬ್‌ನಲ್ಲಿ ಸಂಗೀತ ಆಲಿಸುವುದು ಅಭ್ಯಾಸ. ಈ ನಡುವೆ ಯೂಟ್ಯೂಬ್ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ.

ಹೌದು, ಪ್ರಮುಖ ವಿಡಿಯೋ ಸ್ಟ್ರೀಮಿಂಗ್ ಆಪ್‌ ಆಗಿರುವ ಯೂಟ್ಯೂಬ್‌ನ ಮ್ಯೂಸಿಕ್‌ ವಿಭಾಗದಲ್ಲಿ ಬಳಕೆದಾರರು ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ. ಅಂದರೆ, ನೀವು ಪ್ಲೇ ಮಾಡಿದ್ದ ಹಾಡುಗಳು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡುತ್ತದೆ?, ಯಾವ ಬಳಕೆದಾರರಿಗೆ ಇದು ಲಭ್ಯ? ಜೊತೆಗೆ ಇದು ಸ್ಮಾರ್ಟ್‌ ಡೌನ್‌ಲೋಡ್‌ಗಿಂತ ಹೇಗೆ ಭಿನ್ನ ಎಂಬ ವಿವರವನ್ನು ತಿಳಿಸಿಕೊಟ್ಟಿದ್ದೇವೆ ಓದಿರಿ.

ಯೂಟ್ಯೂಬ್‌ನಲ್ಲಿ ಹಾಡು ಕೇಳುವವರಿಗೆ ಗುಡ್‌ನ್ಯೂಸ್! ಏನದು ಗೊತ್ತಾ!?

ಯೂಟ್ಯೂಬ್ ಮ್ಯೂಸಿಕ್ ನಲ್ಲಿ ಹೊಸ ಸೌಲಭ್ಯ : ಯೂಟ್ಯೂಬ್ ಮ್ಯೂಸಿಕ್ ವಿಭಾಗದಲ್ಲಿ ಈ ಹೊಸ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು, ಈ ಮೂಲಕ ಬಳಕೆದಾರರು ಇತ್ತೀಚೆಗೆ ಪ್ಲೇ ಮಾಡಿದ ಹಾಡುಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್‌ ಆಗುತ್ತವೆ. ಇದನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದ್ದು, ಇದು ಸಂಗೀತ ಪ್ರಿಯರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಎಷ್ಟು ಹಾಡುಗಳನ್ನು ಡೌನ್‌ಲೋಡ್ ಮಾಡಲಾಗುತ್ತದೆ?: ಈ ಹೊಸ ಫೀಚರ್ಸ್‌ನಲ್ಲಿ ನೀವು ಆಲಿಸಿರುವ ಅಥವಾ ಇತ್ತೀಚೆಗೆ ಪ್ಲೇ ಮಾಡಲಾದ 200 ಕ್ಕೂ ಹೆಚ್ಚು ಹಾಡುಗಳನ್ನು ಆಟೋಮ್ಯಾಟಿಕ್‌ ಆಗಿ ಡೌನ್‌ಲೋಡ್‌ ಮಾಡಲಾಗುತ್ತದೆ. ಹಾಗೆಯೇ ಲೈಬ್ರರಿ ಟ್ಯಾಬ್‌ನಲ್ಲಿ ಇತ್ತೀಚೆಗೆ ಪ್ಲೇ ಮಾಡಿದ ಹಾಡುಗಳಿಗೆ ಪ್ರತ್ಯೇಕ ಪ್ಲೇಪಟ್ಟಿ ಇಲ್ಲ ಎಂಬುದನ್ನು ನೀವು ಗಮನಿಸಬೇಕಿದೆ.

ಡೌನ್‌ಲೋಡ್ ಮಾಡಲಾದ ಹಾಡುಗಳು ಎಲ್ಲಿರಲಿವೆ ?: ಈ ಫೀಚರ್ಸ್‌ ಅನ್ನು 9to5ಗೂಗಲ್‌ ಗುರುತಿಸಿದ್ದು, ಈ ಮೂಲಕ ಯೂಟ್ಯೂಬ್‌ ಬಳಕೆದಾರರು ಸೆಟ್ಟಿಂಗ್‌ ವಿಭಾಗಕ್ಕೆ ತಲುಪಿದರೆ ಅಲ್ಲಿ ಡೌನ್‌ಲೋಡ್‌ ಮತ್ತು ಸ್ಟೋರೇಜ್‌ ಮೆನು ಕೆಳಗೆ ಈ ಹಾಡುಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಇದು ಪ್ರೀಮಿಯಂ ಚಂದಾದಾರಿಕೆ ಹೊಂದಿರುವವರಿಗೆ ಲಭ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಯೂಟ್ಯೂಬ್‌ನಲ್ಲಿ ಹಾಡು ಕೇಳುವವರಿಗೆ ಗುಡ್‌ನ್ಯೂಸ್! ಏನದು ಗೊತ್ತಾ!?

ಇದರ ಹೊರತಾಗಿಯೂ ಶಾರ್ಟ್‌ಕಟ್‌ ಮಾರ್ಗದಲ್ಲಿ ಬಳಕೆದಾರರು ಹೋಮ್ ಸ್ಕ್ರೀನ್ ಐಕಾನ್ ಅನ್ನು ದೀರ್ಘಕಾಲ ಒತ್ತಿ ಹಿಡಿಯುವ ಮೂಲಕ ಡೌನ್‌ಲೋಡ್‌ ವಿಭಾಗಕ್ಕೆ ತಲುಪಬಹುದು. ಈ ರೀತಿಯಲ್ಲಿ ಮಾಡಿದಾಗ ಆಟೋಮ್ಯಾಟಿಕ್‌ ಆಗಿ ಡೌನ್‌ಲೋಡ್‌ ಆಗಿರುವ ಮ್ಯೂಸಿಕ್‌ ಫೈಲ್‌ಗಳ ವಿಭಾಗದಕ್ಕೆ ತಲುಪಬಹುದು ಎಂದು ವರದಿಯಿಂದ ತಿಳಿದುಬಂದಿದೆ.

ಈ ಫೀಚರ್ಸ್‌ ಅನ್ನು ಈ ಹಿಂದೆಯೇ ಘೋಷಣೆ ಮಾಡಿತ್ತು?: ಈ ಫೀಚರ್ಸ್‌ ಅನ್ನು ಯೂಟ್ಯೂಬ್‌ ಮ್ಯೂಸಿಕ್‌ ನಲ್ಲಿ ಹೊರತರಲಾಗುವುದು ಎಂದು ಈ ವರ್ಷದ ಜನವರಿ ಮಧ್ಯದಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಈಗ ಆಂಡ್ರಾಯ್ಡ್‌ ಬಳಕೆದಾರರಿಗೆ ಇದನ್ನು ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಐಓಎಸ್‌ ಬಳಕೆದಾರಿಗೂ ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಫೀಚರ್ಸ್‌ ಸ್ಮಾರ್ಟ್ ಡೌನ್‌ಲೋಡ್‌ಗಳಿಂತ ಹೇಗೆ ಭಿನ್ನ?: ಹೊಸ ಫೀಚರ್ಸ್ ಈಗಾಗಲೇ ಬಳಕೆಯಲ್ಲಿರುವ ಸ್ಮಾರ್ಟ್ ಡೌನ್‌ಲೋಡ್‌ಗಳಿಂದ ಭಿನ್ನವಾಗಿದ್ದು, ಇದು 500 ಹಾಡುಗಳವರೆಗೆ ಡೌನ್‌ಲೋಡ್‌ ಆಗುವ ಸಾಮರ್ಥ್ಯದ ಹೊಂದಿದೆ. ಹಾಗೆಯೇ ಇದರಲ್ಲಿ ಮೆಚ್ಚಿನ ಹಾಡುಗಳನ್ನು ಆಧರಿಸಿ ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುತ್ತವೆ. ಈ ಮೂಲಕ ಯೂಟ್ಯೂಬ್‌ ಪ್ರೀಮಿಯಂ ಸದಸ್ಯರು ಇಂಟರ್ನೆಟ್‌ ಸಂಪರ್ಕ ಇಲ್ಲದಿದ್ದರೂ ಸಹ ಸಂಗೀತ ಆಲಿಸಲು ಸಹಾಯಕವಾಗುತ್ತದೆ.

ಯೂಟ್ಯೂಬ್‌ನಲ್ಲಿ ಹಾಡು ಕೇಳುವವರಿಗೆ ಗುಡ್‌ನ್ಯೂಸ್! ಏನದು ಗೊತ್ತಾ!?

ಕ್ರಿಯೇಟ್‌ ರೇಡಿಯೋ ಫೀಚರ್ಸ್‌: ಈ ಹೊಸ ಫೀಚರ್ಸ್‌ನೊಂದಿಗೆ ಇತ್ತೀಚೆಗೆ ಯೂಟ್ಯೂಬ್‌ ಕ್ರಿಯೇಟ್‌ ರೇಡಿಯೋ ಬಗ್ಗೆಯೂ ಘೋಷಣೆ ಮಾಡಿದ್ದು, ಇದನ್ನು ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಕಲ್ಪಿಸಲಾಗಿದೆ. ಈ ಫೀಚರ್ಸ್‌ ಆಯ್ಕೆ ಮಾಡಿದ ಹಾಡು ಅಥವಾ ಕಲಾವಿದರ ಆಧಾರದ ಮೇಲೆ ವೈಯಕ್ತೀಕರಿಸಿದ ರೇಡಿಯೊ ಸ್ಟೇಷನ್ ರಚಿಸಲು ಇದು ಅನುವು ಮಾಡಿಕೊಡುತ್ತದೆ. ಇದೂ ಸಹ ಪ್ರೀಮಿಂ ಬಳಕೆದಾರರಿಗಷ್ಟೇ ಲಭ್ಯವಿದೆ.

Best Mobiles in India

English summary
YouTube Music has got a new feature that will enable to automatically download recently played songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+